HomePage_Banner
HomePage_Banner
HomePage_Banner
HomePage_Banner

ಆಂಬುಲೆನ್ಸ್ ಕುರಿತಾಗಿ ಮಾನಹಾನಿ ವರದಿ ಪ್ರಕಟ | ಈ ಟಿ.ವಿ.ಭಾರತ್ ವೆಬ್ ಸೈಟ್ ವಿರುದ್ಧ ಪೊಲೀಸರಿಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆಂಬುಲೆನ್ಸ್ ಕುರಿತಾದ ವರದಿಗಳಲ್ಲಿ ಸಂಬಂಧಪಡದ ಆಂಬುಲೆನ್ಸ್ ತೋರಿಸಿ ಮಾನಹಾನಿ ಮಾಡಿರುವ ಕುರಿತು ಈ ಟಿ.ವಿ.ಭಾರತ್ ಎಂಬ ವೆಬ್ ಸೈಟ್ ವಿರುದ್ಧ ಆಂಬುಲೆನ್ಸ್ ಚಾಲಕ ಕುರಿಯ ಗ್ರಾಮದ ಸಿರಾಜ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

‘ನಾನು ಎರಡು ಆಂಬುಲೆನ್ಸ್‌ಗಳನ್ನು(ಕೆಎ ೨೧-ಸಿ:೧೦೫೧, ಕೆಎ ೨೧-ಬಿ:೬೩೭೦)ಹೊಂದಿರುತ್ತೇನೆ.೧೨ ವರ್ಷಗಳಿಂದ ಪುತ್ತೂರು ಪರಿಸರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಮತ್ತು ಜನರ ಮೆಚ್ಚುಗೆಗೆ ಪಾತ್ರನಾಗಿರುತ್ತೇನೆ.ಹಲವಾರು ಸಂಕಷ್ಟದ ಸಮಯದಲ್ಲಿ ಉಚಿತವಾಗಿ ಆಂಬುಲೆನ್ಸ್ ಸೇವೆ ನೀಡಿರುತ್ತೇನೆ.ಇದೆಲ್ಲವನ್ನೂ ಕಂಡು ಸಹಿಸಲಾಗದ ಒಂದಷ್ಟು ಮಂದಿ ನನ್ನ ವಿರುದ್ಧ ಪಿತೂರಿ ನಡೆಸಿ ಈ ಟಿ.ವಿ.ಭಾರತ್ ವೆಬ್‌ಸೈಟ್‌ನಲ್ಲಿ ಮಾನಹಾನಿಕರ ಲೇಖನವನ್ನು ಪ್ರಕಟಿಸಿರುತ್ತಾರೆ.ಸದ್ರಿ ಲೇಖನದಲ್ಲಿ, ಅಕ್ರಮ ಚಟುವಟಿಕೆಗಳಲ್ಲಿ ಆಂಬುಲೆನ್ಸ್‌ನವರು ತೊಡಗಿದ್ದಾರೆ ಎಂಬುವುದಾಗಿ, ಮದ್ಯ ಸಾಗಾಟ ಎಂಬಿತ್ಯಾದಿ ಆರೋಪವನ್ನು ಹೊರಿಸಿ ನನ್ನ ಮಾಲಕತ್ವದ ಆಂಬುಲೆನ್ಸ್ ವಾಹನದ ಭಾವಚಿತ್ರವನ್ನು ಪ್ರಕಟಿಸಿ ನನ್ನ ಭಾವನೆಗೆ ಧಕ್ಕೆಗೊಳಿಸಿದ್ದಾರೆ.ಮತ್ತು ಇದರಿಂದ ನಾನು ಅಪಮಾನ ಹಾಗೂ ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ನನಗೆ ವ್ಯವಹಾರಕ್ಕೆ ಅಡ್ಡಿ ಉಂಟಾಗಿದೆ.ನನ್ನ ಕುಟುಂಬವು ನನ್ನ ವ್ಯವಹಾರದ ಆದಾಯದ ಮೇಲೆ ಅವಲಂಬಿಸಿದ್ದು ತೀವ್ರ ಖಿನ್ನತೆಗೆ ಒಳಗಾಗಿದ್ದೇನೆ.ಸಾರ್ವಜನಿಕ ಸೇವೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವ ಆಂಬುಲೆನ್ಸ್ ವಾಹನಗಳ ಮೇಲೆ ಈ ರೀತಿಯ ಅಪವಾದಗಳನ್ನು ಹೊರಿಸುತ್ತಿರುವುದು ಸರಿಯಲ್ಲ.ಸದ್ರಿ ಆಧಾರರಹಿತ ಮಾನಹಾನಿಕರ ವರದಿಯನ್ನು ಪ್ರಕಟಿಸಿದ ಈ ಟಿವಿ ಭಾರತ್ ಹಾಗೂ ವರದಿಗಾರರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು, ಅವರಿಂದ ನನಗಾದ ನಷ್ಟವನ್ನು ಪರಿಹಾರ ರೂಪದಲ್ಲಿ ಒದಗಿಸಿ ನನ್ನ ಬದುಕನ್ನು ನಿರ್ವಹಿಸುವಲ್ಲಿ ಭದ್ರತೆ ಮತ್ತು ಪರಿಹಾರವನ್ನು ನೀಡಬೇಕಾಗಿ ಕುರಿಯ ಗ್ರಾಮದ ಬಳ್ಳಮಜಲು ಮೊಯಿದುಕುಂಞಿಯವರ ಮಗ ಸಿರಾಜುದ್ದೀನ್‌ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂಘದಿಂದ ಸಿರಾಜ್ ಗೆ ಬೆಂಬಲ
ತಾನು ಈ ಟಿ.ವಿ ಭಾರತ್, ವಿ೪ ನ್ಯೂಸ್ ಚಾನೆಲ್ ಸಹಿತ ವಿವಿಧ ಮಾಧ್ಯಮಗಳ ವರದಿಗಾರ ಎಂದು ಹೇಳಿಕೊಂಡು ಪತ್ರಿಕಾ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಎಂಬಾತ ಸಂಬಂಧವೇ ಪಡದ ವ್ಯಕ್ತಿಗಳ ವಾಹನದ ಭಾವಚಿತ್ರವನ್ನು ಬಳಸಿ ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ. ಕುಡಿದು ಅಮಲೇರಿದ ಬಳಿಕ ಆತನಿಂದ ಈ ರೀತಿಯ ಕೃತ್ಯಗಳಾಗುತ್ತಿದ್ದರೂ ಪುತ್ತೂರು ಪತ್ರಕರ್ತರ ಸಂಘದ ಉಪಾಧ್ಯಕ್ಷನಾಗಿರುವುದರಿಂದ ಮತ್ತು ಹಿರಿಯ ಪತ್ರಕರ್ತರೊಬ್ಬರ ರಕ್ಷಣೆ,ಬೆಂಬಲ ಇರುವುದರಿಂದ ಬಚಾವಾಗುತ್ತಿರುವುದಾಗಿಯೂ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂತಹ ಪತ್ರಕರ್ತರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.