HomePage_Banner
HomePage_Banner
HomePage_Banner

ಕೋವಿಡ್‌ನಿಂದ ಹಣದ ಮುಗ್ಗಟ್ಟು – ಅಪರಾಧ ಚಟುವಟಿಕೆ ಸಾಧ್ಯತೆ | ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕಟಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ -19 ನಿಂದಾಗಿ ಹಣದ ಮುಗ್ಗಟ್ಟಿನಿಂದಾಗಿ ಅಪರಾಧ ಚಟುವಟಿಕೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕಟಣೆ ನೀಡಿದೆ. ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಕೋವಿಡ್-19 ಕಾರಣವಾಗಿ ಇತ್ತೀಚಿಗೆ ಹಣದ ಮುಗ್ಗಟ್ಟು ಕಂಡುಬಂದ ಕಾರಣ ಕಳ್ಳತನದ ಅಪರಾಧ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುವುದರಿಂದ ಕೆಲವೊಂದು ಅಗತ್ಯ ಕ್ರಮಗಳನ್ನು ಅನುಸರಿಸುವುದು ಹಾಗೂ ಜಾಗ್ರತೆಯನ್ನು ವಹಿಸಬೇಕು. ಅಡಿಕೆ ಬೆಳೆಗಾರರು/ ವ್ಯಾಪಾರಸ್ಥರು ಮುಂಜಾಗ್ರತಾ ಕ್ರಮವಾಗಿ ಗೋದಾಮಿಗೆ ಸಿಸಿ ಟಿವಿ ಅಳವಡಿಸುವುದು, ವ್ಯಾಪಾರಸ್ಥರು ಜಾಗೃತರಾಗಿ ಹಣವನ್ನು ಮನೆಯಲ್ಲಿ ಇಡದೆ ಬ್ಯಾಂಕ್‌ನ ಸೇಫ್ ಲಾಕರ್‌ನಲ್ಲಿ ಇಡುವುದು, ಮನೆಯಲ್ಲಿನ ಹೆಚ್ಚಿನ ಅಡಿಕೆ ರಾಶಿ/ ಮೋಟೆಗೆ ಕಾವಲುಗಾರರನ್ನು ನೇಮಿಸುವುದು, ದೈವ/ದೇವಸ್ಥಾನದ ಮುಖ್ಯಸ್ಥರು ಬೆಲೆಬಾಳುವ ಬೆಳ್ಳಿ ಬಂಗಾರದ ಆಭರಣಗಳನ್ನು ಮತ್ತು ಕಾಣಿಕೆ ಹುಂಡಿ ಕಾವಲಿಗೆ ಕಾವಲುಗಾರರನ್ನು ಅಥವಾ ಸಿಸಿಟಿವಿ ಅಳವಡಿಸುವುದು ಇಲ್ಲವಾದರೆ ಬ್ಯಾಂಕ್ ಸೇಫ್ ಲಾಕರ ನಲ್ಲಿ ಇಡುವುದು ದೈವ/ ದೇವಸ್ಥಾನದ ಆವರಣದ ಸುತ್ತ ಬೆಳಕಿನ ವ್ಯವಸ್ಥೆ ಮಾಡುವುದು, ದೈವ/ದೇವಸ್ಥಾನಕ್ಕೆ ಅರ್ಚಕರು /ಮುಖ್ಯಸ್ಥರು ಮೇಲಿಂದ ಮೇಲೆ ಭೇಟಿ ನೀಡುವುದು. ಸಾರ್ವಜನಿಕರು ಮುಂಜಾಗೃತ ವಾಗಿ ಸಾಕಷ್ಟು ಆಭರಣಗಳು ಅಥವಾ ಹಣವನ್ನು ಮನೆಯಲ್ಲಿ ಇಡದೆ ಬ್ಯಾಂಕ್ ಖಾತೆಗೆ ಜಮೆ ಮಾಡುವುದು, ಆಭರಣ/ ಹಣದೊಂದಿಗೆ ತೆರಳುವಾಗ ಜಾಗೃತಿ ವಹಿಸುವುದು, ಮನೆಮನೆಗೆ ಆಭರಣಗಳನ್ನು ಪಾಲಿಶ್ ಮಾಡುವುದಾಗಿ ಅಥವಾ ಬೆಡ್ ಶೀಟ್ (ಇತರ ಬಟ್ಟೆಗಳನ್ನು) ಮಾರಾಟ/ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದಾಗಿ ಬಂದಿರುತ್ತಾರೆ, ಅಂತವರವರೊಂದಿಗೆ ಮರುಳಾಗಿ ವ್ಯಾಪಾರ ಮಾಡದೆ ಎಚ್ಚರವಹಿಸುವುದು. ಯಾವುದೇ ಸಂಶಯಾಸ್ಪದ ವ್ಯಕ್ತಿ / ವಾಹನ ಕಂಡುಬಂದಲ್ಲಿ ಠಾಣಾ ಪೊಲೀಸ್ ಉಪನಿರೀಕ್ಷಕರು ಸಂಪ್ಯ ಮೊ: 9480805363 ಮತ್ತು ಠಾಣಾ ನಂಬ್ರ-08251-232102 ದೂರವಾಣಿ ಕರೆ ಮಾಡಿ ಮಾಹಿತಿ ನೀಡುವಂತೆ ಸಂಪ್ಯ ಪೊಲೀಸ್ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.