HomePage_Banner
HomePage_Banner
HomePage_Banner

ಮೊಬೈಲ್ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ರಸ್ತೆ ಬದಿಯಲ್ಲಿ ಸಿಕ್ಕಿ ಬಿದ್ದ ಬೆಲೆಬಾಳುವ ಮೊಬೈಲನ್ನು ಅದರ ವಾರಿಸುದಾರರಿಗೆ ಹಿಂತಿರುಗಿಸುವ ಮೂಲಕ ಯುವಕನೋರ್ವ ಪ್ರಾಮಾಣಿಕತೆ ಮರೆದ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ನ.12ರಂದು ಸಂಜೆ ನಡೆದಿದೆ.

ಈಶ್ವರಮಂಗಲ ಪಾದೆಕರ್ಯ ನಿವಾಸಿ ಅನಿಲ್‌ಕುಮಾರ್ ಎಂಬವರು ಸಂಜೆ ಮನೆ ಕಡೆ ತೆರಳುವ ವೇಳೆ ಪುಳಿತ್ತಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ಮೊಬೈಲ್ ಬಿದ್ದುಕೊಂಡಿತ್ತು. ಅದನ್ನು ಈಶ್ವರಂಗಲ ಹೊರಠಾಣೆ ಪೊಲೀಸಿಗೆ ಒಪ್ಪಿಸಿದ್ದರು. ಮೊಬೈಲ್ ವಾರಿಸುದಾರರು ಬಂದಲ್ಲಿ ಅದನ್ನು ಮರಳಿಸುವಂತೆ ಪೊಲೀಸರಲ್ಲಿ ವಿನಂತಿ ಮಾಡಿ ತೆರಳಿದ್ದರು.

ನ. ೧೩ ರಂದು ಬೆಳಿಗ್ಗೆ ಮೊಬೈಲ್ ಕಳೆದುಕೊಂಡಿದ್ದ ಪುಳಿತ್ತಡಿ ನಿವಾಸಿ ಫೈಝಲ್ ಎಂಬವರು ಠಾಣೆಗೆ ಬಂದು ಮೊಬೈಲ್ ಗುರುತುಹೇಳಿ ಅದನ್ನು ಪಡೆದುಕೊಂಡಿದ್ದಾರೆ. ಬಿದ್ದು ಹೋಗಿರುವ ಮೊಬೈಲನ್ನು ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ತೋರಿದ ಅನಿಲ್‌ಕುಮಾರ್ ರವರಿಗೆ ಫೈಝಲ್ ಕೃತಜ್ಞತೆ ಸಲ್ಲಿಸಿದರು. ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ತಿಮ್ಮಯ್ಯ ಗೌಡರವರು ಮೊಬ್ಯಲನ್ನು ವಾರಿಸುದಾರರಿಗೆ ಹಸ್ತಾಂತರ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.