HomePage_Banner
HomePage_Banner
HomePage_Banner

ರೆಂಜದಲ್ಲಿ ಆನ್‌ಲೈನ್ ಸೇವೆಗಳ ಶಿವಂ ಡಿಜಿಟಲ್ ಸರ್ವಿಸಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ಎಲ್ಲಾ ರೀತಿಯ ಆನ್‌ಲೈನ್ ಸೇವೆ ಮತ್ತು ಇನ್ನಿತರ ಸೇವೆಗಳನ್ನು ಒಳಗೊಂಡ ‘ಶಿವಂ‌ ಡಿಜಿಟಲ್ ಸರ್ವಿಸಸ್’ ನ. 15 ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರಿಬ್ಬನ್ ಬಿಡಿಸಿ ಉದ್ಘಾಟಿಸಿದರು. ಸಂಸ್ಥೆಯ ಮ್ಹಾಲಕರಾದ ಸತ್ಯವತಿ ತಲೆಪ್ಪಾಡಿಯವರ ಪೋಷಕರಾದ ಕುಂಞಿಕೃಷ್ಣ ಮಣಿಯಾಣಿ, ಶ್ರೀಮತಿ ಲಲಿತಾ ಮತ್ತು ಶ್ರೀಮತಿ ಸರಸ್ವತಿ ಯವರು ದೀಪ ಬೆಳಗಿಸಿದರು.

ಬಳಿಕ ಮಾತನಾಡಿದ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರು ‘ಇಂದು ಕೇಂದ್ರ ಮತ್ತು ರಾಜ್ಯ ಸರಕಾರತಳು ಜನರಿಗಾಗಿ ನೂರಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಅವುಗಳ ಸರಿಯಾದ ಮಾಹಿತಿ ಜನರಿಗೆ ತಲುಪಿಸಬೇಕಾಗಿದೆ. ಆ ದಿಶೆಯಲ್ಲಿ ಈ ಸೇವಾ ಕೇಂದ್ರ ಕಾರ್ಯನಿರ್ವಹಿಸುವಂತಾಗಲಿ. ಪ್ರೀತಿ ಗೌರವದಿಂದ ಸೇವೆ ನೀಡುವಂತಾಗಲಿ. ನಾಲ್ಕು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವುದರಿಂದ ಉತ್ತಮ‌ ಜನಸಂಪರ್ಕ ಕೇಂದ್ರವಾಗಿ ಮೂಡಿಬರಲಿ. ಮಹಾಲಿಂಗೇಶ್ವರನ ಅನುಗ್ರಹ ಇರಲಿ ಎಂದರು.
ಯಾವುದೇ ಇಲಾಖೆಗಳ ಜೊತೆ ಸಂಪರ್ಕಕ್ಕಾಗಿ ವ್ಯವಸ್ತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್ ರೈ ಗುತ್ತು ಮಾತನಾಡಿ ‘ಕೇಂದ್ರ ಸರಕಾರದ ಜಲಚೇತನ ಯೋಜನೆಯನ್ನು ಗ್ರಾಮ ಮಟ್ಟ ಬೂತ್ ಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ ಸೈಬರ್ ಕೇಂದ್ರಗಳು ಅತೀ ಅಗತ್ಯ. ಬೆಟ್ಟಂಪಾಡಿ ಭಾಗದಲ್ಲಿ ಶಿವಂ ಕೇಂದ್ರ ಈ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸಲಿದೆ. ಹಳ್ಳಿಯಲ್ಲಿಯೇ ಯುವಕರು ಸ್ವಾಭಿಮಾನದ ಬದುಕು ನಡೆಸಲು ಹಲವು ಯೋಜನೆಗಳಿವೆ ಎಂದರು.

ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್. ಮಂಜುನಾಥ್‌ರವರು ಮಾತನಾಡಿ ‘ಸಿಎಸ್‌ಸಿ ಕೇಂದ್ರ ಮತ್ತು ವಕೀಲರ ಕಚೇರಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ‌ ಕಾರ್ಯನಿರ್ವಹಿಸುತ್ತವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಪರಿಣಾಮಕಾರಿಯಾಗಿ ತಲುಪುವ ಮೂಲಕ ಉತ್ತಮ‌ ಜನಸೇವಾ ಕೇಂದ್ರವಾಗಿ ಮೂಡಿಬರಲಿ’ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರು ಮಾತನಾಡಿ ‘ನನ್ನ ಅತುತ್ತಮ‌ ಆತ್ಮೀಯ ಶಿಷ್ಯರಿಂದ ಆರಂಭವಾಗಿರುವ ಸಂಸ್ಥೆ ಸಮಾಜದ ಎಲ್ಲಾ ವರ್ಗದವರಿಗೂ ಉತ್ತಮ ಸೇವೆ ನೀಡುವ ಸಂಸ್ಥೆಯಾಗಿ ಬೆಳೆದು ಬರಲಿ’ ಎಂದು ಶುಭ ಹಾರೈಸಿದರು.

ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್‌.ಸಿ. ನಾರಾಯಣ್ ರೆಂಜ, ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಬೆಟ್ಟಂಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ್ ರೈ ಚೆಲ್ಯಡ್ಕ, ಅಧ್ಯಕ್ಷ ನಾಗೇಶ್ ರೈ ಮೂರ್ಕಾಜೆ, ಡಾ. ಸತೀಶ್ ರಾವ್, ಬೆಟ್ಟಂಪಾಡಿ ಗ್ರಾ.ಪಂ. ಮಾಜಿ ಸದಸ್ಯ ಪ್ರಕಾಶ್ ರೈ ಬೈಲಾಡಿ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರನ್ ತಲೆಪ್ಪಾಡಿ, ಅರಿಯಡ್ಕ ಗ್ರಾ.ಪಂ. ಮಾಜಿ ಸದಸ್ಯ ಸದಾನಂದ ಕುರಿಂಜ, ಅರುಣ್ ಪ್ರಕಾಶ್ ರೈ ಮದಕ, ಡಾ. ಸುಬ್ರಹ್ಮಣ್ಯ ವಾಗ್ಲೆ, ಸತೀಶ್ ರೈ ಮೂರ್ಕಾಜೆ ಮತ್ತಿತರರು ಭೇಟಿ ನೀಡಿದ ಶುಭ ಹಾರೈಸಿದರು.

ಶಿವಪ್ರಸಾದ್ ತಲೆಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು‌. ರಂಜಿತ್ ತಲೆಪ್ಪಾಡಿ, ಕುಂಞಿಕೃಷ್ಣ ಮಣಿಯಾಣಿ, ಲಕ್ಷ್ಮಣ ಮಣಿಯಾಣಿ, ವಿನೋದ್ ತಲೆಪ್ಪಾಡಿ, ಲಲಿತಾ ತಲೆಪ್ಪಾಡಿ, ಸೌಮ್ಯ ಪುರುಷೋತ್ತಮ, ಪುರುಷೋತ್ತಮ ಮಣಿಯಾಣಿ ವಿವಿಧ ರೀತಿಯಲ್ಲಿ ಸಹಕರಿಸಿದರು.


ನೂತನ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಆನ್‌ಲೈನ್ ಸೇವೆಗಳು, ಮಗ್ ಪ್ರಿಂಟಿಂಗ್, ಕಲರ್ ಪ್ರಿಂಟ್ & ಜೆರಾಕ್ಸ್, ಟಿಕೆಟ್ ಬುಕ್ಕಿಂಗ್, ಐಡಿ ಕಾರ್ಡ್‌ಗಳು, ಬ್ಯುಸಿನೆಸ್ ಕಾರ್ಡ್‌ಗಳು, ವಾಹನ ವಿಮಾ ಸೌಲಭ್ಯ ಮತ್ತು ಯಾವುದೇ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಮ್ಹಾಲಕರಾದ ಸತ್ಯವತಿ ತಲೆಪ್ಪಾಡಿಯವರು ಈ ಸಂದರ್ಭದಲ್ಲಿ ತಿಳಿಸಿದರು.

  

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.