HomePage_Banner
HomePage_Banner
HomePage_Banner

ಕುರಿಯ ಮಾಡಾವು ನಂಜೆ ಏಳ್ನಾಡು ಗುತ್ತು ಮನೆ, ದೈವಗಳ ಧರ್ಮ ಚಾವಡಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1
  • ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ: ರಾಧಾಕೃಷ್ಣ ರೈ
  • ಬ್ರಹ್ಮಕಲಶೋತ್ಸವ ಅಧ್ಯಕ್ಷ: ಎಸ್.ಬಿ. ಜಯರಾಮ ರೈ 
  • ಕಾರ್ಯದರ್ಶಿ: ರಾಜೇಂದ್ರ ಪ್ರಸಾದ್ ಶೆಟ್ಟಿ 
  • ಕೋಶಾಧಿಕಾರಿ: ಶಿವರಾಮ ರೈ ಜಾಲ್ಸೂರು

ಪುತ್ತೂರು: ತಾಲೂಕಿನ ಒಂದು ಪ್ರತಿಷ್ಠಿತ ಗುತ್ತು `ಕುರಿಯ ಏಳ್ನಾಡುಗುತ್ತು’ ಬೈರ ಅರಸರ ಆಡಳಿತದಲ್ಲಿ ಮಮ್ಮೂರಿ ದಂಡ ರಾಜಮುದ್ರೆ ಪ್ರಶಸ್ತಿ ದೊರೆತ ಗುತ್ತು ಎಂಬುದು ಪ್ರಸಿದ್ದಿಯಾಗಿದೆ. ಇದೀಗ ಈ ಗುತ್ತಿನಲ್ಲಿ ಸುಮಾರು ೨ ಕೋಟಿ ವೆಚ್ಚದಲ್ಲಿ ಸುಸಜ್ಜಿತ ‘ಏಳ್ನಾಡು ಗುತ್ತು ಮನೆ” ಮತ್ತು “ದೈವಗಳ ಚಾವಡಿ” ನಿರ್ಮಾಣಗೊಂಡು ೨೦೨೧ ಫೆ. ೨೦ ಮತ್ತು ೨೧ರಂದು ದೈವಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಜರಗಲಿದೆ. ಆ ಪ್ರಯುಕ್ತ ಕುರಿಯ ಏಳ್ನಾಡುಗುತ್ತು ಧರ್ಮದೈವದ ಚಾವಡಿಯಲ್ಲಿ ನ. ೧೧ರಂದು ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಕುಟುಂಬದ ಸರ್ವದೋಷ ನಿವಾರಣಾರ್ಥವಾಗಿ ದಕ್ಷಿಣಾಗ್ನಿ ಹೋಮ, ಆವಾಹನೆ, ಉಚ್ಛಾಟನೆ, ಗಣಹೋಮ ಮತ್ತು ಅನುಜ್ಞಾ ಕಲಶ, ತಂಬಿಲ ಹಾಗೂ ಬಾಲಾಲಯ ಪ್ರತಿಷ್ಠೆ, ಮೂಲ ನಾಗ ದೇವರಿಗೆ ಕಲಶಾಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಬಗ್ಗೆ ಸಮಾಲೋಚನಾ ಸಭೆಯು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕುರಿಯ ಏಳ್ನಾಡುಗುತ್ತು ರಾಧಾಕೃಷ್ಣ ರೈಗಳ ಅಧ್ಯಕ್ಷತೆಯಲ್ಲಿ ಜರುಗಿತು.

ರಾಧಾಕೃಷ್ಣ ರೈ, ಎಸ್.ಬಿ. ಜಯರಾಮ ರೈ ರಾಜೇಂದ್ರ ಪ್ರಸಾದ್ ಶೆಟ್ಟಿ, ಶಿವರಾಮ ರೈ ಜಾಲ್ಸೂರು

ಬ್ರಹ್ಮಕಲಶೋತ್ಸವ ಸಮಿತಿ ರಚನೆ
ಈ ಸಂದರ್ಭ ಬ್ರಹ್ಮಕಲಶೋತವ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಳಜ್ಜ ಜಯರಾಮ ರೈ, ಕಾರ್ಯದರ್ಶಿಯಾಗಿ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಮತ್ತು ಚಂದ್ರಹಾಸ ರೈ ಕುರಿಯ ಏಳ್ನಾಡುಗುತ್ತು, ಜತೆ ಕಾರ್ಯದರ್ಶಿಯಾಗಿ ಎಸ್. ಮಾಧವ ರೈ ಕುಂಬ್ರ ಮತ್ತು ಮಂಜುನಾಥ ರೈ ನಂಜೆ, ಕೋಶಾಧಿಕಾರಿಯಾಗಿ ಶಿವರಾಮ ರೈ ಜಾಲ್ಸೂರುರವರುಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೆ.ಎಂ. ವಿಶ್ವನಾಥ ರೈ ಮಾಡಾವು, ಬಿ. ದಯಾನಂದ ಆಳ್ವ ಸಣ್ಣತ್ತಡ್ಕ, ಸೀತಾರಾಮ ರೈ ಕುರಿಯ ಏಳ್ನಾಡುಗುತ್ತು, ಮೋಹನ ರೈ ಮಾಡಾವು ಏಳ್ನಾಡುಗುತ್ತು , ಮೋಹನ ರೈ ಕುರಿಯ ಏಳ್ನಾಡುಗುತ್ತು, ಸಂಜೀವ ರೈ ಕುರಿಯ, ಎಂ.ಬಿ. ಚೆನ್ನಪ್ಪ ರೈ ಬಳಜ್ಜ, ರೋಹಿತ್ ಭಂಡಾರಿ, ಉಪಾಧ್ಯಕ್ಷರುಗಳಾಗಿ ತಿಮ್ಮಣ್ಣ ಆಳ್ವ ಪೆರಡಾಲ, ಶಶಿಕಲಾ ರೈ ಕುರಿಯ ಏಳ್ನಾಡುಗುತ್ತು, ಬಾಲಚಂದ್ರ ರೈ ಕುರಿಯ ಏಳ್ನಾಡುಗುತ್ತು, ಜ್ಯೋತಿ ರೈ ಕುರಿಯ ಏಳ್ನಾಡುಗುತ್ತು, ಸಂಪತ್ ಆಳ್ವ, ಭರತ್ ಬಳ್ಳಾಲ್‌ರವರುಗಳನ್ನು ಆಯ್ಕೆ ಮಾಡಲಾಯಿತು. ವಿವಿಧ ಸಹ ಸಮಿತಿಗಳನ್ನು ರಚಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.