HomePage_Banner
HomePage_Banner
HomePage_Banner

ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
  • ವಿದ್ಯಾರ್ಥಿಗಳು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳುವುದು ಅನಿವಾರ್ಯ-ಪ್ರದೀಪ್ ಕುಮಾರ್ ಕಲ್ಕೂರ

ಕಡಬ: ಇಂದಿನ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗುತ್ತಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳುವುದು ಹೆತ್ತವರಿಗೆ ಅನಿವಾರ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯಪಟ್ಟರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ವತಿಯಿಂದ ಕಡಬ ದುರ್ಗಾಂಬಿಕಾ ಅಮ್ಮನವರ ದೇವಳದ ಸಭಾಂಗಣದಲ್ಲಿ ನಡೆದ ಕಡಬ ತಾಲೂಕಿನ ಸಾಧಕ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಮಾತೃ ಸಂಸ್ಕೃತಿಯ ತವರೂರು ಕನ್ನಡದ ನೆಲ. ಕನ್ನಡದ ಜಲ, ನೆಲಕ್ಕೆ ಸಮಸ್ಯೆಯಾದಾಗ ನಾವೆಲ್ಲ ಒಟ್ಟಾಗಬೇಕು. ಜೀವನ ಧರ್ಮ, ಸಾಂಪ್ರಾದಾಯಿಕ ಆಚರಣೆಗಳನ್ನು ಅರ್ಥೈಸಿಕೊಂಡು ಜೀವನ ಕಟ್ಟಿಕೊಂಡ ನಮ್ಮ ಹಿರಿಯರ ಅನುಕರಣೀಯ ಜೀವನ ಪದ್ದತಿಯನ್ನು ಕಿರಿಯರು ಅನುಸರಿಸಕೊಳ್ಳಬೇಕು, ಸಾಕಷ್ಟು ಭಾಷೆ ಅಭ್ಯಸಿಸುವ ತುಡಿತ ನಮ್ಮಲಿರಬೇಕು. ಭಾಷೆ ಬದಲಾವಣೆಯಾದಾಗ ಜೀವನ ಪದ್ದತಿಯಲ್ಲಿ ನಮ್ಮ ತನ ಬದಲಾವಣೆ ಆಗದೆ ನಮ್ಮತನವನ್ನು ಉಳಿಸಕೊಳ್ಳಬೇಕು ಪ್ರಕೃತಿ ಸಾಂಪ್ರಾದಾಯಿಕ ಆಚರಣೆಗಳ ವೈಜ್ಞಾನಿಕ ಸತ್ಯವನ್ನು ತಿಳಿದುಕೊಂಡು ಅದನ್ನು ನಾವು ಆಚರಣೆ ಮಾಡಬೇಕು ಈ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಅಂಕವೇ ಪ್ರಧಾನ ಅಲ್ಲ, ಅಂಕದ ಜತೆ ಜೀವನಪಾಠವನ್ನು ತಿಳಿದುಕೊಂಡು ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಕ.ಸಾ.ಪ ಕಡಬ ತಾಲೂಕು ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಕಡಬ ರೋಟರಿ ಕ್ಲಬ್ ಅಧ್ಯಕ್ಷ ವಿ.ಯಂ. ಕುರಿಯನ್, ಕಡಬ ತಾಲೂಕು ಉಪತಹಶೀಲ್ದಾರ್ ನವ್ಯಾ ಪಿ, ಮಾತನಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಲ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ ವರ್ಗಿಸ್, ತಾಲೂಕು ಪಂಚಾಯಿತಿ ಸದಸ್ಯರಾದ ಕುಸುಮಾ ಪಿ.ವೈ, ಫಝಲ್ ಕೋಡಿಂಬಾಳ, ಕ.ಸಾಪ ಕಡಬ ಘಟಕ ಪದಾಧಿಕಾರಿಗಳಾದ ನಾರಾಯಣ ಭಟ್ ಉಪಸ್ಥಿತರಿದ್ದರು. ಕ.ಸಾಪ ಕಡಬ ಘಟಕ ಗೌರವ ಕಾರ್ಯದರ್ಶಿ, ಉಪನ್ಯಾಸಕ ವಿಶ್ವನಾಥ ಪೆರ್ಲ ಪ್ರಸ್ತಾವಣೆಗೈದು ಸ್ವಾಗತಿಸಿದರು. ಶಿಕ್ಷಕ ಜಿ. ಮಾಯಿಲಪ್ಪ ಕಾರ್ಯಕ್ರಮ ನಿರೂಪಿಸಿದರು. ಕ.ಸಾ.ಪ, ಗೌರವ ಕಾರ್ಯದರ್ಶಿ ಸತೀಶ್ ನಾಯಕ್ ವಂದಿಸಿದರು, ಸದಸ್ಯರಾದ ಜಾನ್ ವೇಗಸ್, ಗ್ರೇಸಿ ಪಿಂಟೋ ಸಾಧಕ ವಿದ್ಯಾರ್ಥಿಗಳ ಪರಿಚಯ ವಾಚಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದ ಅನುಷ್ ಎ.ಎಲ್, ಅತ್ಯಧಿಕ ಅಂಕ ಗಳಿಸಿದ ಕೌಶಿಕ್ ರಾವ್, ಊರ್ವಿ.ಜಿ, ಶ್ರೀರಕ್ಷ ಎನ್, ಮಯೂರಿ ಎಂ.ಜಿ. ಕನ್ನಡ ಭಾಷೆಯಲ್ಲಿ ಶೇ.೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪೌರ್ಶಿ ವಿ. ರೈ, ಮಧುಶ್ರೀ ಕೆ.ಎಸ್. ಕಿರಣ್.ಎ, ಪ್ರಣಮ್ಯ.ಪಿ, ಅನಘಾ ಎಸ್.ಪಿ, ಗ್ರೀಷ್ಮ ಎಂ. ಕ್ಷೇಮ ಎಂ.ಎಂ. ದಿಶಾ ಎ. ಕೆ. ಕಿರಣ್, ಸೌಜನ್ಯ, ನಮೃತಾ ಸಿ.ಬಿ, ಸುಶ್ಮಿತಾ ಎಂ, ಬಿಂದು, ಭಾರ್ಗವಿ ಕೆ.ಆರ್, ಸಾಗರಿಕಾ ಪಿ.ಎಚ್, ಜಿ. ಸುಬ್ರಹ್ಮಣ್ಯ, ಶ್ರಾವ್ಯ ಕೆ.ಎಸ್. ನಿವೇದಿತಾ ಎಂ. ಶ್ರೀದೇವಿ ಮೊದಲಾದವರನ್ನು ಅಭಿನಂದಿಸಲಾಯಿತು. ಅಲ್ಲದೆ ಆಯ್ದ ಸಾಧಕ ವಿದ್ಯಾಸಂಸ್ಥೆಗಳಾದ ಕಾಣಿಯೂರು ಸರ್ಕಾರಿ ಪ್ರೌಢಶಾಲೆ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯ ಗುರುಗಳನ್ನು ಸನ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.