HomePage_Banner
HomePage_Banner
HomePage_Banner

ಪಂಜಳದಲ್ಲಿ ವಿಶ್ವ ಜನರಲ್ ಸ್ಟೋರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

 

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ನರಿಮೊಗರು ಗ್ರಾಮದ ಪಂಜಳದ ಮುಲಾರ್ ಕಾಂಪ್ಲೆಕ್ಸ್‌ನಲ್ಲಿ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳ ಮಳಿಗೆ ವಿಶ್ವ ಜನರಲ್ ಸ್ಟೋರ್ ನ.13ರಂದು ಶುಭಾರಂಭಗೊಂಡಿತು.

ವಿಶ್ವಕಲಾ ನಿಕೇತನ ನೃತ್ಯ ಸಂಸ್ಥೆಯ ಮುಖ್ಯಸ್ಥೆ ನಯನಾ ವಿ.ರೈಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹಲವು ವರ್ಷ ವಿದೇಶದಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ಊರಿನಲ್ಲಿಯೇ ವ್ಯಾಪಾರ ಮಾಡುವ ಯೋಜನೆಯಿಂದ ಇಲ್ಲಿನ ಪಂಜಳದಲ್ಲಿ ದಿನಸಿ ಸಾಮಾಗ್ರಿಗಳ ಮಳಿಗೆಯನ್ನು ರಾಜ್‌ಕಮಾರ್ ಶೆಟ್ಟಿ ಹಾಗೂ ಆಸ್ತಿಕಾ ಶೆಟ್ಟಿರವರು ಆರಂಭಿಸಿದ್ದಾರೆ. ಕಲೆಯನ್ನು ಮುಂದುವರೆಸಿಕೊಂಡು ಬಂದವರಾದ ನಾವು ಇದೀಗ ವ್ಯಾಪಾರ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಇಲ್ಲಿನ ಪರಿಸರದ ಉತ್ತಮ ಮನಸ್ಸುಳ್ಳ ಜನರು ಈ ಸಂಸ್ಥೆಯನ್ನು ಪ್ರೋತ್ಸಾಹಿಸಿ ಆಶೀರ್ವದಿಸಬೇಕಾಗಿದೆ. ನನ್ನ ಗಂಡ ಕರ್ನಾಟಕ ಕಳಸ ಕುದ್ಕಾಡಿ ವಿಶ್ವನಾಥ ರೈಯವರು ಫ್ಯಾಮಿಲಿಗೆ ಸದಾ ಶ್ರದ್ಧೆ ಹಾಗೂ ಮಾರ್ಗದರ್ಶನ ನೀಡುತ್ತಾ ಬಂದವರು. ಪುತ್ತೂರಿನಿಂದ ಕೆಲವೇ ದೂರದಲ್ಲಿರುವ ಈ ಪಂಜಳ ಪರಿಸರ ಪ್ರಸ್ತುತ ಸಾಕಷ್ಟು ಬೆಳೆದಿದ್ದು, ನೂತನ ಸಂಸ್ಥೆಗೆ ಗ್ರಾಹಕರ ತುಂಬು ಹೃದಯದ ಪ್ರೋತ್ಸಾಹ ಸಿಗುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಹರೀಶ್ ರೈ ಅರ್ಕುಲ, ಸದಾಶಿವ ಶೆಟ್ಟಿ ಪಟ್ಟೆ, ಬಾಲಕೃಷ್ಣ ರೈ ಕುದ್ಕಾಡಿ, ವಿನೀತ್ ಸಂಪ್ಯ, ಅಬೂಬಕ್ಕರ್ ಪಂಜಳ ಸಹಿತ ಹಲವರು ಆಗಮಿಸಿ ಶುಭಹಾರೈಸಿದ್ದಾರೆ. ಮಾಲಕ ರಾಜ್‌ಕುಮಾರ್ ಶೆಟ್ಟಿಯವರ ಪತ್ನಿ ಆಸ್ತಿಕಾ ಶೆಟ್ಟಿ ಸ್ವಾಗತಿಸಿ, ಧನ್ಯ ವಂದಿಸಿದರು. ರಾಜ್‌ಕುಮಾರ್ ಶೆಟ್ಟಿಯವರ ಪುತ್ರಿ ಆಂಗಿಕಾ ಶೆಟ್ಟಿ ಉಪಸ್ಥಿತರಿದ್ದರು.

ನಮ್ಮಲ್ಲಿ ಮನೆಗೆ ಬೇಕಾದ ಅಗತ್ಯ ದಿನಸಿ ಸಾಮಾಗ್ರಿಗಳು, ತರಕಾರಿ, ಹಾಲು, ಫ್ಯಾನ್ಸಿ ಐಟಂ, ಗಿಪ್ಟ್ ಐಟಂ, ಕೂಲ್‌ಡ್ರಿಂಕ್ಸ್ ಇತ್ಯಾದಿ ದೊರೆಯುತ್ತಿದ್ದು, ಗ್ರಾಹಕರ ಪ್ರೋತ್ಸಾಹ ಹಾಗೂ ಆಶೀರ್ವಾದವನ್ನು ಆಶಿಸುತ್ತಿದ್ದೇವೆ. -ರಾಜ್‌ಕುಮಾರ್ ಶೆಟ್ಟಿ, ಮಾಲಕರು, ವಿಶ್ವ ಜನರಲ್ ಸ್ಟೋರ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.