HomePage_Banner
HomePage_Banner
HomePage_Banner

ಒಂದೇ ಸೂರಿನಡಿಯಲ್ಲಿ ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ ಆವಿನ್ ಇಲೆಕ್ಟ್ರಾನಿಕ್ಸ್, ಫರ್ನಿಚರ್‍ಸ್, ಹಾರ್ಡ್‌ವೇರ್‍ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಬ್ರಾಂಡೆಡ್ ಇಲೆಕ್ಟ್ರೋನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಆವಿನ್ ಇಲೆಕ್ಟ್ರೋನಿಕ್ಸ್ ಸಂಸ್ಥೆಯು ಇದೀಗ ಇಲೆಕ್ಟ್ರಾನಿಕ್ಸ್ ಐಟಂನೊಂದಿಗೆ ಗುಣಮಟ್ಟದ ಪೀಠೋಪಕರಣಗಳ ಫರ್ನಿಚರ್‍ಸ್, ಹಾರ್ಡ್‌ವೇರ್, ಪ್ಲಾಸ್ಟಿಕ್ಸ್ ಉತ್ಪನ್ನಗಳ ಬೃಹತ್ ಸಂಗ್ರಹ ಇದೀಗ ಒಂದೇ ಸೂರಿನಡಿಯಲ್ಲಿ ಇಲ್ಲಿನ ಎಪಿಎಂಸಿ ರಸ್ತೆ ಪುತ್ತೂರು ಸಿಟಿ ಆಸ್ಪತ್ರೆ ಬಳಿಯ ಆವಿನ್ ಕಾಂಪ್ಲೆಕ್ಸ್‌ನಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಇದರ ಉದ್ಘಾಟನೆ ಕಾರ್ಯ ನ.12 ರಂದು ನೆರವೇರಿದೆ.

ಮಳಿಗೆಯ ಮಾಲಕ ಮೆಲ್ವಿನ್ ಫೆರ್ನಾಂಡೀಸ್‌ರವರ ತಾಯಿ ಜ್ಯುಲಿಯಾನಾರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಮಳಿಗೆಯು ಸಾರ್ವಜನಿಕರ ಆಶೀರ್ವಾದದಿಂದ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ದೀಪ ಬೆಳಗಿಸಿ, ಆಶೀರ್ವಚನ ನೀಡುತ್ತಾ, ಭೂಮಿಯಲ್ಲಿ ವಾಸಿಸಲು ನಮಗೆ ಭಗವಂತ ಸುಂದರ ಅವಕಾಶವನ್ನು ನೀಡಿದ್ದಾನೆ. ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಜೀವನವೂ ಹಸನಾದಂತೆ ಮತ್ತೊಬ್ಬರ ಜೀವನವೂ ಹಸನುಗೊಳಿಸುವಂತಾದಾಗ ದೇವರು ಖಂಡಿತಾ ಹರಸುತ್ತಾನೆ. ಈ ಮಳಿಗೆಯ ಮಾಲಕ ಮೆಲ್ವಿನ್ ಫೆರ್ನಾಂಡೀಸ್‌ರವರು ಇದೀಗ ನೂತನ ವ್ಯಾಪಾರವನ್ನು ತೆರೆದಿದ್ದು, ಒಳ್ಳೆಯ ಗುಣಮಟ್ಟದ, ವಿಶ್ವಾಸಭರಿತ ಸೇವೆಯನ್ನು ಪರಿಸರದ ಜನರಿಗೆ ನೀಡುವಂತಾದಾಗ ಉತ್ತಮ ಪ್ರತಿಫಲವನ್ನು ದೇವರು ಕರುಣಿಸುವುದು ಖಂಡಿತಾ ಎಂದು ಹೇಳಿ ನೂತನ ಮಳಿಗೆಗೆ ಶುಭ ಹಾರೈಸಿದರು.

