HomePage_Banner
HomePage_Banner
HomePage_Banner

ಕುಂಬ್ರದಲ್ಲಿ ಉದಯ ರೈ ಮಂದಾರ ಮಾಲಕತ್ವದ ಮಾಣಿಕ್ಯ ವಾಣಿಜ್ಯ ಸಂಕೀರ್ಣ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಂಗಭೂಮಿ ಕಲಾವಿದ ಸುಂದರ ರೈ ಮಂದಾರರವರ ಸಹೋದರ ಜಿಲ್ಲಾ ಅಪರಾಧ ಪತ್ತೆ ದಳ(ಡಿಸಿಐಬಿ)ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದಯ ರೈ ಮಂದಾರ ಮಾಲಕತ್ವದ ಮಾಣಿಕ್ಯ ವಾಣಿಜ್ಯ ಸಂಕೀರ್ಣ ನ.12ರಂದು ಕುಂಬ್ರದಲ್ಲಿ ಉದ್ಘಾಟನೆಗೊಂಡಿತು. ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ರಿಬ್ಬನ್ ತುಂಡರಿಸುವ ಮೂಲಕ ಕಾಂಪ್ಲೆಕ್ಸ್ ಉದ್ಘಾಟಿಸಿ, ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಇಂತಹ ವಾಣಿಜ್ಯ ಸಂಕೀರ್ಣದ ಅಗತ್ಯತೆ ಇದೆ. ಶ್ರೀ ದೇವರ ಅನುಗ್ರಹ ಇರಲಿ ಎಂದು ಹೇಳಿ ಶುಭ ಹಾರೈಸಿದರು.

ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಬಾಲಕೃಷ್ಣ ರೈ ಮುಳ್ಳೇರಿಯಾ, ಶ್ರೀನಿವಾಸ ರೈ ಕುಂಬ್ರ, ಸುಂದರ ರೈ ಮಂದಾರರವರುಗಳು ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜೇಶ್ ರೈ ಪರ್ಪುಂಜ, ಸುರೇಂದ್ರ ರೈ ಬಳ್ಳಮಜಲು, ವಿಜಯಹರಿ ರೈ ಬಳ್ಳಮಜಲು, ಗಂಗಾಧರ ರೈ ಕುಯ್ಯಾರು ಮತ್ತಿತರರು ಉಪಸ್ಥಿತರಿದ್ದರು. ಮಾಲಕ ಉದಯ ರೈ ಮಂದಾರ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು. ಮಂದಾರ ಕುಟುಂಬಸ್ಥರು ಸಹಕರಿಸಿದ್ದರು.

ಮಾಣಿಕ್ಯ ವಾಣಿಜ್ಯ ಸಂಕೀರ್ಣವು ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರದಿಂದ ನೂರು ಮೀಟರ್ ದೂರದಲ್ಲಿದೆ. ಸುಂದರ ರೈ ಮಂದಾರರವರ `ಮಂದಾರ’ ಸಂಕೀರ್ಣದ ಪಕ್ಕದಲ್ಲೇ `ಮಾಣಿಕ್ಯ’ ಸಂಕೀರ್ಣ ಇದ್ದು ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ವಾಣಿಜ್ಯ ಸಂಕೀರ್ಣವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.