HomePage_Banner
HomePage_Banner
HomePage_Banner

ಫೇಸ್‌ಬುಕ್ ಲವ್: ಹಿಂದೂ ಎಂದು ನಂಬಿಸಿ ಯುವತಿಗೆ ವಂಚನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಹಿಂದೂ ಎಂದು ನಂಬಿಸಿ ಫೇಸ್‌ಬುಕ್ ನಲ್ಲಿ ಯುವತಿಯ ಸ್ನೇಹಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ ಅಲ್ಲಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅನ್ಯ ಕೋಮಿನ ಯುವಕನೋರ್ವನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಕಡಬ ತಾಲೂಕು ಬಂಟ್ರ ಗ್ರಾಮದ ಮರ್ಧಾಳ ಪಾಲತ್ತಡ್ಕ ಮನೆ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಮಗನಾಗಿರುವ ೨೫ರ ಹರೆಯದ ಅಬ್ದುಲ್ ರಜಾಕ್ ಎಂಬಾತ ತನ್ನ ಹೆಸರನ್ನು ಖುಷಿಕ್ ಯಾನೆ ಸಂಜು ಎಂದು ಪರಿಚಯಿಸಿ, ತಾನು ಹಿಂದೂ ಧರ್ಮಾನುಯಾಯಿ ಎಂದೂ, ತನಗೆ ಹೆತ್ತವರಿಲ್ಲ. ತಾನು ಉತ್ತಮ ಸ್ನೇಹಿತರನ್ನು ಹೊಂದಲು ಬಯಸುವವನೆಂದು ತಿಳಿಸಿ ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಕೌಕ್ರಾಡಿ ಗ್ರಾಮದ ನೇತ್ರಾಳ ಮನೆ ನಿವಾಸಿ ೨೪ ರ ಹರೆಯದ ಯುವತಿಯೋರ್ವಳ ಗೆಳೆತನವನ್ನು ಬಯಸಿದ್ದ . ಯುವಕನ ಮಾತನ್ನು ನಂಬಿದ ಯುವತಿ ಸ್ನೇಹದ ಕೋರಿಕೆಯನ್ನು ಮನ್ನಿಸಿ ಬಳಿಕ ವಾಟ್ಸಪ್ ನಂಬ್ರವನ್ನೂ ನೀಡಿ ನಿರಂತರ ಸಂಪರ್ಕದಲ್ಲಿದ್ದರು. ಹಾಗೂ ಕಳೆದ ನವೆಂಬರ್ ೧ ರಂದು ಧರ್ಮಸ್ಥಳ ಯಾತ್ರೆಗೆ ಹೋಗುವ ಪ್ರಸ್ತಾವವನ್ನು ಮುಂದಿರಿಸಿದಾಗ ಯುವತಿಯು ಮನೆಯವರ ಒಪ್ಪಿಗೆ ಪಡೆದು ಆತನೊಂದಿಗೆ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದರು. ಈವೇಳೆ ಹಣೆ ತುಂಬಾ ದೇವರ ಪ್ರಸಾದವನ್ನು ನಾಮ ಬಳಿದು ಯುವತಿಯೊಂದಿಗೆ ಪೋಟೋ ತೆಗೆಸಿಕೊಂಡಿದ್ದ ರಜಾಕ್ ಬಳಿಕ ಆ ಪೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಯುವತಿಯ ತೇಜೋವಧೆಗೆ ಯತ್ನಿಸಿದ್ದ. ಈ ಬಗ್ಗೆ ಪರಿಶೀಲಿಸಿದಾಗ ಆರೋಪಿಯು ಹಿಂದೂ ಆಗಿರದೆ ಮುಸ್ಲಿಂ ಸಮುದಾಯದ ವ್ಯಕ್ತಿ ಎಂದು ತಿಳಿದು ಬಂದಿದ್ದು, ದುರುದ್ದೇಶಪೂರಿತವಾಗಿ ಈ ಕೃತ್ಯವೆಸಗಿರುವ ಬಗ್ಗೆ ಹಾಗೂ ಸುಳ್ಳು ಹೇಳಿ ವಂಚಿಸಿದ ಕಾರಣಕ್ಕೆ ಉಪ್ಪಿನಂಗಡಿ ಪೊಲಿಸರಿಗೆ ದೂರು ನೀಡಲಾಗಿದೆ.

ಆರೋಪಿಯು ಕನಕರಾಜು ಎಂಬ ಹೆಸರಿನಲ್ಲೂ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯನ್ನು ಹೊಂದಿರುವ ಬಗ್ಗೆಯೂ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲುಗೊಂಡಿದ್ದು, ತನಿಖೆ ನಡೆಯುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.