HomePage_Banner
HomePage_Banner

6ನೇ ತರಗತಿಯ ನಿವ್ಯ ರೈ ಪ್ರಧಾನಿಯಿಂದ ಪಡೆದಳು ಮೆಚ್ಚುಗೆ ಪತ್ರ


ಪುತ್ತೂರು : ಕೊರೋನಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಕಾರ್ಯವೈಖರಿಯ ಬಗ್ಗೆ ಧನ್ಯವಾದ ಹಾಗೂ ಮೆಚ್ಚುಗೆಯ ಬರಹದ ಪತ್ರ ಕಳುಹಿಸಿದ 11 ವರ್ಷದ ನಿವ್ಯ ರವರಿಗೆ ಪ್ರಧಾನಿಯಿಂದ ಕೆಲವೇ ದಿನಗಳಲ್ಲಿ ನಿವ್ಯರವರಿಗೆ ಮೆಚ್ಚುಗೆಯ ಧನ್ಯವಾದ ಪತ್ರ ತಲುಪಿದೆ. ಮಾಣಿ ಬರಿಮಾರು ಗ್ರಾಮದ ವಿಶ್ವನಾಥ್ ರೈ ಮತ್ತು ರೇಖಾ ರೈ ದಂಪತಿ ಪುತ್ರಿ, ಮಾಣಿ ಬಾಲವಿಕಾಸ ಶಾಲೆಯ ವಿದ್ಯಾರ್ಥಿ ನಿವ್ಯಾ ರೈ ರವರು ಸಣ್ಣ ವಯಸ್ಸಿನಲ್ಲಿಯೇ ಇಷ್ಟೊಂದು ಪ್ರಭುದ್ಧತೆ ಮೆರೆದಿದ್ದು ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ನಿವ್ಯಾರವರು ಪತ್ರದಲ್ಲಿ ನೀವು ಉತ್ತಮ ಪ್ರಧಾನಿ. ಕೋವಿಡ್ ಸಮಯದಲ್ಲಿ ಉತ್ತಮ ಕಾಯ್ನಿರ್ವಹಣೆ ಮಾಡಿದ್ದೀರಿ. ಎಂದು ಪ್ರಧಾನಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಪತ್ರಕ್ಕೆ ಪತ್ಯುತ್ತರವಾಗಿ ಪ್ರಧಾನಿಯವರು ನಿವ್ಯಾ ರೈ ರವರಿಗೆ ಶುಭಾಶಯ ಸೂಚಿಸಿ ಧನ್ಯವಾದ ಪತ್ರ ಕಳುಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.