HomePage_Banner
HomePage_Banner
HomePage_Banner

ನೆಲ್ಯಾಡಿ ಮಾದೇರಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಉಗ್ರ ಪ್ರತಿಭಟನೆ ಜಯಾನಂದ ಬಂಟ್ರಿಯಾಲ್ ಪತ್ರಿಕಾಗೋಷ್ಠಿ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ ಮಾದೇರಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಉಗ್ರ ಪ್ರತಿಭಟನೆ

ಜಯಾನಂದ ಬಂಟ್ರಿಯಾಲ್ ಪತ್ರಿಕಾಗೋಷ್ಠಿ

ಕಡಬ: ನೆಲ್ಯಾಡಿ ಮಾದೇರಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ನ.25 ರಂದು ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆ ನದಿಯಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನೆಲ್ಯಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಹೇಳಿದರು.
ಅವರು ನ.13ರಂದು ಕಡಬ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೆಲ್ಯಾಡಿ ಮಾದೇರಿ ಸುಮಾರು ನಾಲ್ಕು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಾರಂಭಿಸಿದರೂ ರಸ್ತೆ ಮಧ್ಯ ಭಾಗದಲ್ಲಿ ರಸ್ತೆ ಅಗೆದು ಹಾಕಿ ಕಾಮಗಾರಿಯನ್ನು ಮುಂದುವರಿಸದೆ ಸಮಸ್ಯೆ ತಲೆದೋರಿದೆ ಎಂದು ಆರೋಪಿಸಿದರು. ನೆಲ್ಯಾಡಿ ಮಾದೇರಿ ರಸ್ತೆ ಅಭಿವೃದ್ಧಿಗೆ ಶಾಸಕರ ಶಿಫಾರಸ್ಸಿನಲ್ಲಿ ಬಿಡುಗಡೆಗೊಂಡ ಮಳೆಹಾನಿ ಯೋಜನೆಯ 20 ಲಕ್ಷ ರೂ ಅನುದಾನದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಈ ರಸ್ತೆಯ ಮಧ್ಯೆ 170 ಮೀಟರ್ ಉದ್ದದ ರಸ್ತೆಯನ್ನು ಇಂಜಿನಿಯರ್ ಅವರು ಅಂದಾಜು ಪಟ್ಟಿಯನ್ನು ವ್ಯತ್ಯಾಸ ಮಾಡಿದ್ದಲ್ಲದೆ, ರಸ್ತೆ ಅಗೆದು ಡಾಮಾರು ಕಿತ್ತು ಹಾಕಿದ್ದಾರೆ. ಬಳಿಕ ಕಾಮಗಾರಿ ಮುಂದುವರಿಸದೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಇಂಜಿನಿಯರ್ ಅವರಲ್ಲಿ ವಿಚಾರಿಸಿದರೆ ಇದಕ್ಕೆ ಬೇರೆ ಅಂದಾಜು ಪಟ್ಟಿ ಸಲ್ಲಿಸಿ ಶಾಸಕರಿಗೆ ನೀಡುತ್ತೇನೆ ಎಂದು ಹೇಳಿ ಹೋದವರು ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ಶಾಸಕರಲ್ಲಿ ಕೇಳಿದರೆ ಇದಕ್ಕೆ 25 ಲಕ್ಷ ರೂ ಅನುದಾನ ಇದೆ ಕಾಮಗಾರಿ ಪೂರ್ತಿ ಗೊಳಿಸಲು ಇಂಜಿನೀಯರ್ ಅವರಿಗೆ ಸೂಚಿಸಿರುವುದಾಗಿ ಭರವಸೆ ನೀಡಿದ್ದಾರೆ. ಭರವಸೆ ನೀಡಿ ನಾಲ್ಕು ತಿಂಗಳಾದರೂ ರಸ್ತೆಯ ಬಗ್ಗೆ ಕೇಳುವವರಿಲ್ಲ ಎನ್ನುವಂತಾಗಿದೆ. ಬಹು ಉಪಯೋಗಿಯಾಗಿರುವ ಈ ರಸ್ತೆಯನ್ನು ತಕ್ಷಣ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಇದಕ್ಕೆ ನಾವು 12 ದಿನಗಳ ಗಡುವು ನೀಡುತ್ತಿದ್ದೇವೆ. ತಪ್ಪಿದಲ್ಲಿ ನ.25 ರಂದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಜಯಾನಂದ ಇದರೊಂದಿಗೆ ನೆಲ್ಯಾಡಿ ಕೆ.ಎಸ್ಆರ್ ಟಿ ಸಿ ರಸ್ತೆಯನ್ನು ಸರಿಪಡಿಸಬೇಕು, ಪಶುವೈದ್ಯಾಧಿಕಾರಿಯನ್ನು ನೇಮಿಸಬೇಕು, ನೆಲ್ಯಾಡಿಯನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕು, ನೆಲ್ಯಾಡಿ ಪಡುವೆಟ್ಟು ರಸ್ತೆಯ ಹೊಸಹೊಕ್ಲು ಸೇತುವೆ ನಿರ್ಮಾಣ ಮಾಡಬೇಕು, ನೆಲ್ಯಾಡಿ ಕೊಪ್ಪ ಪುಚ್ಚೆದ್ಧಿಚ್ಚೂರು ರಸ್ತೆ, ನೆಲ್ಯಾಡಿ ಬೆಥನಿ ಪದಡ್ಕ ರಸ್ತೆಗಳ ಅಭಿವೃದ್ಧಿ, ನೆಲ್ಯಾಡಿಗೆ ಅಂಬ್ಯುಲೆನ್ಸ್ ಸೇವೆ ಪ್ರಾರಂಭಿಸಬೇಕು ಮುಂತಾದ ಬೇಡಿಕೆಗಳೊಂದಿಗೆ ಹೋರಾಟ ನಡೆಸಲಾಗುವುದು ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕ ವೆಂಕಟ್ರಮಣ ಆರ್, ಸಾಮಾಜಿಕ ಮುಂದಾಳುಗಳಾದ ಬಾಲಕೃಷ್ಣ ಶೆಟ್ಟಿ ನೆಲ್ಯಾಡಿ, ಜಿ.ವರ್ಗೀಸ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.