HomePage_Banner
HomePage_Banner
HomePage_Banner

ಕಂಬಳಬೆಟ್ಟು: ಬಡ ಕುಟುಂಬಕ್ಕೆ ಮನೆ ನಿರ್ಮಾಣ ; ಕೀ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕರ್ನಾಟಕ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್ ) ಕಂಬಳಬೆಟ್ಟು ವತಿಯಿಂದ ಮತ್ತು ಹಲವು ಸಂಘ ಸಂಸ್ಥೆ, ದಾನಿಗಳ ಸಹಕಾರದೊಂದಿಗೆ ಕಂಬಳಬೆಟ್ಟುವಿನ ಶಾಂತಿನಗರದಲ್ಲಿ ಬಡ ಹೆಣ್ಣಿನ ಮದುವೆ ಹಾಗೂ ಮನೆ ನಿರ್ಮಿಸಿ ಕೀ ಹಸ್ತಾಂತರಿಸಲಾಯಿತು.

ಎಸ್.ವೈ.ಎಸ್. ರಾಜ್ಯ ಸಮಿತಿ ನಾಯಕ ನಾಯಕ ಡಿ.ಕೆ. ಉಮರ್ ಸಖಾಫಿ, ಹಾರೀಶ್ ಮದನಿ ಪಾಟ್ರಕೋಡಿಯವರ ಮಾರ್ಗದರ್ಶನದಲ್ಲಿ, ಎಸ್.ವೈ.ಎಸ್ ಕಂಬಳಬೆಟ್ಟು ಬ್ರಾಂಚ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ರವರ ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದರು.

ನ.8ರಂದು ಈ ನೂತನ ಮನೆಯ ಕೀ ಹಸ್ತಾಂತರಿಸಿ, ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷ ಇಬ್ರಾಹಿಂ ಮದನಿ ರವರ ಅಧ್ಯಕ್ಷತೆಯಲ್ಲಿ ಮೌಲೀದ್ ಪಾರಾಯಣ ಜರಗಿತು. ಸಿ.ಎಚ್. ಹನೀಫ್ ಸಖಾಫಿ, ಕಾಸಿಂ ಸಖಾಫಿ ಕೊಳಂಬೆ, ಇಬ್ರಾಹಿಂ ಮುಸ್ಲಿಯಾರ್ ಕೊಡುಂಗೈ, ಅಬ್ದುಲ್ ರ್ರಹ್ಮಾನ್ ಶರಫಿ ವಿಟ್ಲ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಹಮೀದ್ ಹಾಜಿ ಕೊಡುಂಗೈ, ಅಬ್ದುಲ್ ಹಕೀಂ ಶಾಂತಿನಗರ, ಎಂ.ಕೆ. ರಫೀಕ್ ಕಂಬಳಬೆಟ್ಟು, ಶರೀಫ್ ಮದನಿ, ಬದ್ರುದ್ದೀನ್ ಮದನಿ ಕದಿಕೆ ಉಪಸ್ಥಿತರಿದ್ದರು. ಈ ಕಾರ್ಯದಲ್ಲಿ ಮಂಗಳೂರು ಫ್ರೆಂಡ್ಸ್, ಖಿದ್ಮಾಮತ್ ಫೌಂಡೇಶನ್ ವಿಟ್ಲ, ಅಬ್ದುಲ್ ಗಫರ್ ರವರು ಸಹಕರಿಸಿದರು.

ಎಸ್.ವೈ.ಎಸ್ ರಾಜ್ಯ ಸಮಿತಿಯ ನಾಯಕರಾದ ಅಬ್ದುಲ್ ರ್ರಶೀದ್ ಕಾಮಿಲ್ ಸಖಾಫಿ, ಅಶ್ರಫ್ ಕಿನಾರ ನಿಯೋಗ ಭೇಟಿ ನೀಡಿ, ಕಂಬಳಬೆಟ್ಟು ಬ್ರಾಂಚ್‌ನ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬ್ರಾಂಚ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ರವರಿಗೆ ಸನ್ಮಾನಿಸಲಾಯಿತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.