HomePage_Banner
HomePage_Banner

ಕಡಬದಲ್ಲಿ ರೈತ ಮಸೂದೆ-2020ರ ಸಾಧಕ-ಭಾದಕಗಳ ವಿಚಾರ ಸಂಕಿರಣ

ಕಡಬದಲ್ಲಿ ರೈತ ಮಸೂದೆ-2020ರ ಸಾಧಕ-ಭಾದಕಗಳ ವಿಚಾರ ಸಂಕಿರಣ

ಕಡಬ: ಈ ದೇಶವನ್ನು ಆಳಿದ ವಿರೋಧ ಪಕ್ಷಗಳು ರೈತ ಏಳಿಗೆಯನ್ನ ಬಯಸದೆ ದಲ್ಲಾಲಿಗಳ ಕೈಗೆ ರೈತರ ಬದುಕನ್ನು ಕೊಟ್ಟಿದ್ದು ಅದನ್ನು ತಪ್ಪಿಸಲು ನರೇಂದ್ರ ಮೋದಿ ನೇತೃತ್ವದ ಕೆಂದ್ರ ಸರಕಾರ ಎಪಿಎಂಸಿ ಕಾಯಿದೆ ತಿದ್ದುಪಡಿ ತಂದರೆ ಅದರ ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ನಡೆಸುತ್ತಿವೆ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಅವರು ಶುಕ್ರವಾರ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ಬಿಜೆಪಿ ಸುಳ್ಯ ಮಂಡಲ ರೈತ ಮೋರ್ಚಾದ ಆಶ್ರಯದಲ್ಲಿ ನಡೆದ ರೈತ ಮಸೂದೆ 2020ರ ಸಾಧಕ ಭಾದಕಗಳ ಬಗ್ಗೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತಪರ ಮಸೂದೆಯನ್ನು ಅನುಷ್ಠಾನ ಮಾಡುವಲ್ಲಿ ರಾಜ್ಯ ಸರಕಾರ ಕೂಡಾ ಅವಶ್ಯ ಕ್ರಮ ಕೈಗೊಳ್ಳುತ್ತಿದೆ, ಆದರೆ ಜನಸಾಮಾನ್ಯರಲ್ಲಿ ಮೂಡಿರುವ ಗೊಂದಲವನ್ನು ನಿವಾರಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ವಿಚಾರಗೋಷ್ಠಿ ಅನಿವಾರ್ಯವಾಗಿದೆ ಎಂದು ಬೊಳ್ಳೂರು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ಮಸೂದೆಗಳ ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ನಡೆಸುತ್ತಿವೆ, ರೈತರಿಗೆ ಅನುಕೂಲವಾಗಲಿರುವ ರೈತ ಮಸೂದೆಯ ಬಗ್ಗೆ ತಿಳಿದು ಜಾಗೃತಿ ಮೂಡಿಸುವ ಕಾರ್ಯ ನಾವು ಮಾಡಬೇಕಿದೆ ಎಂದರು. ಬಿಜೆಪಿ ರಾಜ್ಯ ಪ್ರಮುಖ ವಿಶ್ವೇಶ್ವರ ಭಟ್ ಬಂಗಾರಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಡಬ ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಲ ಕಲ್ತಡ್ಕ, ಬಿಜೆಪಿ ಪ್ರಾ.ಶಿಕ್ಷಣ ಪ್ರಕೋಷ್ಠದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಬಿಜೆಪಿ ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಎ.ಪಿ ಅತಿಥಿಗಳಾಗಿ ಭಾಗವಹಿಸಿದ್ದರು.
ಬಿಜೆಪಿ ರೈತ ಮೋರ್ಚಾದ ಸುಳ್ಯ ಮಂಡಲ ಅಧ್ಯಕ್ಷ ರಮೇಶ್ ಕಲ್ಪುರೆ ಸ್ವಾಗತಿಸಿದರು. ಬಿಜೆಪಿ ಮುಖಂಡ ಶಿವಪ್ರಸಾದ್ ರೈ ಮೈಲೇರಿ ವಂದಿಸಿದರು. ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶ್ರೀಕೃಷ್ಣ ಹೊಸಮಠ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.