HomePage_Banner
HomePage_Banner
HomePage_Banner

ರಾಜ್ಯ ಸಭಾ ಸದಸ್ಯ ದಿ.ಅಶೋಕ‌ಗಸ್ತಿ ಜನ್ಮ‌ ದಿನಾಚರಣೆ-ಸವಿತಾ ಸಮಾಜದಿಂದ ರಕ್ತದಾನ‌ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯ ಸಭಾ ಸದಸ್ಯ ದಿ. ಅಶೋಕ ಗಸ್ತಿಯ 56ನೇ ಜನ್ಮ ದಿನಾಚರಣೆಯ ಅಂಗವಾಗಿ ನ.14 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರಕ್ತದಾನ ಶಿಬಿರವು ಆಯೋಸಿಲಾಗಿದ್ದು ತಾಲೂಕು ಸವಿತಾ ಸಮಾಜದ ವತಿಯಿಂದ ರಕ್ತದಾನ ಶಿಬಿರವು ಬ್ಲಡ್ ಬ್ಯಾಂಕ್ ನಲ್ಲಿ ನಡೆಯಿತು.

ಶಿಬಿರವನ್ನು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಓರ್ವ ಸಾಮಾನ್ಯ ಕಾರ್ಯಕರ್ತನಾಗಿದ್ದ ಅಶೋಕ ಗಸ್ತಿಯವರಿಗೆ ರಾಜ್ಯ ಸಭಾ ಸದಸನನ್ನಾಗಿ‌ ಆಯ್ಕೆ ಮಾಡುವ ಮೂಲಕ ಭಾರತೀಯ ಜನತಾ ಪಾರ್ಟಿಯು ಸವಿತಾ ಸಮಾಜಕ್ಕೂ ಪ್ರಾಧಾನ್ಯತೆ ನೀಡಿ ಅವರಿಗೆ ಉನ್ನತ ಸ್ಥಾನವನ್ನು‌ ನೀಡಿದೆ. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿಯನ್ನು ಆಯ್ಕೆ ಮಾಡುವಂತೆ ಸವಿತಾ ಸಮಾಜ ಮನವಿ ಮಾಡಿದ್ದು‌ ಪಕ್ಷದ‌ ಪ್ರಮುಖರ ಗಮನಕ್ಕೆ‌ ತರುವುದಾಗಿ ಅವರು ತಿಳಿಸಿದರು.

ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾತನಾಡಿ, ರಾಜ್ಯ ಸಭಾ ಸದಸ್ಯ ಅಶೋಕ ಗಸ್ತಿಯವರ ಮರಣ ಸಮಾಜದ‌ ದೊಡ್ಡ ಆಸಕ್ತಿಯನ್ನು ಕಳೆದುಕೊಂಡಂತಾಗಿದೆ. ಅವರ ಜೀವನವೇ ನಮಗೆಲ್ಲ ಆದರ್ಶ. ಅವರ ಹಾದಿಯಲ್ಲೇ‌ ನಾವು ಮುಂದುವರಿಯಬೇಕು ಎಂದ ಅವರು ರಕ್ತಕ್ಕೆ ಜಾತಿ,ಧರ್ಮವೆಂಬುದಿಲ್ಲ. ಇನ್ನೊಬ್ಬರ ಜೀವ ಉಳಿಸಲು ಆವಶ್ಯಕ ವಾಗಿರುವ ರಕ್ತದಾನದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜದ ಅಧ್ಯಕ್ಷ ಜಿ.ಬಿ‌ ವೆಂಕಟಕೃಷ್ಣ ಮಾತನಾಡಿ, ಕಾರ್ಮಿಕರಿಗೆ ಸರಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಕ್ಷೌರಿಕ ವೃತ್ತಿಯ ಕಾರ್ಮಿಕರಿಗೂ ನೀಡಬೇಕು. ರಾಜ್ಯ ಸರಕಾರ ಕೊರೋನಾ ಸಂದರ್ಭದಲ್ಲಿ ಕಾರ್ಮಿಕರಿಗೆ ರೂ.5000/ಘೋಷಣೆ ಮಾಡಿದ್ದರೂ‌ ಬ್ಯಾಂಕ್‌ ಗಳಲ್ಲಿನ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಅರ್ಹ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದರು.

ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ರಕ್ತದಾನದ‌ ಮಹತ್ವ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜಗದೀಶ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯ ಕುಮಾರ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.