ನ.13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ
ಎನ್.ಸಿ.ಡಿ ಮತ್ತು ಕೋವಿಡ್-19 ಉಚಿತ ತಪಾಸಣಾ ಶಿಬಿರ
ಕಡಬ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಕಡಬ, ದ.ಕ.ಜಿಲ್ಲಾ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಕಡಬ ಇವರ ಸಹಯೋಗದೊಂದಿಗೆ ಬೃಹತ್ ಎನ್.ಸಿ.ಡಿ (ಅಸಾಂಕ್ರಮಿಕ ರೋಗಗಳು) ಮತ್ತು ಕೋವಿಡ್-19 ತಪಾಸಣಾ ಶಿಬಿರ ನ.13ರಂದು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ, ಶಿಬಿರದಲ್ಲಿ ಬಿ.ಪಿ.ಶುಗರ್,ಕ್ಯಾನ್ಸರ್ ಮತ್ತು ಕೋವಿಡ್ ಪರೀಕ್ಷೆ ನಡೆಯಲಿದೆ ಎಂದು ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ತಿಳಿಸಿದ್ದಾರೆ.