HomePage_Banner
HomePage_Banner
HomePage_Banner

ಕಡಬ ಸಮುದಾಯ ಆಸ್ಪತ್ರೆಯಲ್ಲಿ ಎನ್.ಸಿ.ಡಿ ಮತ್ತು ಕೋವಿಡ್-19 ಉಚಿತ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1

ಕಡಬ ಸಮುದಾಯ ಆಸ್ಪತ್ರೆಯಲ್ಲಿಎನ್.ಸಿ.ಡಿ ಮತ್ತು ಕೋವಿಡ್-19 ಉಚಿತ ತಪಾಸಣಾ ಶಿಬಿರ

ಕಡಬ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಕಡಬ, ದ.ಕ.ಜಿಲ್ಲಾ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಕಡಬ ಇವರ ಸಹಯೋಗದೊಂದಿಗೆ ಬೃಹತ್ ಎನ್.ಸಿ.ಡಿ (ಅಸಾಂಕ್ರಮಿಕ ರೋಗಗಳು) ಮತ್ತು ಕೋವಿಡ್-19 ತಪಾಸಣಾ ಶಿಬಿರ ನ.13ರಂದು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಶಿಬಿರವನ್ನು ಕಡಬ ಜಿ.ಪಂ. ಸದಸ್ಯ ಪಿ.ಪಿ. ಪಿ.ಪಿ.ವರ್ಗೀಸ್  ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಡಬ ಸಮುದಾಯ ಆಸ್ಪತ್ರೆಯ ಅಭಿವೃದ್ದಿಗೆ ಸಂಬಂಧಪಟ್ಟು ನಾವು ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಿದ್ದೆವೆ, ಇಲ್ಲಿನ ವೈದ್ಯರ ಕೊರತೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದಲ್ಲಿ ಬಿ.ಪಿ.ಶುಗರ್,ಕ್ಯಾನ್ಸರ್ ಮತ್ತು ಕೋವಿಡ್ ಪರೀಕ್ಷೆ ನಡೆಯಲಿದ್ದು ಸಾರ್ವಜನಿಕರ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಕಡಬ ಗ್ರಾ.ಪಂ.ಮಾಜಿ ಸದಸ್ಯ ಶೆರೀಫ್ ಎ.ಎಸ್. ತೋಮಸ್ ಇಡೆಯಾಳ, ಅರಿವಳಿಕಾ ತಜ್ಞೆ ಡಾ.ನಯನಾ, ಹಿರಿಯ ಆರೋಗ್ಯ ಸಹಾಯಕಿ ತ್ರೇಸಿಯಮ್ಮ ಸೇರಿದಂತೆ ಆರೋಗ್ಯ ಸಹಾಯಕಿಯರು, ಆಶಾಕಾರ್ಯಕರ್ತೆಯರು ಸಿಬ್ಬಂದಿಗಳು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.