HomePage_Banner
HomePage_Banner
HomePage_Banner

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಶ್ರೀ ರಾಮಕೃಷ್ಣ ಪ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಚಾವಡಿ ತಮ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಲಸಿನ ಹಣ್ಣಿನ ತ್ಯಾಜ್ಯದಿಂದ ಇಂಧನ ತಯಾರಿಸಬಹುದು ಎಂದು ಸಂಶೋಧನೆಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಅವಳಿ ಸಹೋದರರಾದ ಪ್ರಖ್ಯಾತ್ ವೈ,ಬಿ ಮತ್ತು ಪ್ರಣವ್ ವೈ,ಬಿರವರಿಗೆ ಶಾಲೆಯ ವತಿಯಿಂದ ಚಾವಡಿ ತಮ್ಮದ ಮೂಲಕ ಅಭಿನಂದಿಸುವ ಕಾರ್‍ಯಕ್ರಮವು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ಚಾವಡಿಯಲ್ಲಿ ಜರಗಿತು.

ಸಂಸ್ಥೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಮಾಡಿರುವ ಸಾಧನೆಗಾಗಿ ನಾವು ವಿಶೇಷವಾಗಿ ಚಾವಡಿ ತಮ್ಮಾನದ ಮೂಲಕ ಗೌರವಿಸಿದ್ದೇವೆ, ಅವಳಿ ಸಹೋದರರಾದ ಪ್ರಖ್ಯಾತ್ ಮತ್ತು ಪ್ರಣವ್‌ರವರ ಸಾಧನೆಯಿಂದ ನಮ್ಮ ಸಂಸ್ಥೆಗೆ ಮತ್ತು ಭಾರತ ದೇಶಕ್ಕೆ ಗೌರವ ತಂದಿದೆ ಎಂದರು.

ಸಂಸ್ಥೆಯ ಮಾಜಿ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಕಾವು ಹೇಮನಾಥ ಶೆಟ್ಟಿರವರ ನಾಯಕತ್ವದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯು ಉತ್ತಮ ಹೆಸರನ್ನು ಪಡೆಯುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈ, ಮಹಿಳಾ ಬಂಟರ ಸಂಘದ ತಾಲೂಕು ಅಧ್ಯಕ್ಷೆ ಮೀರಾ ಭಾಸ್ಕರ್ ರೈ ಮಾದೋಡಿ, ಸಂಸ್ಥೆಯ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಡಾ.ಶ್ರೀಪ್ರಕಾಶ್‌ರವರುಗಳು ಸಂದಭೋಚಿತವಾಗಿ ಮಾತನಾಡಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಮಾತೃ ಸಂಘಧ ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೊಟ್ಟು, ರಮೇಶ್ ರೈ ಸಾಂತ್ಯ, ಬಂಟರ ಸಂಘದ ನಿಕಟಪೂರ್ವ ಕೋಶಾಧಿಕಾರಿ ರಮೇಶ್ ರೈ ಡಿಂಬ್ರಿ, ಸಂಸ್ಥೆಯ ಆಡಳಿತ ಸಮಿತಿಯ ಮಲ್ಲಿಕಾ ಜೆ ರೈ, ಹರಿಣಾಕ್ಷಿ ಜೆ.ಶೆಟ್ಟಿ, ಕಿರಣ ವಿ ರೈ, ಅನುಶ್ರೀ, ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್‍ಯದರ್ಶಿ ಪ್ರತಿಮಾ ರೈ, ಕೋಶಾಧಿಕಾರಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಹಾಗೂ ಪದಾಧಿಕಾರಿಗಳು, ಪ್ರಖ್ಯಾತ್ ವೈ,ಬಿ ಮತ್ತು ಪ್ರಣವ್ ವೈ,ಬಿರವರ ಪೋಷಕರಾದ ಯತೀಶ್‌ಚಂದ್ರ ಮತ್ತು ಹರಿಣಾಕ್ಷಿ ಹಾಗೂ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕಿಯವರು ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೂಪಕಲಾ ಸ್ವಾಗತಿಸಿ, ಶಿಕ್ಷಕಿ ಸ್ಮಿತಾ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.