HomePage_Banner
HomePage_Banner
HomePage_Banner

ಸೀ ಫುಡ್ ಪಾರ್ಕ್ ಹೆಸರಿನಲ್ಲಿ ವೈದ್ಯಕೀಯ ಕಾಲೇಜಿಗೆ ಮೀಸಲಿರಿಸಿದ ಭೂಮಿ ಕಬಳಿಸಲು ಯತ್ನ : ಡಿವೈಎಫ್ಐ ವಿರೋಧ

Puttur_Advt_NewsUnder_1
Puttur_Advt_NewsUnder_1
ಪುತ್ತೂರು:  ಬನ್ನೂರು ಗ್ರಾಮದಲ್ಲಿ‌ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಉದ್ದೇಶಕ್ಕೆ  ಕಾಯ್ದಿರಿಸಲಾಗಿರುವ ನಲವತ್ತು ಎಕರೆ ಜಮೀನನ್ನು ರಾಜ್ಯ ಸರಕಾರ ಸೀಫುಡ್ ಪಾರ್ಕ್ ಯೋಜನೆಗೆ ಹಸ್ತಾಂತರಿಸಲು ಮುಂದಾಗಿರುವುದು ಖಂಡನೀಯ. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಕೂಗು ಜಿಲ್ಲೆಯಲ್ಲಿ ಬಲಗೊಳ್ಳುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರಕಾರ ತಕ್ಷಣ ಈ ಪ್ರಸ್ಥಾಪವನ್ನು ಕೈ ಬಿಟ್ಟು ಕಾಯ್ದಿರಿಸಿದ ಭೂಮಿಯಲ್ಲಿ ಮೂಲ ಯೋಜನೆಯಂತೆ ತಕ್ಷಣ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಿಸಲು ಮುಂದಾಗಬೇಕು, ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಳ್ಳಬೇಕು, ಆ ಮೂಲಕ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ, ಉತ್ತಮ ಚಿಕಿತ್ಸೆ ಜಿಲ್ಲೆಯ ಜನಸಾಮಾನ್ಯರಿಗೆ ದೊರಕಬೇಕು ಎಂಬುದು ಜನತೆಯ ಬಹುಕಾಲದ ಬೇಡಿಕೆ. ಎಂಟು ಖಾಸಗಿ ಮೆಡಿಕಲ್ ಕಾಲೇಜು ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಸರಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಬಲಗೊಂಡಾಗಲೆಲ್ಲ “ವೆನ್ ಲಾಕ್ ಸುತ್ತಮುತ್ತ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬೇಕಾದಷ್ಟು ಭೂಮಿಯ ಲಭ್ಯತೆ ಇಲ್ಲ” ಎಂಬ ನೆಪವನ್ನು ಮುಂದಿಟ್ಟು ಸರಕಾರ ಜಾರಿಕೊಳ್ಳುತ್ತಿತ್ತು.  ಇತ್ತೀಚಿನ‌ ವರ್ಷಗಳಲ್ಲಿ ಜನರ ಬೇಡಿಕೆ, ಖಾಸಗಿ ವೈದ್ಯಕೀಯ ಲಾಬಿಗಳ ವಿರುದ್ಧ ರ ಆಕ್ರೋಶ ಬಲಗೊಂಡ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣದ ಉದ್ದೇಶಕ್ಕಾಗಿ ನಲವತ್ತು ಎಕರೆ ಭೂಮಿ ಕಾಯ್ದಿರಿಸಲಾಗಿತ್ತು.‌ ಕೊರೋನ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಅತೀ ದುಬಾರಿ ದರಗಳಿಂದ ಕಂಗೆಟ್ಟ ಜನತೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಬೀದಿಗಿಳಿದು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ತೆರೆಯ ಮರೆಯಲ್ಲಿ ಕಾಯ್ದಿರಿಸಿರುವ ಜಮೀನು ಕಬಳಿಸುವ ಯತ್ನ ನಡೆದಿರುವುದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ.
ಜನತೆಯ ಹೋರಾಟ ತೀವ್ರಗೊಳ್ಳುತ್ತಿರುವ ಕಾರಣ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಳ್ಳುವ ಸಾಧ್ಯತೆಯಿಂದ ಜಿಲ್ಲೆಯ ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಪ್ರಬಲ ಲಾಬಿ ಆತಂಕಗೊಂಡಿದ್ದು ಸೀ ಫುಡ್ ಪಾರ್ಕ್ ನಿರ್ಮಾಣದ  ಹೆಸರಿನಲ್ಲಿ ಕಾಯ್ದಿರಿಸಿದ ಜಮೀನನ್ನು ಕಬಳಿಸಿ, ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣದ ಸಾಧ್ಯತೆಯನ್ನು ತಪ್ಪಿಸುವ ಯತ್ನ ಇಲ್ಲಿ ನಡೆದಿರುವುದು ಸ್ಪಷ್ಟ. ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರುಗಳು ಈ ಲಾಬಿಗಳ ಜೊತೆಗೆ ತೆರೆಯ ಮರೆಯಲ್ಲಿ ಕೈ ಜೋಡಿಸಿರುವ ಅನುಮಾನಗಳು ಕಂಡುಬರುತ್ತಿದೆ. ಯಾವುದೇ ಕಾರಣಕ್ಕೂ ಜನತೆ ಇದಕ್ಕೆ ಅವಕಾಶ ನೀಡಬಾರದು. ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಬೇಕಾದಷ್ಟು ಜಮೀನು ಉಳಿದೆಡೆ ಲಭ್ಯವಿದೆ.‌ ಬನ್ನೂರಿನ‌ ನಲವತ್ತು ಎಕರೆ ಜಮೀನು ಮೂಲ ಉದ್ದೇಶದಂತೆ ಸರಕಾರಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ನಿರ್ಮಾಣಕ್ಕಾಗಿಯೆ ಮೀಸಲಿಡಬೇಕು. ಸೀಫುಡ್ ಪಾರ್ಕ್ ಗಾಗಿ ಈ ಜಮೀನನ್ನು ವಶಪಡಿಸಿಕೊಳ್ಳುವ ಪ್ರಸ್ಥಾಪವನ್ನು ತಕ್ಷಣ ಕೈ ಬಿಡಬೇಕು. ಜಿಲ್ಲೆಯಲ್ಲೊಂದು ಸರಕಾರಿ ಮೆಡಿಕಲ್ ಕಾಲೇಜು ತುಳುನಾಡಿನ ಹಕ್ಕು, ಅದಕ್ಕೆ ಧಕ್ಕೆ ತರುವ ಇಂತಹ ಹುನ್ನಾರಗಳ ವಿರುದ್ದ ಜನರನ್ನು ಸಂಘಟಿಸಿ ಪ್ರಬಲ ಹೋರಾಟ ನಡೆಸಲಾಗುವುದು ಎಂದು ಮುನೀರ್ ಕಾಟಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.