HomePage_Banner
HomePage_Banner
HomePage_Banner

ನ.16(ನಾಳೆ) ಏಳ್ಮುಡಿಯಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ `ಪ್ರಾವಿಡೆನ್ಸ್ ಪ್ಲಾಝಾ’ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಜಿಲ್ಲಾ ಕೇಂದ್ರವಾಗಲು ಬಹುತೇಕ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಮುತ್ತಿನ ಊರು ಪುತ್ತೂರಿಗೆ ಈಗ ಮತ್ತೊಂದು ವಾಣಿಜ್ಯ ಸಂಕೀರ್ಣ ಲೋಕಾರ್ಪಣೆಯಾಗುತ್ತಿದೆ. ಏಳ್ಮುಡಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ `ಪ್ರಾವಿಡೆನ್ಸ್ ಪ್ಲಾಝಾ’ ವಾಣಿಜ್ಯ ಸಂಕೀರ್ಣವು ನ.16ರಂದು ಉದ್ಘಾಟನೆಗೊಳ್ಳಲಿದೆ.

ಸಿವಿಲ್ ಕನ್‌ಸ್ಟ್ರಕ್ಷನ್‌ನಲ್ಲಿ ಸುದೀರ್ಘ 30 ವರ್ಷಗಳ ಅನುಭವವಿರುವ ಜಯಕುಮಾರ್ ನಾಯರ್ ಹಾಗೂ ವಿವೈನ್ ಕ್ಯಾಸ್ಟಲಿನರವರ ಪಾಲುದಾರಿಕೆಯಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣಬಸ್ ನಿಲ್ದಾಣದಿಂದ ಅನತಿ ದೂರದಲ್ಲಿ ನಿರ್ಮಾಣಗೊಂಡಿದೆ.

೨೦,೦೦೦ ಚದರ ಅಡಿ ವಿಸ್ತೀರ್ಣ: ನೂತನ ವಾಣಿಜ್ಯ ಸಂಕೀರ್ಣ ೪ ಅಂತಸ್ತುಗಳನ್ನು ಹೊಂದಿದೆ. ಸುಮಾರು 20,000 ಚದರ ಅಡಿ ವಿಸ್ತೀರ್ಣವನ್ನು ಒಳಗೊಂಡಿದೆ. ನೆಲ ಮಹಡಿ ಹಾಗೂ ಮಳಿಗೆ ಮುಂಭಾಗ ಸೇರಿದಂತೆ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯಿದೆ. ಮಾಲ್‌ಗಳು, ಎಲೆಕ್ಟ್ರಾನಿಕ್ಸ್, ಜವುಳಿ, ಗೃಹಪಯೋಗಿ ಇನ್ನಿತರ ಬೃಹತ್ ಮಳಿಗೆಗಳನ್ನು ತೆರೆಯಲು ಅನುಕೂಲವಾಗುವಂತೆ ಕಟ್ಟಡವನ್ನು ನಿರ್ಮಿಸಲಾಗಿದೆ. ಜನರೇಟರ್ ಹಾಗೂ ನೀರಿನ ಸೌಲಭ್ಯವನ್ನು ಒಳಗೊಂಡಿದೆ.

ನೂತನ ವಾಣಿಜ್ಯ ಸಂಕೀರ್ಣವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಮಾಯಿದೇ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಜೆರೋಮ್ ಲಾರೆನ್ಸ್ ಮಸ್ಕರೇನಸ್ ಆಶೀರ್ವಚನ ನೀಡಲಿದ್ದಾರೆ. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಸದಸ್ಯರಾದ ಪಿ.ಜಿ ಜಗನ್ನಿವಾಸ ರಾವ್, ಪ್ರೇಮ್ ಕುಮಾರ್, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪಾಲುದಾರರಾದ ಕಲ್ಲಾರೆ ಜೆ.ಕೆ ಕನ್‌ಸ್ಟ್ರಕ್ಷನ್ ಸುನೀತಾ ಜೆ ನಾಯರ್ ಮತ್ತು ಜಯ ಕುಮಾರ್ ನಾಯರ್ ಮತ್ತು ದುಬೈ ಫ್ರಂಟ್‌ಲೈನ್ ಲಾಜಿಸ್ಟಿಕ್ಸ್‌ನ ರೀಜಿನಲ್ ಡೈರೆಕ್ಟರ್ ದಾಪ್ನೆ ಮತ್ತು ವಿವೈನ್ ಕ್ಯಾಸ್ಟೊಲಿನಾ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.