HomePage_Banner
HomePage_Banner
HomePage_Banner

ನರೇಗಾ ಯೋಜನೆ: ಕಡಬ ತಾಲೂಕು ಗುರಿ ಮೀರಿದ ಸಾಧನೆ

Puttur_Advt_NewsUnder_1
Puttur_Advt_NewsUnder_1
  • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿಯಲ್ಲಿ ಜಿಲ್ಲೆಗೆ ಕಡಬ ತಾಲೂಕು ಪ್ರಥಮ


ಕಡಬ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2020-21ನೇ ಸಾಲಿನಲ್ಲಿ ಅತಿ ಹೆಚ್ಚು ಮಾನವ ದಿನಗಳ ಬಳಕೆ ಮತ್ತು ಅನುದಾನ ವಿನಿಯೋಗದಲ್ಲಿ ಕಡಬ ತಾಲೂಕು ಶೇ. 100ಕ್ಕಿಂತ ಹೆಚ್ಚು ಪ್ರಗತಿಯನ್ನು ಸಾಧಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ತಾಲೂಕಾಗಿ ಕಡಬ ಗುರುತಿಸಿಕೊಂಡಿದೆ.

ಕಡಬ ತಾಲೂಕು 21 ಗ್ರಾಮ ಪಂಚಾಯತ್‌ಗಳನ್ನು ಹೊಂದಿದ್ದು ಆರ್ಥಿಕ ವರ್ಷಕ್ಕೆ ಒಟ್ಟು ೧,೮೯,೬೦೯ ಮಾನವ ದಿನಗಳ ಗುರಿಯನ್ನು ಹೊಂದಿದ್ದು ಈಗಾಗಲೇ ೧,೪೨,೦೫೦ ರಷ್ಟನ್ನು ಅಕ್ಟೋಬರ್ ಮಾಸದಲ್ಲೇ ಪೂರ್ಣಗೊಳಿಸಿದ್ದು ಶೇ. ೧೦೬ ಪ್ರಗತಿಯನ್ನು ಪೂರೈಸಲಾಗಿದೆ.

ತಾಲೂಕಿನ ೨೧ ಗ್ರಾಮ ಪಂಚಾಯತ್ ಗಳ ಪೈಕಿ ನರೇಗಾ ಯೋಜನೆಯಲ್ಲಿ ಶೇ. ೧೦೦ಕ್ಕಿಂತ ಹೆಚ್ಚಿನ ಸಾಧನೆ ತೋರಿದ ಶಿರಾಡಿ, ಬೆಳಂದೂರು, ಸವಣೂರು, ಗೋಳಿತೊಟ್ಟು, ಸುಬ್ರಹ್ಮಣ್ಯ, ಮರ್ಧಾಳ, ಕುಟ್ರುಪಾಡಿ, ಕೊಲ, ಕೊಂಬಾರು, ಐತ್ತೂರು, ಬಳ್ಪ, ಆಲಂಕಾರು, ಪೆರಾಬೆ ಒಟ್ಟು ೧೩ ಗ್ರಾ.ಪಂ.ಗಳು ಗುರಿ ಮೀರಿದ ಸಾಧನೆ ಮಾಡಿವೆ ಅನ್ನುವುದನ್ನು ಅಂಕಿ-ಅಂಶ ತಿಳಿಸಿದೆ.

