HomePage_Banner
HomePage_Banner
HomePage_Banner

ಕಾಣಿಯೂರು ಗ್ರಾ.ಪಂ,ನ ಪಿಡಿಓ ಜಯಪ್ರಕಾಶ್ ಹೆಚ್ಚುವರಿಯಾಗಿ ಎಡಮಂಗಲ ಗ್ರಾ.ಪಂ, ಅಭಿವೃದ್ಧಿ ಅಧಿಕಾರಿಯಾಗಿ ನೇಮಕ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್‌ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ಜಯಪ್ರಕಾಶ್ ಅವರನ್ನು ಎಡಮಂಗಲ ಗ್ರಾಮ ಪಂಚಾಯತ್‌ಗೆ ಅಭಿವೃದ್ಧಿ ಅಧಿಕಾರಿಯಾಗಿ ಹೆಚ್ಚುವರಿಯಾಗಿ ನೇಮಿಸಲಾಗಿದೆ. ಎಡಮಂಗಲ ಗ್ರಾ.ಪಂ,ನಲ್ಲಿ ಪಿಡಿಓ ಆಗಿದ್ದ ಸರಿತಾ ಓಲ್ಗಾ ಡಿ’ಸೋಜರವರ ವರ್ಗಾವಣೆ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಇವರನ್ನು ನೇಮಕ ಮಾಡಲಾಗಿದೆ. ಮೂಲತಃ ಸೋಮವಾರ ಪೇಟೆಯವರಾದ ಜಯಪ್ರಕಾಶ್‌ರವರು ೨೦೦೧ರಲ್ಲಿ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾ.ಪಂನ ಕಾರ್ಯದರ್ಶಿಯಾಗಿ ಸುಮಾರು ೫ ವರ್ಷ ಸೇವೆ ಸಲ್ಲಿಸಿದರು. ೨೦೦೬ರಿಂದ ೨೦೧೨ರವರೆಗೆ ಸುಳ್ಯ ತಾಲೂಕಿನ ಆರಂತೋಡು ಗ್ರಾ.ಪಂನಲ್ಲಿ ಪ್ರಭಾರ ಪಂಚಾಯತ್ ಅಭಿವೃದ್ಧಿಯಾಗಿ ಕರ್ತವ್ಯಕ್ಕೆ ಹಾಜರಾದರು.

ಬಳಿಕ ೨೦೧೩ರಿಂದ ಮಡಪ್ಪಾಡಿ ಗ್ರಾ.ಪಂ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಪ್ರಕಾಶ್‌ರವರು ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಕಚೇರಿ ಆಡಳಿತ ಶಾಖೆಯಲ್ಲಿ ವಿಷಯ ನಿರ್ವಾಹಕರಾಗಿ ಹೆಚ್ಚುವರಿಯಾಗಿ ಸೇವೆ ಸಲ್ಲಿಸಿದರು. ಇವರು ಗ್ರೇಡ್ ೧ ಕಾರ್ಯದರ್ಶಿಯಾಗಿ ಸವಣೂರು ಗ್ರಾ.ಪಂಗೆ ನೇಮಕಗೊಂಡು, ಬಳಿಕ ಪ್ರಭಾರ ಪಿಡಿಓ ಆಗಿ ಕಾಣಿಯೂರು ಗ್ರಾಮ ಪಂಚಾಯತ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಹೆಚ್ಚುವರಿ ಹುದ್ದೆಯಾಗಿ ಕಡಬ ತಾಲೂಕಿನ ಎಡಮಂಗಲ ಗ್ರಾಮ ಪಂಚಾಯತ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.