HomePage_Banner
HomePage_Banner
HomePage_Banner

ಅಂಗವಿಕಲರಿಗೆ ವೈದ್ಯಕೀಯ ಪ್ರಮಾಣಪತ್ರದಲ್ಲಿ ಗೊಂದಲ ಸೃಷ್ಟಿಸಿದ ಶಿಕ್ಷಣ ಇಲಾಖೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಂಗವಿಕಲ ಶಿಕ್ಷಕರಿಗೆ ಸರಕಾರದಿಂದ ಈ ಹಿಂದೆ ಕೊಡಮಾಡಿದ ಪ್ರಮಣಪತ್ರವನ್ನು ನಗಣ್ಯ ಎಂದು ತಿಳಿಸುವ ಮೂಲಕ ಶಿಕ್ಷಣ ಇಲಾಕೆ ಗೊಂದಲ ಸೃಷ್ಟಿಸಿದ್ದು ಇದು ಅಂಗವಿಕಲ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ವಿಕಚೇತನ ನೌಕರರ ಸಂಘ ದ ಕ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಪ್ಪ ರಾಥೋಡ್ ಆರೋಪಿಸಿದ್ದು ಇದರ ವಿರುದ್ದ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಈಗಾಗಲೇ ರಾಜ್ಯದ ಬಹುತೇಕ ವಿಕಲಚೇತನ ಶಿಕ್ಷಕರು ಶಾಶ್ವತ ಅಂಗವಿಕಲ ಪ್ರಮಣಪತ್ರ (ಯುಡಿಐಡಿಕಾರ್ಡ್) ಪಡೆದುಕೊಂಡಿರುತ್ತಾರೆ. ಈ ಕಾರ್ಡು ಶಾಶ್ವತವಾಗಿ ಬಳಕೆಯಲ್ಲಿರುತ್ತದೆ ಎಂದು ಸರಕಾರ ಆದೇಶ ಹೊರಡಿಸಿತ್ತು. ಇದೀಗ ರಾಜ್ಯದಾದ್ಯಂತ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ವಿಕಲಚೇತನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ವಿಕಲತೆಯ ಪ್ರಮಾಣಪತ್ರ ಕಡ್ಡಾಯವಾಗಿ ಇಲಾಖೆಗೆ ಸಲ್ಲಿಸಬೇಕಿದೆ. 2020 ಆಗಸ್ಟ್ ತಿಂಗಳ ನಂತರ ಮಾಡಿಕೊಂಡಿರುವ ಪ್ರಮಾಣಪತ್ರವನ್ನು ಮಾತ್ರ ಮಾನ್ಯ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಸೂಚನೆಯನ್ನು ಹೊರಡಿಸಿದೆ.

ಇಲಾಖೆಯ ಈ ಸೂಚನೆಯು ವಿಕಲಚೇತನ ಶಿಕ್ಷಕರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಶಿಕ್ಷಣ ಇಲಾಖೆಯ ಹೊಸ ಆದೇಶದಿಂದ ಆ. 2020ರ ಮೊದಲು ಪ್ರಮಣಪತ್ರವನ್ನು ಮಾಡಿಸಿಕೊಂಡ ವಿಕಲಚೇತನ ಶಿಕ್ಷಕರಿಗೆ ತೊಂದರೆಯುಂಟಾಗಿದೆ. ಆದರೆ ಸರಕಾರದಿಂದ ಈ ರೀತಿಯ ಯಾವುದೇ ಆದೇಶ ಬಂದಿಲ್ಲ. ಶಿಕ್ಷಣ ಇಲಾಖೆ ಮನಬಂದತೆ ಕಾನೂನು ಬದಲಾವಣೆ ಮೂಲ;ಕ ವಿಕಲಚೇತನ ಶಿಕ್ಷಕರ ವರ್ಗಾವಣೆಗೆ ಅಡ್ಡಿ ಮಾಡಿದ್ದಲ್ಲದೆ ಅವರ ಹಕ್ಕನ್ನು ಕಸಿಯುವ ಪ್ರಯತ್ನವನ್ನು ಮಾಡಿದೆ. ಶಿಕ್ಷಣ ಇಲಾಖೆ ತಕ್ಷಣವೇ ತನ್ನ ಈ ನಿರ್ಧಾರವನ್ನು ಬದಲಾಯಿಸಬೆಕು. ಸರಕಾರದ ಆದೇಶವನ್ನು ಉಲ್ಲಂಘಿಸಿ ಸ್ವಯಂ ನಿರ್ಧಾರವನ್ನು ಕೈಗೊಂಡಿರುವ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವಿಕಲಚೇತನ ಶಿಕ್ಷಕರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಬೇಕು ಇಲ್ಲವಾದರೆ ೨೦೧೬ ರ ಕಾಯ್ದೆ ಅಧಿನಿಯದಮ ನ್ಯಾಯಾಲಯದಲ್ಲಿ ಧಾವೆ ಹೂಡಲಾಗುವುದು ಎಂದು ಶಿವಪ್ಪ ರಾಥೋಡ್ ಎಚ್ಚರಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.