ಶಿರಾಡಿ ಗ್ರಾ.ಪಂ.ಗೆ ೯,೧೪೬ ಮಾನವ ದಿನ ನಿಗದಿ ಆಗದ್ದು, ಅಲ್ಲಿ ೧೩,೦೬೧ ಮಾನವ ದಿನ ಬಳಸಿ ಶೇ. ೨೦೨ ರಷ್ಟು ಪ್ರಗತಿ ಸಾಧಿಸಿದೆ. ಬೆಳಂದೂರು ಗ್ರಾ.ಪಂ.ಗೆ ೮,೭೯೯ ಮಾನವ ದಿನ ನೀಡಿದ್ದು, ಅಲ್ಲಿ ೧೧,೬೦೬ ಮಾನವ ದಿನಗಳು ವಿನಿಯೋಗಿಸಲಾಗಿದೆ. ಸವಣೂರು ಗ್ರಾ.ಪಂ.ಗೆ ೯,೧೦೪ ಮಾನವ ದಿನ ಬಳಕೆಯ ಗುರಿ ನೀಡಿದ್ದು, ಅದರಲ್ಲಿ ೯,೮೯೧ ದಿನಗಳನ್ನು ವಿನಿಯೋಗಿಸಲಾಗಿದೆ. ಉಳಿದ ೮ ಪಂಚಾಯತ್ ಗಳು ಶೇ. ೬೫ ರಿಂದ ೯೦ ರಷ್ಟು ಪ್ರಗತಿ ದಾಖಲಿಸಿವೆ.

ಹಲವು ಕಾಮಗಾರಿಗಳಿಗೆ ವಿನಿಯೋಗ
ಸುಮಾರು 41 ವಿಧದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಈ ಪೈಕಿ ೫೯ ಬಾವಿ ರಚನೆ, ೫೫೦ ತೋಟಗಾರಿಕಾ ಅಭಿವೃದ್ಧಿ, ೧೫೯ ದನದ ಹಟ್ಟಿ ನಿರ್ಮಾಣ, 13 ವಸತಿ ನಿರ್ಮಾಣ. ೧೧೩ ಇಂಗು ಗುಂಡಿ ನಿರ್ಮಾಣ ಕಾಮಗಾರಿಗಳು ನಡೆದಿವೆ. ಉಳಿದಂತೆ ಕೋಳಿ/ಹಂದಿ ಸಾಕಾಣೆ ಕೇಂದ್ರ, ಕಾಲುಸಂಕ ನಿರ್ಮಾಣ, ಕೊಳವೆಬಾವಿ ಮರುಪೂರಣ ಘಟಕ, ಕೃಷಿ ಹೊಂಡ ನಿರ್ಮಾಣ, ಶೌಚಾಲಯ ನಿರ್ಮಾಣ, ಬಚ್ಚಲು ಗುಂಡಿ ನಿರ್ಮಾಣ, ಕಾಂಕ್ರೀಟ್ ರಸ್ತೆ, ಶಶ್ಮಾನ ಅಭಿವೃದ್ಧಿ, ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಗುರಿ ಮೀರಿದ ಪ್ರಗತಿ
೨೦೨೦-೨೧ನೇ ಸಾಲಿನಲ್ಲಿ ಕಡಬ ತಾ.ಪಂ.ಗೆ ನರೇಗಾ ಯೋಜನೆಯಡಿ ಸಾಮಾಗ್ರಿ ವೆಚ್ಚವನ್ನು ಹೊರತುಪಡಿಸಿ ೧,೮೯,೬೦೯ ಮಾನವ ದಿನಗಳಿಗೆ ರೂ. ೫.೨೧ ಕೋಟಿ ವಾರ್ಷಿಕ ಗುರಿ ನಿಗದಿ ಪಡಿಸಲಾಗಿತ್ತು. ಇದರಲ್ಲಿ ೧,೪೨,೦೫೦ ಮಾನವ ದಿನ ವಿನಿಯೋಗಿಸಿ ೩.೯ ಕೋಟಿ ರೂ. ಅಕ್ಟೋಬರ್ ತಿಂಗಳಲ್ಲೇ ಬಳಕೆ ಮಾಡಲಾಗಿದೆ.

