HomePage_Banner
HomePage_Banner
HomePage_Banner

ಬನ್ನೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಭೂಮಿ ರದ್ದು ಮಾಡದಿರಲು ಆಗ್ರಹ | ಸೀ ಫುಡ್ ಪಾರ್ಕ್ ಗೆ ಬೇರೆ ಸ್ಥಳ ನೋಡಲು ಒತ್ತಾಯ 

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ  40 ಎಕರೆ ಭೂಮಿಯನ್ನು ರದ್ದುಪಡಿಸಿ ಅನ್ಯ ಉದ್ದೇಶಕ್ಕೆ ಪರಭಾರೆ ಮಾಡದಿರುವಂತೆ ಆಗ್ರಹಿಸುತ್ತಿದ್ದೇನೆ.

ಬನ್ನೂರು ಗ್ರಾಮಕರಣಿಕರ ಪ್ರಕಟನೆಯ ಮೂಲಕ ಬನ್ನೂರು ಗ್ರಾಮದ ಸರ್ವೆ ನಂ.84 ರಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ  ಕಾಯ್ದಿರಿಸಿದ 40 ಎಕ್ರೆ ಭೂಮಿಯನ್ನು ರದ್ಧುಪಡಿಸಿ  ಸೀಫುಡ್ ಪಾರ್ಕ್ ಯೋಜನೆಗಾಗಿ ಪರಭಾರೆ ಮಾಡಲು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಟಿಪ್ಪಣಿ ಬರೆದಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಗ್ರಾಮ ಕರಣಿಕರ ಕಛೇರಿ 7 ದಿನಗಳ ಒಳಗೆ ಸಾರ್ವಜನಿಕ ಆಕ್ಷೇಪಣೆಗಳನ್ನು ಸಲ್ಲಿಸಲು ನೋಟಿಸ್ ಪ್ರಕಟಿಸಿರುತ್ತದೆ. 

  ಭವಿಷ್ಯದ ಜಿಲ್ಲಾ ಕೇಂದ್ರ ಎಂದೇ ಪರಿಗಣಿಸಲಾಗುತ್ತಿರುವ ಪುತ್ತೂರು ಶೈಕ್ಷಣಿಕ ಕೇಂದ್ರವೂ ಆಗಿ ರಾಜ್ಯದ ಗಮನ ಸೆಳೆದ ಊರು. ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಪುತ್ತೂರಿಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬರಬೇಕು ಎಂಬ ಒತ್ತಾಯ , ಬೇಡಿಕೆಗಳು ಬಂದಾಗ ಈ ಬೇಡಿಕೆಯ ಈಡೇರಿಕೆಯ ಪ್ರಾಥಮಿಕ ಅವಶ್ಯಕತೆಯಾದ ಭೂಮಿಯನ್ನು ಗುರುತಿಸಿ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಕಾಯ್ದಿರಿಸಿದ್ದು ಸ್ತುತ್ಯರ್ಹ ಕೆಲಸವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೂ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವ ಕೊರತೆಯನ್ನು ಮನಗಂಡು ಅದಕ್ಕಾಗಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸಿದ ಏಕೈಕ ತಾಲೂಕು  ಬಹುಶಃ ಜಿಲ್ಲೆಯಲ್ಲಿ ಪುತ್ತೂರು ಮಾತ್ರ. ಇದು ಮುಂದಿನ ದಿನಗಳಲ್ಲಿ ಮೆಡಿಕಲ್   ಕಾಲೇಜು ಮಂಜೂರಾಗಬಹುದಾದ ಭರವಸೆಯನ್ನೂ ಪುತ್ತೂರಿನ ಜನರಲ್ಲಿ ಹುಟ್ಟಿಸಿತ್ತು.
ಹೀಗಿರುವ ಪ್ರಸ್ತುತ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ಟಿಪ್ಪಣಿ ಅನುಸಾರ ಈ ಜಮೀನನ್ನು ಬೇರೊಂದು ಯೋಜನೆಗೆ ನೀಡಲು ಮುಂದಾಗಿರುವುದು ಪುತ್ತೂರಿನ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಆಘಾತಕಾರಿ ವಿಷಯವಾಗಿದೆ. ಆದ್ದರಿಂದ ಈ ಕೂಡಲೇ ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರು, ಪುತ್ತೂರಿನ ಶಾಸಕರು ಹಾಗೂ ಜಿಲ್ಲಾಡಾಳಿತ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಬನ್ನೂರು ಗ್ರಾಮದ  40 ಎಕರೆ ಭೂಮಿಯನ್ನು ಸರ್ಕಾರಿ  ಮೇಡಿಕಲ್ ಕಾಲೇಜಿಗಾಗಿಯೇ ಕಾಯ್ದಿರಿಸಿ ಸೀಫುಡ್ ಪಾರ್ಕ್ ಗೆ ಅನ್ಯ ಸ್ಥಳದ ಶೋಧನೆಯನ್ನು ಮಾಡಬೇಕಾಗಿ ಪುತ್ತೂರು ನಾಗರಿಕರ ಪರವಾಗಿ ವಿನಂತಿ. 

ಇದು ಪುತ್ತೂರಿನ ನಾಗರಿಕರಿಗೊಂದು ಸುವರ್ಣಾವಕಾಶವೂ ಹೌದು. ಸರ್ಕಾರಿ ಮೆಡಿಕಲ್ ಕಾಲೇಜಿಗೆ ಕಾಯ್ದಿರಿಸಿದ ಭೂಮಿಯನ್ನು ರದ್ಧುಪಡಿಸಲು ಹೊರಟ ಯೋಚನೆಯ ವಿರುದ್ಧ ಹೋರಾಟವನ್ನು ರೂಪಿಸುತ್ತಲೇ , ಪುತ್ತೂರಿನ ಬಹುಕಾಲದ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಒತ್ತಾಯಿಸಿ ರಾಜಕೀಯ ರಹಿತ ಆಂದೋಲನವನ್ನು ರೂಪಿಸಲು ಇದೊಂದು ಸದವಕಾಶ. ಈಗಾಗಲೇ ಚಿಕ್ಕಮಗಳೂರು , ಚಿತ್ರದುರ್ಗ , ಕೊಡಗು ಜಿಲ್ಲೆಗಳಲ್ಲಿ ಇಂತಹ ಹೋರಾಟ ಯಶಸ್ವಿಯಾಗಿದೆ ಕೂಡ.
ವಂದನೆಗಳೊಂದಿಗೆ,
– ಡಾ. ರೋಹಿಣಾಕ್ಷ ಶಿರ್ಲಾಲು, ಪುತ್ತೂರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.