HomePage_Banner
HomePage_Banner

ರೋಟರಿ ಈಸ್ಟ್‌ನಿಂದ ಮನರಂಜಿಸಿದ ಸಂಬಂಧಗಳ ಕೊಂಡಿ | ಬೆಸುಗೆ, ಕುಟುಂಬ ಸಮ್ಮಿಲನ, ಸಂಗೀತ ರಸಸಂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಗೆಳೆತನ, ಒಡನಾಟ, ಮೌಲ್ಯಗಳನ್ನು ಅಳವಡಿಸಿಕೊಂಡ ಸಂಸ್ಥೆ ರೋಟರಿ-ಪ್ರಕಾಶ್ ಕಾರಂತ್

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಪ್ರಪಂಚದಲ್ಲಿ ಯಾರೇ ಸಂಕಷ್ಟಕ್ಕೆ ಒಳಗಾದರೂ, ಸಂಕಷ್ಟಕ್ಕೆ ಒಳಗಾದವರನ್ನು ನೇರವಾಗಿ ಸ್ಪಂದಿಸುವ ಗುಣವುಳ್ಳವರು ರೋಟರಿ ಸಂಸ್ಥೆಯಾಗಿದೆ. ಒಂದರ್ಥದಲ್ಲಿ ಪರಸ್ಪರ ಗೆಳೆತನ, ಒಡನಾಟ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡ ಸಂಸ್ಥೆ ರೋಟರಿ ಎನಿಸಿದೆ ಎಂದರೆ ತಪ್ಪಾಗಲ್ಲ ಎಂದು ನಿಯೋಜಿತ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.

ಅವರು ನ.12ರಂದು ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಜಯಂತ್ ನಡುಬೈಲುರವರ ಆತಿಥ್ಯದಲ್ಲಿ ಜಯಂತ್ ನಡುಬೈಲುರವರ ಅಕ್ಷಯ ಫಾರ್ಮ್ಸ್ ನೈತಾಡಿ ಇಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಸಂಬಂಧಗಳ ಕೊಂಡಿ `ಬೆಸುಗೆ’, ಕುಟುಂಬ ಸಮ್ಮಿಲನ ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ದೇಶದಲ್ಲಿ ನಡೆಯುವ ಭೂಕಂಪ, ಸುನಾಮಿ ಆಗಲಿ ಅಥವಾ ಇತ್ತೀಚೆಗಿನ ಮಹಾಮಾರಿ ಕೋವಿಡ್ ಆಗಲಿ, ರೋಟರಿ ಸಂಸ್ಥೆಯು ಸಹಾಯಹಸ್ತ ಚಾಚುವಲ್ಲಿ ಸದಾ ಮುಂದು. ಯಾವುದೇ ಸರಕಾರ ಮಾಡುವ ಕೆಲಸವನ್ನು ಮೊದಲು ರೋಟರಿ ಸಂಸ್ಥೆಯು ತನ್ನ ರೋಟರಿ ಸದಸ್ಯರ ಧನಾತ್ಮಕ ಚಿಂತನೆಯೊಂದಿಗೆ ಮೊದಲು ಮಾಡುತ್ತಿರುವುದು ಹೆಗ್ಗಳಿಕೆಯಾಗಿದೆ. ಯಾವುದೇ ಭೌಗೋಳಿಕ ಸೀಮೆಯಿಲ್ಲದೆ ರೋಟರಿ ಸಂಸ್ಥೆಯು ತನ್ನ ಕಾರ್ಯ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯರವರು ಮಾತನಾಡಿ, ಸಂಬಂಧಗಳ ಕೊಂಡಿ ಆಗಬೇಕಾದರೆ ಮೊದಲು ಫ್ಯಾಮಿಲಿ ಮೀಟ್ ಆಗಬೇಕು. ಈ ನಿಟ್ಟಿನಲ್ಲಿ ರೋಟರಿ ಈಸ್ಟ್ ಸಂಸ್ಥೆಯು ಜಯಂತ್ ನಡುಬೈಲುರವರ ಆತಿಥ್ಯದಲ್ಲಿ ಬೆಸುಗೆ ಎಂಬ ಟೈಟಲಿನೊಂದಿಗೆ ಕುಟುಂಬ ಸಮ್ಮಿಲನವಾಗಿರುವುದು ಮತ್ತೂ ಹೆಮ್ಮೆಯ ಸಂಗತಿಯಾಗಿದೆ. ಸುಮಾರು ರೂ.೪ ಕೋಟಿ ವೆಚ್ಚದಲ್ಲಿ ಬಯೋಗ್ಯಾಸ್ ಡಂಪಿಂಗ್ ಯಾರ್ಡ್ ಹಾಗೂ ಎಲ್ಲೆಂದರಲ್ಲಿ ತಿರುಗಾಡುವ ನಾಯಿಗಳಿಗೆ ಆಶ್ರಯತಾಣವನ್ನು ಕಲ್ಪಿಸುವ ಯೋಜನೆ ನಮ್ಮದಾಗಿದೆ. ಆದ್ದರಿಂದ ಪುತ್ತೂರಿಗೆ ಒಂದು ಒಳ್ಳೆಯ ಕಾರ್ಯಕ್ರಮವನ್ನು ನೀಡುವ ಮುಖೇನ ಜನರ ಮನಸ್ಸನ್ನು ಗೆಲ್ಲಬೇಕಾಗಿದೆ ಎಂದರು.