ಜಲ ಸಂರಕ್ಷಣೆಗೆ ಆದ್ಯತೆ
ಎಂಜಿ ನರೇಗಾ ಅಡಿ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು. ಇಂಗು ಗುಂಡಿ ನಿರ್ಮಾಣ, ತೆರೆದ ಬಾವಿ ರಚನೆ, ತೋಡಿನ ಹೂಳೆತ್ತುವ ಕಾರ್ಯ, ಜಲ ಮರುಪೂರಣ ಘಟಕ, ಮಳೆ ನೀರ ಕೊಯ್ಲು, ಕೃಷಿ ಹೊಂಡ ನಿರ್ಮಾಣ ಹೀಗೆ ಹತ್ತು ಹಲವು ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ನೀರನ್ನು ಸಂರಕ್ಷಿಸಲಾಗುತ್ತಿದೆ.

ಶ್ರಮ ಶ್ಲಾಘನೀಯ
ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯವರ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣ ಅಧಿಕಾರಿಯವರ ಮಾರ್ಗದರ್ಶನದಲ್ಲಿ ನರೇಗಾ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಗುರಿ ಸಾಧನೆಗೆ ಶ್ರಮಿಸಿದ ಗ್ರಾಮ ಪಂಚಾಯತ್‌ನ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ಡಾಟಾ ಎಂಟ್ರಿಗಳ ಶ್ರಮದ ಜೊತೆಗೆ ಕ್ಲಪ್ತ ಸಮಯಕ್ಕೆ ನರೇಗಾ ಯೋಜನೆಯ ಅಂದಾಜು ಪಟ್ಟಿ ಹಾಗೂ ಮೌಲ್ಯಮಾಪನವನ್ನು ಮಾಡಿದ ನರೇಗಾ ಇಂಜಿನಿಯರ್‌ಗಳು, ಯೋಜನೆಯ ಮಾಹಿತಿಯನ್ನು ತಲುಪಿಸಿದ ನರೇಗಾ ಸಿಬ್ಬಂದಿಗಳ ಶ್ರಮದಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿಗೆ ಒತ್ತು
ತಾಲೂಕಿನ ಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿ ಅರ್ಹ ಫಲಾನುಭವಿಗಳು ನರೇಗಾ ಯೋಜನೆಯ ಫಲವನ್ನು ಪಡೆದುಕೊಂಡು ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸೇರಿದಂತೆ ಸಾವರ್ಜನಿಕ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಮೂಲಕ ಯೋಜನೆಯ ಪೂರ್ಣ ಫಲವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸಹಕರಿಸಿದ ತಾಲೂಕು ಹಾಗೂ ಎಲ್ಲಾ ಗ್ರಾಮ ಪಂಚಾಯತ್‌ನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಗೆ ಅಭಿನಂದನೆಗಳು.
– ನವೀನ್ ಕುಮಾರ್ ಭಂಡಾರಿ ಎಚ್.  ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಕಡಬ

ಜಲಸಂರಕ್ಷಣಾ ಅಭಿಯಾನದಿಂದ ಹೆಚ್ಚಿದ ಮಾನವ ದಿನ ಸೃಜನೆ
ಕೊರೋನಾ ಸಂದಿಗ್ದ ಸಮಯದಲ್ಲಿ ತಾಲೂಕಿನಾದ್ಯಂತ ಜನರ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವ ಸಲುವಾಗಿ ನರೇಗಾ ಯೋಜನೆಯಲ್ಲಿ ಜಲ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡು ಇಂಗು ಗುಂಡಿ ನಿರ್ಮಿಸುವ ಕಾರ್ಯ ನಡೆದಿದೆ. ಇದರಿಂದ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ. ಜೊತೆಗೆ ರೈತರ ಆರ್ಥಿಕ ಸಂಪನ್ಮೂಲಕ್ಕೆ ಪೂರಕವಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಬಡತನ ನಿರ್ಮೂಲನೆಗೆ ಒತ್ತು ನೀಡಲಾಗಿದೆ. – ಚೆನ್ನಪ್ಪ ಗೌಡ ಕಜೆಮೂಲೆ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ತಾಲೂಕು ಪಂಚಾಯತ್  ಕಡಬ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.