HomePage_Banner
HomePage_Banner
HomePage_Banner

ದೇವರ ಸೇವೆ ಮೂಲಕ ನಗರಸಭಾ ಕಚೇರಿ ಕಾರ್ಯ ಆರಂಭಿಸಿದ ನೂತನ ನಗರ ಸಭಾ ಅಧ್ಯಕ್ಷರು

Puttur_Advt_NewsUnder_1
Puttur_Advt_NewsUnder_1
  • ಜೀವಂಧರ್ ಜೈನ್ ಅವರಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತರುದ್ರ ಸೇವೆ

ಪುತ್ತೂರು: ಪುತ್ತೂರು ನಗರಸಭೆಯ ನೂತನ ಅಧ್ಯಕ್ಷ ಜೀವಂಧರ್ ಜೈನ್ ಅವರು ದೇವರ ಸೇವೆಯ ಮೂಲಕ ಕಚೇರಿ ಕಾರ್ಯ ಆರಂಭಿಸುವ ನಿಟ್ಟಿನಲ್ಲಿ ನ.12ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಅತ್ಯಂತ ಪ್ರಿಯವಾದ ಶತರುದ್ರ ಸೇವೆ ಸಮರ್ಪಣೆ ಮಾಡಿದರು.

ಬೆಳಿಗ್ಗೆ ದೇವಳದಲ್ಲಿ ಕೆ.ಜೀವಂಧರ್ ಜೈನ್, ಪತ್ನಿ ಜ್ಯೋತಿ, ಜಿತೇಶ್, ಜೀವಿತ್ ಅವರೊಂದಿಗೆ ಸಂಕಲ್ಪ ಕಾರ್ಯ ನೆರವೇರಿಸಿದರು. ಈ ಸಂದರ್ಭ ವೇ.ಮೂ. ವಿ.ಎಸ್ ಭಟ್ ಧಾರ್ಮಿಕ ವಿಧವಿಧಾನಗಳನ್ನು ನೆರವೇರಿಸಿದರು.

ದೇವಳದ ಶ್ರೀ ಬಾಲಗಣಪತಿ ದೇವರಿಗೆ 6 ತೆಂಗಿನ ಕಾಯಿಗಳ ಗಣಪತಿ ಹೋಮ, ಶ್ರೀ ದೇವಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಶಾಸ್ತಾರ, ಶ್ರೀ ಬಾಲಗಣಪತಿ ದೇವರ ಗುಡಿಗಳಲ್ಲಿ ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು.


ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಹಾಪೂಜೆ ನಡೆದ ಬಳಿಕ ದೇವಳದ ಗೋಪುರದಲ್ಲಿ ಶತರುದ್ರ ಪಾರಾಯಣದ ವೈದಿಕರಿಂದ ಆಶೀರ್ವಾದ ಪಡೆದು ಪ್ರಸಾದ ವಿತರಣ ನಡೆಯಿತು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ನಡೆಯಿತು.

ಮಧ್ಯಾಹ್ನ ನಗರಸಭೆ ಕಚೇರಿ ಅಧಿಕೃತ ಕಾರ್ಯಾರಂಭ
ದೇವಳದಲ್ಲಿ ಶತರುದ್ರ ಸೇವೆ, ಅನ್ನಪ್ರಸಾದ ಸ್ವೀಕರಿಸಿದ ನಗರಭೆ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ನೇರವಾಗಿ ನಗರಸಭೆ ಕಚೇರಿಗೆ ತೆರಳಿ ಕಚೇರಿ ಕಾರ್ಯಾರಂಭಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಆರಂಭದ ದಿನವೇ ಸಂಜೆ ಕಚೇರಿ ಸಿಬ್ಬಂದಿಗಳ ಸಭೆ ನಡೆಸಿ ಸಮಯ ಪಾಲನೆಗೆ ಪ್ರಾಮುಖ್ಯತೆ ನೀಡುವಂತೆ ತಿಳಿಸಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ಹರೀಶ್ ಬಿಜತ್ರೆ, ದಿವ್ಯಾ ಪುರುಷೋತ್ತಮ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಸದಸ್ಯರು ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಪೌರಾಯುಕ್ತೆ ರೂಪಾ ಶೆಟ್ಟಿ ನಗರಸಭೆ ಕಚೇರಿಯಲ್ಲಿ ಕಡತಗಳ ಕುರಿತು ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.