HomePage_Banner
HomePage_Banner
HomePage_Banner

ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ದ ನ.24ರಂದು ಕಡಬ ತಾಲೂಕು ಕಛೇರಿ ಎದುರು ಬೃಹತ್ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ದ
ನ.24ರಂದು ಕಡಬ ತಾಲೂಕು ಕಛೇರಿ ಎದುರು ಬೃಹತ್ ಪ್ರತಿಭಟನೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪೂರ್ವಭಾವಿ ಸಭೆ

ಕಡಬ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ದ ನ.24ರಂದು ಕಡಬದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಯಲಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದ್ದಾರೆ.
ಅವರು ನ.13ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಘಟನೆಯಿಂದ ಈ ಭಾಗದ ಕಸ್ತೂರಿ ರಂಗನ್ ವರದಿ ಭಾದಿತ ಪ್ರದೇಶಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಕಳೆದ ಹಲವಾರು ವರ್ಷಗಳಿಂದ ಒತ್ತಡ ಹೇರುತ್ತಲೇ ಬಂದಿದ್ದೆವು, ಆದರೆ ಸರಕಾರಗಳು, ಜನಪ್ರತಿನಿಧಿಗಳು ಭರವಸೆಗಳನ್ನು ನೀಡುತ್ತಲೇ ಬಂದಿದ್ದಾರೆ, ಮುಂದಿನ ದಿನಗಳಲ್ಲಿ ಈ ಭಾಗದ ಜನರ ಬದುಕಿಗೆ ತೊಂದರೆಯಾಗಬಾರದೆಂಬ ನೆಲೆಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ, ಪ್ರತಿಭಟನೆಯಲ್ಲಿ ಸಹಸ್ರಾರು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದ ಅವರು, ಪ್ರತಿಭಟನೆಯ ಪೂರ್ವಭಾವಿಯಾಗಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಗ್ರಾಮ ಸಮಿತಿಗಳ ವತಿಯಿಂದ ಮನವಿ ಸಲ್ಲಿಸುವುದು, ಅಲ್ಲದೆ ಬೈಕ್ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಲೆನಾಡು ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಹಾಜಿ ಸೈಯದ್ ಮೀರಾ ಸಾಹೇಬ್ ಪ್ರಾಸ್ತಾವಿಕವಾಗಿ ಮಾತನಾಡಿ ಹೋರಾಟದ ರೂಪುರೇಷೆಗಳನ್ನು ವಿವರಿಸಿದರು. ವೇದಿಕೆಯಲ್ಲಿ ಪ್ರಮುಖರಾದ ರಾಯ್ ಅಬ್ರಹಾಂ, ರವಿ ರುದ್ರಪಾದ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಹಾಜಿ ಹನೀಪ್ ಕೆ.ಎಂ, ಚಂದ್ರಶೇಖರ ಗೌಡ ಕೋಡಿಬೈಲು, ವಿಕ್ಟರ್ ಮಾರ್ಟಿಸ್,  ಕೃಷ್ಣಪ್ಪ ದೇವಾಡಿಗ, ಟಿ.ಕೆ. ಕುರಿಯನ್, ಸತೀಶ್ಚಂದ್ರ ಶೆಟ್ಟಿ ಬಲ್ಯ, ಯೂಸೂಪ್ ಐತ್ತೂರು, ಕ್ಸೇವಿಯರ್ ಬೇಬಿ, ಚಂದ್ರಶೇಖರ ಮರ್ದಾಳ, ಭರತ್ ಕನ್ನಡ್ಕ, ತನಿಯ ಮುಗೇರ, ಇಸ್ಮಾಯಿಲ್ ಹೊಸಮಠ, ಹರಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಕಡಬ ತಾಲೂಕು ಸಂಚಾಲಕ ಧನಂಜಯ ಕೊಡಂಗೆ ಸ್ವಾಗತಿಸಿ, ದೇವಪ್ಪ ಗೌಡ ಕ್ರೌಕ್ರಾಡಿ ವಂದಿಸಿದರು, ಮಹಮ್ಮದಾಲಿ ಹೊಸಮಠ ಕಾರ್ಯಕ್ರಮ ನಿರೂಪಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.