ನಗರಸಭೆ ನೂತನ ಅಧ್ಯಕ್ಷ ಜೀವಂಧರ್ ಜೈನ್‌ರವರು ಮಾತನಾಡಿ, ಕೋವಿಡ್ ಬಳಿಕ ಇಂತಹ ಅಪೂರ್ವವಾದ ಕಾರ್ಯಕ್ರಮವನ್ನು ಏರ್ಪಡಿಸಿರುವುದರಿಂದ ನಮ್ಮೊಳಗೆ ಆತ್ಮವಿಶ್ವಾಸ ಹೆಚ್ಚಿದೆ. ತಾನು ಪುರಸಭಾ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ನಗರಸಭಾ ಪ್ರಭಾರ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪುತ್ತೂರಿನ ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ನಗರಸಭೆ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಪ್ರಜೆಗಳು ಕೈಜೋಡಿಸಿದಾಗ ಆಡಳಿತ ವೈಖರಿ ಚುರುಕಿನಿಂದ ಸಾಗಬಲ್ಲುದಾಗಿದೆ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ನಗರಸಭೆ ನೂತನ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿರವರು ಮಾತನಾಡಿ, ರೋಟರಿ ಸಂಸ್ಥೆಯ ಸದಸ್ಯರು ಮಾಡುವ ಸಮಾಜಮುಖಿ ಕಾರ್ಯಗಳಿಂದಲೇ ರೋಟರಿ ಸಂಸ್ಥೆ ಗುರುತಿಸ್ಪಡುತ್ತಿದೆ. ಸೌಹಾರ್ದತೆ, ಸತ್‌ಭಾವನೆಯನ್ನು ವಿಶ್ವದಲ್ಲಿ ಹರಡಿಸುವಲ್ಲಿ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸರಕಾರದೊಂದಿಗೆ ಪ್ಯಾರಲಲ್ ಆಗಿ ರೋಟರಿ ಸಂಸ್ಥೆಯು ಸೇವೆಯನ್ನೀಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದ ಆತಿಥ್ಯ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಜಯಂತ್ ನಡುಬೈಲುರವರು ಮಾತನಾಡಿ, ಜೀವನದ ಜಂಜಾಟದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೋವಿಡ್‌ನಿಂದಾಗಿ ಯಾರ ಸಂಪರ್ಕವೂ ಇಲ್ಲದಾಗಿ ಹೋಗಿತ್ತು. ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಆಚರಿಸಿ, ಆ ಮೂಲಕ ನಮ್ಮ ಕುಟುಂಬ ಸದಸ್ಯರ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇಂದಿಲ್ಲಿ ಜರಗಿದ ಬೆಸುಗೆ ಕಾರ್ಯಕ್ರಮ ನಿಜಕ್ಕೂ ಸಾಕ್ಷಿಯಾಗಿದೆ. ಬೆಸುಗೆ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ವಿಯಾಗಿದ್ದೇವೆ ಕೂಡ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಕಷ್ಟ-ಸುಖವನ್ನು ಮೊದಲು ಅರಿಯಬೇಕಾಗಿರುವುದು ಮನುಷ್ಯನ ಆದ್ಯ ಕರ್ತವ್ಯವಾಗಿದೆ ಎಂದರು.

ರೋಟರಿ ಈಸ್ಟ್‌ನ ಸಂಬಂಧಗಳ ಕೊಂಡಿ ಬೆಸುಗೆ ಕಾರ್ಯಕ್ರಮದ ಚೇರ್‌ಮ್ಯಾನ್ ಶಶಿಧರ್ ಕಿನ್ನಿಮಜಲು ಸ್ವಾಗತಿಸಿದರು. ಕಾರ್ಯದರ್ಶಿ ರವಿಕುಮಾರ್ ರೈಯವರು ವರದಿ ವಾಚಿಸಿ, ವಂದಿಸಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ, ನಿಯೋಜಿತ ಅಧ್ಯಕ್ಷ ಪುರಂದರ ರೈ, ನಿಕಟಪೂರ್ವ ಆಧ್ಯಕ್ಷ ಡಾ.ಶ್ಯಾಮ್ ಪ್ರಸಾದ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ವಿ ಶೆಣೈ ಪೆಟ್ರೋಲ್ ಪಂಪಿನ ಕೆ.ವಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.ನಾಲ್ವರಿಗೆ ಸನ್ಮಾನ…ಸ್ಕಾಲರ್‌ಶಿಪ್ ವಿತರಣೆ..
ಪುತ್ತೂರು ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೀವಂಧರ್ ಜೈನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿದ್ಯಾ ಆರ್.ಗೌರಿ ಮತ್ತು ರೋಟರಿ ಸಂಸ್ಥೆಯ ಮುಂದಿನ ಜಿಲ್ಲಾ ಗವರ್ನರ್ ಆಗಿ ನೇಮಕಗೊಂಡ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಹಾಗೂ ರೋಟರಿ ಬೆಸುಗೆ ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ ಅಕ್ಷಯ ಫಾರ್ಮ್ಸ್‌ನ ಜಯಂತ್ ನಡುಬೈಲು ದಂಪತಿ, ಪುತ್ರರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಪ್ರಥಮ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಶ್ರೇಯಾ ರೈಯವರಿಗೆ ರೂ.೬೦ ಸಾವಿರ ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಲಾಯಿತು.

ಸಂಗೀತ ರಸಸಂಜೆ…
ಗಾಯಕ ಅಣ್ಣು ತಿಂಗಳಾಡಿ ಮತ್ತು ತಂಡದಿಂದ ಭಕ್ತಿಗೀತೆ ಹಾಗೂ ಚಲನಚಿತ್ರ ಗೀತೆಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.