HomePage_Banner
HomePage_Banner
HomePage_Banner

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಅನುಷ್ಠಾನಕ್ಕೆ ಸಚಿವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಶಾಸಕರಿಂದ ಮುಖ್ಯಮಂತ್ರಿಗಳಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರಾವಳಿ ಜಿಲ್ಲೆಗಳಲ್ಲಿ ಪ್ರಮುಖವಾಗಿರುವ ಮರಳುಗಾರಿಕೆ ಸಮಸ್ಯೆ ಸಂಬಂಧ ‘ಪ್ರತ್ಯೇಕ ಮರಳು ನೀತಿ’ ಶೀಘ್ರ ಅನುಷ್ಠಾನ ಹಾಗೂ ಸಾಂಪ್ರದಾಯಿಕ ಮರಳು ಗಣಿಗಾರಿಕೆ ಕುರಿತು ಸಚಿವ ಸಿ.ಸಿ.ಪಾಟೀಲ್ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ದ.ಕ.ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ 2011ರ ನಂತರ ಸಾಂಪ್ರದಾಯಿಕ ಮರಳು ತೆಗೆಯಲು ಅನುಮತಿ ನೀಡುವುದು, ನಾನ್ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಈಗಾಗಲೇ ರಾಜ್ಯ ಮಿನರಲ್ ನಿಗಮಕ್ಕೆ ಸಲಿಸಿರುವ 30 ಪ್ರಸ್ತಾವನೆಯನ್ನು ಕೂಡಲೇ ಟೆಂಡರ್ ಕರೆದುಅನುಮತಿ ನೀಡುವುದು, ದಕ್ಷಿಣ ಕನ್ನಡ ಜಿಲ್ಲೆಯ ತುಂಬೆ, ಮೊಳವೂರು ವೆಂಟೆಂಡ್ ಡ್ಯಾಂ ಸಹಿತ ಇತರೆ ಕಡೆಗಳಲ್ಲಿ ಮರಳು ಶೇಖರಣೆ ತೆರವುಗೊಳಿಸಲು ಜಿಲ್ಲಾಧಿಕರಿಗಳಿಗೆ ಸಂಪೂರ್ಣ ಅಧಿಕಾರ ನೀಡುವುದು, ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಂಬಂಧ ಪ್ರತ್ಯೇಕ ಮರಳು ನೀತಿ ಶೀಘ್ರ ಅನುಷ್ಠಾನ ಮಾಡುವ ಕುರಿತು ಮನವಿಯಲಿ ವಿನಂತಿಸಲಾಗಿದೆ. ಶಾಸಕರುಗಳಾದ ಸಂಜೀವ ಮಠಂದೂರು, ಎಸ್.ಅಂಗಾರ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ದಕ್ಷಿಣ ಕನ್ನಡ ನಾನ್ ಸಿ ಆ್ ಜಡ್ ನ ಯೂನಿಯನ್ ಅಧ್ಯಕ್ಷ ದಿನೇಶ್ ಮೆದು, ಸದಸ್ಯರಾದ ಸುರೇಶ್ ಕುಂಡಡ್ಕ, ಕರುಣಾಕರ ಪೂಜಾರಿ ಪಟ್ಟೆ ಉಪಸ್ಥಿತರಿದ್ದರು.
ನಿಯೋಗದಲ್ಲಿ ಇದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.