HomePage_Banner
HomePage_Banner
HomePage_Banner

ಪಂಚಕರ್ಮ, ಎಣ್ಣೆ ಅಂಗಮರ್ದನ ಥೆರಪಿ ಸೆಂಟರ್ `ಆಯುರ್ ಧಾರ’ ಆಯುರ್ವೇದ ಚಿಕಿತ್ಸಾಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
  • ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಯಶಸ್ವಿಯಾಗಲಿ- ಬೋರ್ಕರ್

ಪುತ್ತೂರು: ಆರೋಗ್ಯ ಕೆಡಿಸಿಕೊಂಡು ಬರುವಂತಹ ಜನರಿಗೆ ಅತ್ತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ, ತಮ್ಮ ಆರೋಗ್ಯ ವನ್ನು ಮರಳಿ ಪಡೆಯುವಲ್ಲಿ ತುಂಬಾನೇ ಮುತುವರ್ಜಿ ವಹಿಸಿ ಸೇವೆ ನೀಡಲಿ, ನಗು ಮೊಗದ ಸೇವೆಯಿಂದ ಅರ್ಧದಷ್ಟು ಖಾಯಿಲೆ ಯನ್ನು ವಾಸಿ ಮಾಡಬಲ್ಲದು, ಜಿಲ್ಲಾಕೇಂದ್ರ ವಾಗುತ್ತಿರುವ ಪುತ್ತೂರಿಗೆ ಇಂತಹದೊಂದು ಸಂಸ್ಥೆಯ ಅನಿವಾರ್ಯತೆ ಖಂಡಿತವಾಗಿಯು ಇದೆ. ಎಲ್ಲಾ ವರ್ಗದ ಜನರ ಸೇವೆ ಮಾಡಿ, ಪ್ರೀತಿ ಸಂಪಾದನೆ ಮಾಡಿ, ರಾಷ್ಟ್ರಮಟ್ಟದಲ್ಲೂ ಹೆಸರುಗಳಿಸಿ ಯಶಸ್ವಿಯಾಗಲಿ ಎಂದು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.

ಕೊಂಬೆಟ್ಟು ಬಂಟರ ಭವನ ಬಳಿಯ ಹೆಗ್ಡೆ ಕಾಂಪ್ಲೆಕ್ಸ್ ನಲ್ಲಿ ನ.13ರಂದು ಶುಭಾರಂಭಗೊಂಡ ಪಂಚಕರ್ಮ (ವಮನ ಕರ್ಮ,ವಿರೇಚನ ಕರ್ಮ,ರಕ್ತಮೋಕ್ಷಣ,ಬಸ್ತಿ ಕರ್ಮ ಹಾಗೂ ನಸ್ಯ ಕರ್ಮ )ಹಾಗೂ, ಎಣ್ಣೆ ಅಂಗಮರ್ದನ ಥೆರಪಿ ಸೆಂಟರ್ ಅಯುರ್ ಧಾರ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತಾಡಿದರು. ಅರ್ಚಕ ಶ್ರೀ ಕೃಷ್ಣ ಕೆಮ್ಮಿಂಜೆ ರವರು ಧಾರ್ಮಿಕ ಪೂಜಾ ವಿಧಿವಿಧಾನ ನೆರವೇರಿಸಿದರು. ಪಾಲುದಾರ ರವೀಂದ್ರ ನಾಯ್ಕರವರ ತಂದೆತಾಯಿ ಬೇಬಿ ಹುಕ್ರಪ್ಪ ಕೊಡಿಪ್ಪಾಡಿ ದೀಪ ಪ್ರಜ್ವಲನೆ ನೇರವೇರಿಸಿ ಹಾರೈಸಿದರು. ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ರವರು ವೈದ್ಯೆ ಡಾ.ಅಮಲ್ ಬಶೀರ್ ರವರ ಸೇವಾ ಕೊಠಡಿಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ನಾಡಿನ ಎಲ್ಲಾ ಜನರ ನೋವನ್ನು ನಿವಾರಿಸುವ ಕೆಲಸವನ್ನು ಮಾಡುವಲ್ಲಿ ಸಂಸ್ಥೆ ಯಶಸ್ವಿಯಾಗಿ ಆಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭಹಾರೈಸಿದರು.

