HomePage_Banner
HomePage_Banner
HomePage_Banner

ಅಶೋಕ್ ಗಸ್ತಿಯವರ ಪತ್ನಿಗೆ ಹುದ್ದೆ ನೀಡುವಂತೆ ಸವಿತಾ ಸಮಾಜ ಆಗ್ರಹ | ನ.14ಕ್ಕೆ ಅಶೋಕ್ ಗಸ್ತಿ ಜನ್ಮದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ಮೃತಪಟ್ಟ ಸಂಸದರೂ, ರಾಜ್ಯಸಭಾ ಸದಸ್ಯರೂ ಆಗಿದ್ದ ಅಶೋಕ್ ಗಸ್ತಿಯವರ ಹುದ್ದೆಯನ್ನು ಅವರ ಪತ್ನಿಗೆ ನೀಡುವಂತೆ ಸವಿತಾ ಸಮಾಜ ಆಗ್ರಹಿಸಿದೆ. ಇದರ ಜೊತೆ ಅಶೋಕ್ ಗಸ್ತಿಯವರ ಜನ್ಮದಿನಾಚರಣೆ ಅಂಗವಾಗಿ ನ.14ರಂದು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ಮೂಲಕ ರಕ್ತದಾನ ಶಿಬಿರ ನಡೆಯಲಿದೆ ಎಂದು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ವೆಂಕಟೇಶ್ ಭಂಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಶೋಕ್ ಗಸ್ತಿಯವರು ಸಂಸದರಾಗಿದ್ದು, ರಾಜ್ಯಸಭಾ ಸದಸ್ಯರಾಗಿದ್ದು ಅವರ 56ನೇ ಜನ್ಮ ದಿನಾಚರಣೆ ಪ್ರಯುಕ್ತ ನಡೆಯುವ ರಕ್ತದಾನ ಶಿಬಿರವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಶಾಸಕರಿಗೆ ಮನವಿ:
ಅಶೋಕ್ ಗಸ್ತಿಯವರು ಮೃತ ಪಟ್ಟ ಹಿನ್ನೆಲೆಯಲ್ಲಿ ಅವರ ತೆರವಾದ ಸ್ಥಾನವನ್ನು ಅವರ ಪತ್ನಿಗೆ ನೀಡುವಂತೆ ಸಂಭಧಪಟ್ಟವರಿಗೆ ಶಿಫಾರಸ್ಸು ಮಾಡುವಂತೆ ಸವಿತಾ ಸಮಾಜದಿಂದ ಶಾಸಕರಿಗೆ ಮನವಿ ಮಾಡುವ ಕುರಿತು ನಿರ್ಣಯಿಸಲಾಗಿದ್ದು, ರಕ್ತದಾನ ಶಿಬಿರದ ದಿನ ಮನವಿಯನ್ನು ಶಾಸಕರಿಗೆ ನೀಡಲಾಗುವುದು ಎಂದು ವೆಂಕಟೇಶ್ ಭಂಡಾರಿ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜದ ಖಜಾಂಜಿ ಎಪಿಎಂಸಿ ರಸ್ತೆಯಲ್ಲಿರುವ ಸ್ಟಾರ್ ಮೆನ್ಸ್ ಪಾರ್ಲರ್‌ನ ಪ್ರವೀಣ್ ಭಂಡಾರಿ, ಜಿಲ್ಲಾ ಪ್ರತಿನಿಧಿಯಾಗಿರುವ ಮುರ ರಮೇಶ್ ಮೆನ್ಸ್‌ಪಾರ್ಲರ್‌ನ ರಮೇಶ್ ಭಂಡಾರಿ, ಸಂಘಟನಾ ಕಾರ್ಯದರ್ಶಿ ಶ್ರೀನಿಧಿ ಸೆಲೂನ್‌ನ ಹರೀಶ್ ಭಂಡಾರಿ ಉಪಸ್ಥಿತರಿದ್ದರು.

ವಿವಿಧ ಬೇಡಿಕೆ:
ಕಾರ್ಮಿಕ ಇಲಾಖೆಯ ಸೌಲಭ್ಯ ಕ್ಷೌರಿಕರಿಗೂ ಸಿಗಬೇಕು. ಈ ಕುರಿತು ಕಾರ್ಮಿಕರನ್ನಾಗಿ ಪರಿಗಣಿಸಿ ಸರಕಾರದ ಎಲ್ಲಾ ಸೌಲಭ್ಯ ಸಿಗಬೇಕೆಂದು ಮನವಿ ಮಾಡಲಾಗುವುದು. ಇದರ ಜೊತೆಗೆ ಒಳಮೀಸಲಾತಿಯಲ್ಲಿ ಕ್ಷೌರಿಕ ಸಮುದಾಯಕ್ಕೆ ಹೆಚ್ಚಿನ ಮಾನ್ಯತೆ ನೀಡುವಂತೆಯೂ ಸವಿತಾ ಸಮಾಜದ ಮೂಲಕ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ವೆಂಕಟೇಶ್ ಅವರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.