HomePage_Banner
HomePage_Banner

ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಜಯಂತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ನೆಹರು ಪ್ರಧಾನಿ ಯಾಗದಿದ್ದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗುತ್ತಿರಲಿಲ್ಲ – ಭಾಸ್ಕರ ಗೌಡ ಕೋಡಿಂಬಾಳ

ಪುತ್ತೂರು: ನೆಹರು ಭಾರತ ದೇಶದ ಪ್ರಧಾನಿಯಾಗದಿದ್ದಲ್ಲಿ ಇಂದು ಕಾಶ್ಮೀರವು ಬೇರೆ ರಾಷ್ಟ್ರವಾಗಿ ಬೇರ್ಪಡುತ್ತಿತ್ತು. ಭಾರತದ ಭೂಪಟದಿಂದ ಅದು ಮಾಯವಾಗುತ್ತಿತ್ತು. ನೆಹರುರವರ ಪರಿಶ್ರಮದಿಂದ ಹಾಗೂ ಅಂದಿನ ಕಾಶ್ಮೀರದ ರಾಜ ಹರಿಸಿಂಗ್‌ರವರೊಮದಿಗೆ ಮಾಡಿಕೊಂಡ ಒಪ್ಪದಂತೆ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೋಟರಿ ಭಾಸ್ಕರ ಗೌಡ ಕೋಡಿಂಬಾಳರವರು ಹೇಳಿದರು.
ಅವರು ನ.೧೪ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂರವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷನಕಾರರಾಗಿ ಆಗಮಿಸ ಅವರು ಮಾತನಾಡಿದರು. ನೆಹರೂರವರು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ವಿವಿಧ ಸಂದರ್ಭದಲ್ಲಿ ಹತ್ತು ವರ್ಷ ಜೈಲು ವಾಸ ಅನುಭವಿಸಿ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಜವಹಾರ್ ಲಾಲ್ ನೆಹರು ರವರು ಬಳಿಕ ದೇಶದ ಪ್ರಪ್ರಥಮ ಪ್ರಧಾನಿಯಾಗಿ ದೇಶದ ವಿವಿಧ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಈ ದೇಶಕ್ಕೆ ಭದ್ರ ಬುನಾದಿಯನ್ನು ತಂದು ಕೊಟ್ಟ ಅಖಂಡ ಭಾರತದ ಹೆಮ್ಮೆಯ ಸುಪುತ್ರ ಜವಹಾರ್ ಲಾಲ್ ನೆಹರು ಆಗಿದ್ದಾರೆ ಎಂದರು.
ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದವರು ಭವ್ಯ ಭಾರತದ ಸಂಪತ್ತನ್ನು ಲೂಟಿ ಮಾಡಿದರು. ಬ್ರಿಟಿಷರನ್ನು ಈ ದೇಶದಿಂದ ಓಡಿಸುವ ಬಗ್ಗೆ ಕಾಂಗ್ರೆಸ್‌ನ ಜಾತ್ಯಾತೀತ ತತ್ವದ ನಾಯಕರು ತ್ಯಾಗ ಬಲಿದಾನದ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರಾಗಿದ್ದಾರೆ ಎಂದರು.