ವೈದ್ಯೆ ಡಾ. ಅಮಲ್ ಬಶೀರ್ ರವರ ತಂದೆ ಬಶೀರ್ ಮಾತನಾಡಿ ಮನುಷ್ಯನ ಜೀವನದಲ್ಲಿ ಆಯುರ್ವೇದ ಔಷಧ ಬಳಕೆಯ ಮಹತ್ವ, ಅದರ ಲಾಭ ಹಾಗೂ ಅಲೋಪಥಿ ಔಷಧಿಯ ಕುರಿತಾದ ತೊಂದರೆ ಗಳನ್ನು ವಿವರಿಸಿ ಸಂಸ್ಥೆಯ ಶ್ರೇಯೊಭಿವೃದ್ಧಿಗೆ ಶುಭಹಾರೈಸಿದರು.

ಮಾಜಿ ಪುರಸಭಾ ಅಧ್ಯಕ್ಷ ಲೋಕೇಶ್ ಉರ್ಲಾಂಡಿ, ವಕೀಲ ದೀಪಕ್ ಬೊಳ್ವಾರ್, ಹೆಗ್ಡೆ ಕಾಂಪ್ಲೆಕ್ ಮ್ಹಾಲಕ ಗಿರಿಧರ್ ಹೆಗ್ಡೆ, ಪಾಲುದಾರ ಶಿವಪ್ರಸಾದ್ ಹೆಗ್ಡೆಯವರ ತಾಯಿ ಶಾರದಾ, ಪತ್ನಿ ಚೈತ್ರ, ಪುತ್ರಿ ಹನ್ವಿತಾ, ಸಹೋದರಿ ರೂಪಾ ವೆಂಕಟೇಶ್, ಇನ್ನೊರ್ವ ಪಾಲುದಾರ ರವೀಂದ್ರ ನಾಯ್ಕ್ ರವರ ಪತ್ನಿ ಪವಿತ್ರ, ಮಗಳು ಯುವಿಕಾ, ಸಹೋದರ ರಾಜೇಶ್ ಮೂಡಬಿದ್ರೆ, ಅನಂತೇಶ್ವರ ಬೆಟ್ಟಂಪಾಡಿ ಸಹಿತ ಹಲವು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

ಹರಿಹರ ರಾವ್, ನಿವೃತ್ತ ಶಿಕ್ಷಕ ಯಶವಂತ್ ಬೇಕಲ್, ಅಶೋಕ್ ಕುಂಬ್ಲೆ ಸಹಿತ ಗಣ್ಯರಿಗೆ ಪಾಲುದಾರರು ಹಾಗೂ ಮನೆಯವರು ಮತ್ತು ಮಾಜಿ ಕೊಡಿಪ್ಪಾಡಿ ಗ್ರಾ.ಪಂ ಸದಸ್ಯ ಗಿರೀಶ್ ಗೋಮುಖ ಹೂಗೂಚ್ಚ ನೀಡಿ ಗೌರವಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸನ್ಮಾನ
ಪುತ್ತೂರಿನ ಹಿರಿಯ ಚೇತನ ಸುದೀರ್ಘ 60 ವರುಷಗಳ ಕಾಲ ಡಾ. ಶಿವರಾಮ ಭಟ್ಟರ ಕೌಂಪೌಂಡರು ನರಸಿಂಹ ಭಟ್ ಇವರಿಗೆ ಗಣ್ಯರು ಶಾಲು ಹೊದಿಸಿ ಸಂಸ್ಥೆಯ ಪರವಾಗಿ ಸನ್ಮಾನಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.