ಪುತ್ತೂರು ನಗರಸಭಾ ಮಾಜಿ ಸದಸ್ಯ ಸುಜೀಂದ್ರ ಪ್ರಭು, ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನ ಮಾಲಕ ವಲೇರಿಯನ್ ಡಾಯಸ್, ಕ್ರಿಸ್ಟೋಫರ್ ಅಟೋಮೋಬೈಲ್ಸ್‌ನ ಮಾಲಕ ಮನೋಜ್ ಡಾಯಸ್, ಮಾಯಿದೆ ದೇವುಸ್ ಚರ್ಚ್‌ನ ಆರ್ಥಿಕ ಸಮಿತಿಯ ಸದಸ್ಯ ವಿನ್ಸೆಂಟ್ (ರುತು) ತಾವ್ರೋ, ಪುತ್ತೂರು ವಾಳೆಯ ಗುರಿಕಾರ ಜೋನ್ ಡಿ’ಸೋಜ, ಸುಪ್ರೀಮ್ ಸರ್ವಿಸಸ್‌ನ ಸಿಪ್ರಿಯನ್ ಮೊರಾಸ್, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಹೆರಿ ಡಿ’ಸೋಜ, ಕ್ರಿಸ್ಟಲ್ ಎಲೆಕ್ಟ್ರೋನಿಕ್ಸ್‌ನ ಮೊಹಿಯುದ್ದೀನ್, ಪ್ರವೀಣ್ ಪ್ರಿಂಟರ್‍ಸ್‌ನ ಪ್ರವೀಣ್ ಮೊಂತೇರೋ, ಸೈಂಟ್ ಮಿಲಾಗ್ರಿಸ್ ಕೋ.ಆಪರೇಟಿವ್ ಸೊಸೈಟಿಯ ಡಿಜಿಎಂ ವಿಕ್ಟರ್ ಡಿ’ಸೋಜ, ಕೂರ್ನಡ್ಕ ಸ್ಟಾರ್ ಸೆರಾಮಿಕ್ಸ್‌ನ ಉಮ್ಮರ್, ಆಲ್ಫಾ ಕೋಲ್ಡ್ ಸ್ಟೋರೇಜ್‌ನ ಆಲ್ಫೊನ್ಸ್ ಮಸ್ಕರೇನ್ಹಸ್, ಉಮೇಶ್ ಆಡ್ ಏಜೆನ್ಸಿಯ ಉಮೇಶ್, ತಾರಾ ಆರ್ಟ್ಸ್‌ನ ತಾರಾನಾಥ್, ಸೆಬಾಸ್ಟಿಯನ್ ಪಿಂಟೋ ಕೊಂಬೆಟ್ಟು, ಐಸಿಐಸಿಐ ಬ್ಯಾಂಕ್‌ನ ಜಯರಾಮ್, ವಾಲ್ಟರ್ ಫೆರ್ನಾಂಡೀಸ್ ಕಂಬಳಬೆಟ್ಟು, ಪಾವ್ಲ್ ಮಸ್ಕರೇನ್ಹಸ್ ಸಾಮೆತ್ತಡ್ಕ, ವಾಲ್ಟರ್ ಲೋಬೋ ಸಾಮೆತ್ತಡ್ಕ, ಕೆಇಬಿಯ ನಿವೃತ್ತ ಸಿಬ್ಬಂದಿ ಫ್ರಾನ್ಸಿಸ್ ಡಿ’ಸೋಜ, ವಾಲ್ಟರ್ ಸಿಕ್ವೇರಾ ಪರ್ಲಡ್ಕ, ಡೆನ್ನಿಸ್ ಪಾಸ್ ನೆರಿಗೇರಿ, ಡಾಯಸ್ ಕಾಂಪ್ಲೆಕ್ಸ್‌ನ ದೀಪಕ್ ಡಾಯಸ್, ಐವನ್ ಡಿ’ಸೋಜ ಕೃಷ್ಣನಗರ, ಅನೂಪ್ ಸಲ್ದಾನ್ಹಾ ಬೆಂಗಳೂರು ಸಹಿತ ಹಲವರು ಆಗಮಿಸಿ ಶುಭಹಾರೈಸಿದರು. ಮಾಲಕ ಮೆಲ್ವಿನ್ ಫೆರ್ನಾಂಡೀಸ್‌ರವರ ಪತ್ನಿ ಪ್ರೀತಿ ವಂದಿಸಿದರು.

ಆಫರ್..ಆಫರ್..ಆಫರ್..
– ವಿಶೇಷ ಕೊಡುಗೆಯಾಗಿ ರೂ.9020ರ ಪ್ರತೀ ಗ್ರೈಂಡರ್ ಖರೀದಿಗೆ ಕುಕ್ಕರ್  ಹಾಗೂ ತವಾ ಉಚಿತವಾಗಿ ರೂ.5999 ದರದಲ್ಲಿ ನೀಡಲಾಗುತ್ತದೆ.
– ಸೀಲಿಂಗ್ ಫ್ಯಾನ್ 4 ವರ್ಷದ ವಾರಂಟಿಯೊಂದಿಗೆ ಮನೆ ಬಾಗಿಲಿಗೆ ರಿಪೇರಿ
– ಶುಭಾರಂಭದ ಪ್ರಯುಕ್ತ 2020, ನವೆಂಬರ್ 20ರ ವರೆಗೆ ಗ್ರಾಹಕರು  ಖರೀದಿಸುವ ಎಲ್ಲಾ ವಸ್ತುಗಳ ಮೇಲೆ ಶೇ.10 ರಿಂದ ಶೇ.25ರಷ್ಟು ರಿಯಾಯಿತಿ
– ಹೆಸರಾಂತ ಕಂಪೆನಿಗಳ ಐಟಂಗಳು ಲಭ್ಯ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.