ಯಾವುದೇ ದೇಶವು ಜಾತ್ಯಾತೀತ ತತ್ವದ ಅಡಿಯಲ್ಲಿ ಮುನ್ನಡೆದರೆ ಆ ದೇಶವು ಅಭಿವೃದ್ಧಿ ಹೊಂದಲು ಪಡೆಯಲು ಸಾಧ್ಯ. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ನಾಯಕರುಗಳು ಜಾತ್ಯಾತೀತ ತತ್ವದ ಅಡಿಯಲ್ಲಿ ಮುನ್ನಡೆಯುವ ಮೂಲಕ ಭಾರತವು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾರ್ಪಾಡಲು ಸಾಧ್ಯವಾಗಿದೆ. ಇಂತಹ ಅಭಿವೃದ್ದಿ ಶೀಲ ರಾಷ್ಟ್ರದಲ್ಲಿ ಈಗಿನ ಬಿಜೆಪಿ ಸರಕಾರವು ಎಳೆ ಮಕ್ಕಳ ಮನಸಿನಲ್ಲಿ ಕೋಮುವಾದ ಬಿತ್ತುವ ಮೂಲಕ ಈ ದೇಶಕ್ಕೆ ಗಂಡಾಂತರ ತಂದುಕೊಟ್ಟಿದೆ ಎಂದರು. ಬಾಲ್ಯದಲ್ಲೆ ನಮ್ಮ ಮಕ್ಕಳಿಗೆ ಜಾತ್ಯಾತೀತ ತತ್ವದ ಅಡಿಯಲ್ಲಿ ಅವರಿಗೆ ವಿದ್ಯಾಭ್ಯಾ ಸ ನೀಡಬೇಕೆ ವಿನಃ ಅವರ ಮನಸ್ಸಿನಲ್ಲಿ ಕೋಮುವಾದವನ್ನು ಬಿತ್ತಿ ಈ ದೇಶವನ್ನು ಹಾಳು ಮಾಡಲು ಹೊರಟಿರವುದು ವಿಪರ್ಯಾಸ ಎಂದು ಹೇಳಿದರು. ನೆಹರು ಅವರು ಆಲಿಪ್ತ ನೀತಿ ಇಡೀ ವಿಶ್ವಕ್ಕೆ ಒಳಿತಾಗಿತ್ತು. ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಬಿಜೆಪಿಗೆ ಅಭಿವೃದ್ಧಿ ಬೇಡ. ಜಿಡಿಪಿ ಪಾತಾಳಕ್ಕೆ ಕುಸಿದರೂ ದೇಶದ ಅಭಿವೃದ್ಧಿ ಕುಂಠಿತಗೊಂಡರೂ ಬಜೆಪಿ ಓಟಿನಲ್ಲಿ ಗೆದಗ್ದು ಬರುತ್ತಿದೆ. ಅವರಿಗೆ ಅಭಿವೃದ್ಧಿ ಮಾಡದಿದ್ದರೂ ಕೋಮವಾದದಿಂದ ಗೆದ್ದು ಬರುತ್ತಿದೆ ಎಂದು ಅವರು ಹೇಳಿದರು.
ಸರಕಾರಿ ವೈದ್ಯಕೀಯ ಕಾಲೇಗೆ ಕಾಯ್ದಿರಿಸಿದ ಸ್ಥಳದಲ್ಲಿ ಬೇರೆ ಯೋಜನೆ ನಿಗದಿಪಡಿಸಿರುವುದಕ್ಕೆ ಬ್ಲಾಕ್ ಕಾಂಗ್ರೆಸ್ ವಿರೋಧ-ಮಹಮ್ಮದ್ ಬಡಗನ್ನೂರು
ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಮಹಮ್ಮದ್ ಬಡಗನ್ನೂರುರವರು ಮಾತನಾಡಿ ಬನ್ನೂರು ಗ್ರಾಮದಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿಗೆ ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಕಾಯ್ದಿರಿಸಿದ ೪೦ ಎಕ್ರೆ ಜಮೀನನ್ನು ರದ್ದು ಪಡಿಸಿ ಕೇಂದ್ರ ಸರಕಾರದ ಪ್ರಾಯೋಜಿಕ ಸೀ ಫುಡ್ ಮಾಡಲು ಹೊರಟಿರುವುದನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೊನೆ ತನಕ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಅವರು ಹೇಳಿದರು. ಕೇಂದ್ರ ಸರಕಾರ ಸೀ ಫುಡ್ ಯೋಜನೆಯನ್ನು ಪುತ್ತೂರಿನ ಯಾವುದೇ ಪ್ರದೇಶದಲ್ಲಿ ಮಾಡಲು ನಮ್ಮ ಅಭ್ಯಂತರವಿಲ್ಲ ಆದರೆ ಬನ್ನೂರಿನಲ್ಲಿ ವೈದ್ಯಕೀಯ ಕಾಲೇಜಿಗೆ ಕಾಯ್ದಿರಿಸಿದ ೪೦ ಎಕರೆ ಜಾಗವನ್ನು ಬೇರೆ ಯಾವುದೇ ಯೋಜನೆಗಳಿಗೆ ಉಪಯೋಗಿಸದೆ ಕಾಲೇಜಿನ ಸ್ಥಾಪನೆಗೆ ಒತ್ತ ನೀಡುವಂತಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಈ ಪ್ರದೇಶದಲ್ಲಿ ಕಾಲೇಜು ಸ್ಥಾಪನೆಗೆ ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳಾಗಲಿ ಆಗಲಿ ಅಥವಾ ಜಿಲ್ಲೆಯ ಯಾರೇ ಆಗಲಿ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಪುತ್ತೂರಿನ ಜನಪ್ರತಿನಿಧಿಗಳು ಮಾತ್ರ ವೈದ್ಯಕೀಯ ಕಾಲೇಜಿಗೆ ವಿರೋಧಿಸುತ್ತಿದ್ದಾರೆ. ಆದರೆ ಇಲ್ಲಿನ ಜನತೆ ಇದಕ್ಕೆ ಸರಿಯಾದ ಉತ್ತರ ನೀಡಬೇಕು ಮತ್ತು ಕಾಲೇಜು ಅಲ್ಲೇ ಸ್ಫಾಪನೆ ಆಗಬೇಕು ಎಂದು ಹೇಳಿದರು. ನೆಹರೂರವರು ಅಂದಿನ ಸಂದಿಗ್ದ ಪರಿಸ್ಥೊತಿಯಲ್ಲಿ ದೇಶಕ್ಕೆ ಬಹಳ ಅದ್ಬುತ ಕೊಡುಗೆ ನೀಡಿ ದೇಶವನ್ನು ಅಭಿವೃದ್ಧಿ ಪತದಲ್ಲಿ ಸಾಗಲು ಭಾರತದ ಆಧುನಿಕ ನಿರ್ಮಾಣದ ಕತೃರಾಗಿದ್ದರು. ಅಂತಹ ಅಭಿವೃದ್ಧಿ ಶೀಲ ರಾಷ್ಟ್ರವನ್ನು ಬಿಜೆಪಿಯ ಮೋದಿ ಸರಕಾರ ಮೋದಿ ಸರಕಾರ ನಾಶ ಪಡಿಸಿದ್ದು ಮುಂದಿನ ದಿನಗಳಲ್ಲಿ ಜನರಿಗೆ ಉಸಿರಾಡಲು ಸಾಧ್ಯವಾಗದಂತೆ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಎಂಬಿ ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿ ಯಾಕೂಬ್ ಹಾಜಿ ದರ್ಬೆ, ಸದಸ್ಯ ಐತಪ್ಪ ಪೇರಲ್ತಡ್ಕ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಜಿಲ್ಲಾ ಕಾಂಗ್ರೆಸ್ ನ ಸದಸ್ಯೆ ವಾಣಿ ಶ್ರೀಧರ್, ನಗರಸಭಾ ಸದಸ್ಯ ಯೂಸುಫ್ ಡ್ರೀಮ್ ಉಪಸ್ಥಿತರಿದ್ದರು. ಶಿವಾನಾಥ ರೈ ಮೇಗಿನಗುತ್ತು, ರೋಷಣ್ ರೈ ಬನ್ನೂರು, ಶಶಿಕಿರಣ ರೈ ನೂಜಿಬೈಲು ಇಸಾಕ್ ಸಾಲ್ಮರ, ನಾರಾಯಣ ನಾಯ್ಕ ಪಾಣಾಜೆ, ಗಂಗಾಧರ ಎಳಿಕ, ಆದಮ್ ಕಲ್ಲರ್ಪೆ, ಕೇಶವ ಪಡೀಲ್ ಮೊದಲಾದವರು ಉಪಸ್ಥಿತರಿದ್ದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಜೋಕಿಮ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ವಂದಿಸಿದರು. ಹಿರಿಯ ಕಾಂಗ್ರೆಸಿಗ ಯುನುಸ್ ಖಾನ್ ರವರು ನೆಹರುರವರ ಕವನ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.