HomePage_Banner
HomePage_Banner
HomePage_Banner

ಕಾನೂನು ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರ -ಪುತ್ತೂರಿನಲ್ಲಿ ಪೊಲೀಸ್ ರೂಟ್ ಮಾರ್ಚ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾನೂನು ಸುವ್ಯವಸ್ಥೆ, ಕೋವಿಡ್ ಜಾಗೃತಿ ಮತ್ತು ಕಳವು ಪ್ರಕರಣಗಳಿಗೆ ಪೊಲೀಸರು ಸದಾ ಎಚ್ಚರಿಸಲಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಸದಾ ಇರಬೇಕೆಂದು ಪುತ್ತೂರು ಪೇಟೆಯಲ್ಲಿ ನ.12ರಂದು ರಾತ್ರಿ ೮ಗಂಟೆಗೆ ಸುಮಾರಿಗೆ ಪೊಲೀಸ್ ರೂಟ್ ಮಾರ್ಚ್ ಮೂಲಕ ಸಂದೇಶ ಸಾರಲಾಯಿತು.
ಪುತ್ತೂರು ನಗರ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಯ ಎಸ್.ಐ, ಎ.ಎಸ್.ಐ ಹಾಗೂ ಸಿಬ್ಬಂದಿಗಳು ನಗರ ಪೊಲೀಸ್ ಠಾಣೆಯಿಂದ ದರ್ಬೆಯ ತನಕ ರೂಟ್ ಮಾರ್ಚ್ ಮಾಡಿದರು. ರೂಟ್‌ಮಾರ್ಚ್ ಮುಂದೆ ಪೊಲೀಸ್ ಜೀಪು ಸೈರನ್ ಹಾಕಿಕೊಂಡು ಅದರ ಹಿಂದೆ ಸಿಬ್ಬಂದಿಗಳು ರೂಟ್ ಮಾರ್ಚ್ ಮಾಡಿದರು. ಎ.ಎಸ್ಪಿ ಲಖನ್‌ಸಿಂಗ್ ಯಾದವ್ ಅವರ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಗೋಪಾಲ್ ನಾಯ್ಕ್, ಎಸ್.ಐ ಜಂಬುರಾಜ್ ಮಹಾಜನ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್, ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಸೇಸಮ್ಮ ಮತ್ತು ಸಿಬ್ಬಂದಿಗಳು ರೂಟ್ ಮಾರ್ಚ್‌ನಲ್ಲಿದ್ದರು. ಈ ಮೂಲಕ ದೀಪಾವಳಿ ಸಂಭ್ರಮದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪೊಲೀಸರು ಸಂದೇಶ ಸಾರಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.