HomePage_Banner
HomePage_Banner
HomePage_Banner

ಕಬಕ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ರೂ. 308776 ಲಾಭ- ಸದಸ್ಯರಿಗೆ ಶೇ. 15 ಡಿವಿಡೆಂಡ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಬಕ ಹಾಲು ಉತ್ಪಾದಕರ ಸಹಕಾರ ಸಂಘವು 2019-20ನೇ ಸಾಲಿನಲ್ಲಿ ರೂ. 3,08,776 ಲಾಭ ಗಳಿಸಿದೆ. ಸಂಘವು ಗಳಿಸಿದ ವಾರ್ಷಿಕ ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತಿ ಲೀಟರ್‌ಗೆ 92 ಪೈಸೆ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷ ರವೀಂದ್ರ ಕೆ.ಪೋಳ್ಯರವರು ತಿಳಿಸಿದರು.


ಕಬಕ ಗ್ರಾ.ಪಂನ ಭಾರತ್ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನ.10ರಂದು ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಘೋಷಣೆ ಮಾಡಿದರು. ಸಂಘದ ವಾರ್ಷಿಕ ಲಾಭಾಂಶವನ್ನು ನಿಯಮಾವಳಿಯಂತೆ ವಿಂಗಡಣೆ ಮಾಡಲಾಗಿದೆ. ಹಾಲು ಉತ್ಪಾದಕರ ಬೋನಸ್‌ಗೆ ರೂ.೧,೪೭,೫೧೮ ಹಾಗೂ ಡಿವಿಡೆಂಡ್‌ಗೆ ರೂ.8343 ಮೀಸಲಿಡಲಾಗಿದೆ. ಸದಸ್ಯರು ತಮ್ಮಲ್ಲಿರುವ ಪ್ರತೀ ರಾಸು ಗಳಿಗೆ ಕಿವಿಯೋಲೆ ಹಾಕಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು.

ಮುಂದಿನ ಸಾಲಿಗೆ ಲೆಕ್ಕ ಪರಿಶೋಧನೆಗೆ ಸಹಕಾರಿ ಇಲಾಖೆಗೆ ಕೇಳಿಕೊಳ್ಳುವುದೆಂದು ನಿರ್ಣಯಿಸಲಾಯಿತು. ಆಂತರಿಕ ಲೆಕ್ಕಪರಿಶೋಧಕರಾಗಿ ಶಂಕರ ಭಟ್ ವಡ್ಯರವರನ್ನು ಆಯ್ಕೆ ಮಾಡಲಾಯಿತು.

ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ೫೦೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ಹೈನುಗಾರ ಮಕ್ಕಳಿಗೆ ನೀಡುವ ನಗದು ಪುರಸ್ಕಾರವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಅಡ್ಯಾಲು ಹೊನ್ನಪ್ಪ ಗೌಡರ ಪುತ್ರ ಕೌಶಿಕ್, ಮೂಡಕರೆ ರಮೇಶ್ ಭಟ್‌ರವರ ಪುತ್ರ ಸುಮಂತ ನಾರಾಯಣ, ಪಿಯು.ಸಿಯಲ್ಲಿ ಮೂವಳ ಸೀತಾರತ್ನರವರ ಪುತ್ರಿ ಲಿಖಿತ, ಅಡ್ಯಾಲು ಹೊನ್ನಪ್ಪ ಗೌಡರ ಪುತ್ರಿ ತೇಜಸ್ವಿರವರಿಗೆ ವಿತರಿಸಲಾಯಿತು. ಸಂಘದ ಕ್ಯಾಲೆಂಡರ್‌ನ ಪ್ರಾಯೋಜಕರಾಗಿ ಸಹಕರಿಸಿದ ಹಾರ್ದಿಕ್ ಎಲೆಕ್ಟ್ರಾನಿಕ್ಸ್‌ನ ಈಶ್ವರ ಪೂಜಾರಿ, ಇಂಡಿಯನ್ ಹೋಲ್‌ಸೇಲ್ ಟೈಲ್ಸ್‌ನ ಕಾರ್ತಿಕ್ ಹಾಗೂ ವರದಿ ವರ್ಷದಲ್ಲಿ ೨೦೧೯-೨೦ನೇ ಸಾಲಿನಲ್ಲಿ ಸಂಘಕ್ಕೆ ವರ್ಷ ಪೂರ್ತಿ ಹಾಲು ಹಾಕಿದ ಸದಸ್ಯರಾದ ರೆ. ಫಾ. ವಿಜಯ ಹಾರ್ವಿನ್, ನಾರಾಯಣ ಸಪಲ್ಯ ಕಬಕ, ಅಶೋಕ ಹನಿಯೂರು, ದೇವಕಿ ನೆಕ್ಕರೆ, ಸುಮಿತ್ರಾ ಕಟ್ನಾಜೆಯವರನ್ನು ಗೌರವಿಸಲಾಯಿತು. ಹಾಲು ಹಾಕಿದ ಸದಸ್ಯರಿಗೆ ಉಡುಗೊರೆ ನೀಡಲಾಯಿತು.

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ.ಯವರು ಲೆಕ್ಕ ಪರಿಶೋಧನ ವರದಿ ಮಂಡಿಸಿ ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷ ವಸಂತ ಗೌಡ ಮುಂಗ್ಲಿಮನೆ, ನಿರ್ದೇಶಕರಾದ ಶ್ಯಾಮ ಸುಂದರ ಕುವೆಹಿತ್ತಿಲು, ಅಬ್ದುಲ್ ಹಮೀದ್ ಕಳಮೆಮಜಲು, ಗುಲಾಬಿ ದೇವಸ್ಯ, ಸರಸ್ವತಿ ಹೊಸಳಿಕೆ, ಕುಸುಮಾ ಕಬಕ, ಹೊನ್ನಮ್ಮ ಯಾನೆ ವಿಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸ್ಥಾಪಕಾಧ್ಯಕ್ಷ ಉಮ್ಮರ್, ಕಬಕ ಗ್ರಾ. ಪಂ ಮಾಜಿ ಅಧ್ಯಕ್ಷ ಶಾಬಾ, ಸದಸ್ಯರಾದ ಬಾಲಕೃಷ್ಣ ಗೌಡ ಕಳಮೆಮಜಲು, ಮಾಲತಿ, ಸೀತಾರತ್ನ ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಗೀತಾ ಎಸ್. ಸ್ವಾಗತಿಸಿ, ವರದಿ ಮಂಡಿಸಿದರು. ಮಾಜಿ ಉಪಾಧ್ಯಕ್ಷ ವಿ. ಚಂದ್ರ ಶೇಖರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹಾಲು ಪರೀಕ್ಷಕಿ ಸುಶ್ಮಿತಾ ಮತ್ತಿತರರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.