HomePage_Banner
HomePage_Banner
HomePage_Banner

ನೆಲ್ಯಾಡಿ: ಸ್ವದೇಶಿ ಮಳಿಗೆ’ ಮೋದಿಕೇರ್’ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆ ‘ಮೋದಿಕೇರ್’ ನ.೧೨ರಂದು ನೆಲ್ಯಾಡಿಯ ದುರ್ಗಾಶ್ರೀ ಟವರ್‍ಸ್‌ನಲ್ಲಿ ಶುಭಾರಂಭಗೊಂಡಿತು.

ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ.ಸನೀಶ್‌ರವರು ನೂತನ ಮಳಿಗೆಯನ್ನು ಉದ್ಘಾಟಿಸಿ ಆಶೀರ್ವಾದ ವಿಧಿ ನೆರವೇರಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿಯಲ್ಲಿ ಹೊಸ ಹೊಸ ಉದ್ದಿಮೆಗಳು ಬರುತ್ತಿದೆ. ನೆಲ್ಯಾಡಿ ಪೇಟೆಗೆ ಮುಕುಟಮಣಿಯಂತೆ ನಿರ್ಮಾಣಗೊಂಡಿರುವ ದುರ್ಗಾಶ್ರೀ ಟವರ್‍ಸ್‌ನಲ್ಲಿ ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆ ‘ಮೋದಿಕೇರ್’ ಆರಂಭಗೊಂಡಿರುವುದು ಹೆಚ್ಚು ಸಂತೋಷದಾಯಕವಾಗಿದೆ. ಈ ಮಳಿಗೆಯಿಂದ ಮಾರಾಟಗಾರರಿಗೂ, ಖರೀದಿದಾರರಿಗೂ ಲಾಭವಾಗಲಿದೆ. ಬೇರೆ ಬೇರೆ ಉತ್ಪನ್ನಗಳ ಮಳಿಗೆ ನೆಲ್ಯಾಡಿಗೆ ಹೆಚ್ಚು ಹೆಚ್ಚಾಗಿ ಬರಬೇಕು. ಇದರಿಂದ ಈ ಊರಿನ ಅಭಿವೃದ್ಧಿಯ ಜೊತೆಗೆ ಸ್ಥಳೀಯರಿಗೆ ಉದ್ಯೋಗವೂ ಸಿಗಲಿದೆ. ಈ ಸಂಸ್ಥೆಯ ಮೂಲಕ ಏಸುಕ್ರಿಸ್ತರ ಸಂದೇಶದಂತೆ ಎಲ್ಲರಿಗೂ ಒಳಿತು ಮಾಡುವ ಅವಕಾಶ ಸಿಗಲಿ ಎಂದು ಹೇಳಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಮೋದಿಕೇರ್‌ನ ಕರ್ನಾಟಕದ ಸೀನಿಯರ್ ಬ್ಯುಸಿನೆಸ್ ಕನ್ಸ್‌ಲ್ಟೆಂಟ್ ತೇಜ್‌ಕಿರಣ್‌ರವರು ಮತನಾಡಿ, ದೇಶದಲ್ಲಿ ಮಾರಾಟದಲ್ಲಿರುವ ಬಹುತೇಕ ವಿದೇಶಿ ಉತ್ಪನ್ನಗಳು 5ರಿಂದ 6 ಮಂದಿ ಮಧ್ಯವರ್ತಿಗಳ ಮೂಲಕ ಸಾಗಿಬಂದು ಗ್ರಾಹಕರ ಕೈ ಸೇರುತ್ತದೆ. ಇದರಿಂದ ಶೇ.೮೦ರಷ್ಟು ಕಮಿಷನ್ ಮಧ್ಯವರ್ತಿಗಳಿಗೆ ಸಿಗುತ್ತದೆ. ಆದರೆ ಸ್ವದೇಶಿ ಉತ್ಪನ್ನಗಳ ಮಳಿಗೆ ‘ಮೋದಿಕೇರ್ ‘ ಮೂಲಕ ಮಾರಾಟವಾಗುವ ಉತ್ಪನ್ನಗಳ ಲಾಭ ಗ್ರಾಹಕರಿಗೆ ಸಿಗುತ್ತದೆ. ನೆಲ್ಯಾಡಿಯ ಜನತೆ ‘ಮೋದಿಕೇರ್’ ಸ್ವದೇಶಿ ಮಳಿಗೆಯ ಮೂಲಕ ವ್ಯವಹಾರ ಮಾಡುವಂತೆ ಹೇಳಿದರು. ಕೆ.ಎಸ್.ಸತೀಶ್‌ದುರ್ಗಾಶ್ರೀ, ಮೋದಿಕೇರ್‌ನ ಡೈರೆಕ್ಟರ್‌ಗಳಾದ ಕೃಷ್ಣಕುಮಾರ್ ಅತ್ರಿಜಾಲು, ಮೋದಿಕೇರ್ ನೆಲ್ಯಾಡಿ ಮಳಿಗೆಯ ಮಾಲಕ ಜೋಸಿ ಪಿ ಜೋಸೆಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್‌ಐಸಿ ಡೆವಲಪ್‌ಮೆಂಟ್ ಆಫೀಸರ್ ನಟೇಶ್ ಉಡುಪ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ತಾ.ಪಂ.ಸದಸ್ಯೆ ಕೆ.ಟಿ.ವಲ್ಸಮ್ಮ, ನಿವೃತ್ತ ಪ್ರೋಫೆಸರ್ ಅಲ್ಫೋನ್ಸಾ, ನಿವೃತ್ತ ಸರಕಾರಿ ವಕೀಲ ಎಂ.ಎಸ್.ಇನೋಸ್, ಜೇಮ್ಸ್ ಬೆಳ್ತಂಗಡಿ, ಟೋಮಿ ಗಂಡಿಬಾಗಿಲು, ಲಿಸ್ಸಿ ಕೊಣಾಲು, ಮೋದಿಕೇರ್‌ನ ಡೈರೆಕ್ಟರ್‌ಗಳಾದ ರವಿಗಣೇಶ್ ಕಡಬ, ಮನೋಜ್ಞ ಅತ್ರಿಜಾಲು, ದಿನೇಶ್ ಭಟ್ ಪುತ್ತೂರು, ಪ್ರಸನ್ನ ಭಟ್ ಪುತ್ತೂರು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು. ಮಾಲಕ ಜೋಸಿ ಪಿ ಜೋಸೆಫ್, ರೋಸಮ್ಮ ರೋಸ್, ಕ್ಲಿನ್ಸ್ ಜೋಸಿ, ಪ್ರಿಯಾಂಕರವರು ಸಹಕರಿಸಿದರು. ಮೋದಿಕೇರ್ ಉತ್ಪನ್ನಗಳ ಬಗ್ಗೆ ಪ್ರಾಜೆಕ್ಟರ್ ಮೂಲಕ ತೇಜ್‌ಕಿರಣ್‌ರವರು ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.