HomePage_Banner
HomePage_Banner
HomePage_Banner

ನರಿಮೊಗರು, ಶಾಂತಿಗೋಡು ಗ್ರಾಮಕ್ಕೆ ಖಾಯಂ ಪುರುಷ ಗ್ರಾಮ ಕರಣಿಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಎ.ಸಿ, ತಹಶೀಲ್ದಾರ್‌ಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನರಿಮೊಗರು ಮತ್ತು ಶಾಂತಿಗೋಡು ಗ್ರಾಮಕ್ಕೆ ಖಾಯಂ ಗ್ರಾಮ ಕರಣಿಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಸಹಾಯಕ ಕಮಿಷನರ್ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನರಿಮೊಗರು ಮತ್ತು ಶಾಂತಿಗೋಡು ಗ್ರಾಮಕ್ಕೆ ಒಂದೇ ಗ್ರಾಮಕರಣಿಕರು ಇರುವುದಾಗಿದೆ. ಸದ್ರಿ ಗ್ರಾಮ ಬಹು ವಿಸ್ತಾರವಾಗಿದ್ದು ಹಳ್ಳಿಗಾಡಿನೊಳಗೆ ಇದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಹಳ ದೂರವಿರುತ್ತದೆ. ಕಳೆದ 5 ವರ್ಷಗಳಿಂದ ಈ ಗ್ರಾಮಕ್ಕೆ ಖಾಯಂ ಆಗಿ ಯಾವುದೇ ಗ್ರಾಮಕರಣಿಕರ ನೇಮಕವಾಗಿರುವುದಿಲ್ಲ. ಪ್ರಸ್ತುತ ನಿಯೋಜನೆ ಮೇರೆಗೆ ಕದಂಬಾಡಿ ಗ್ರಾಮಕರಣಿಕರಾಗಿರುವ ಸುಜಾತಾರವರು ಕರ್ತವ್ಯ ನಿರ್ವಹಿಸುತ್ತಿದ್ದು ಮಹಿಳೆಯಾಗಿರುವ ಕಾರಣಕ್ಕೆ ಅವರಿಗೆ 2 ಗ್ರಾಮಗಳ ಕೆಲಸವನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ. ಇದೀಗ ಅವರು ಹೆರಿಗೆ ರಜೆಯಲ್ಲಿ ತೆರಳಿದ್ದು ಅವರ ಸ್ಥಾನಕ್ಕೆ ಪೃಥ್ವಿ ಎಂಬವರನ್ನು ನಿಯೋಜನೆ ಮಾಡಲಾಗಿರುತ್ತದೆ.

ಗ್ರಾಮದಲ್ಲಿ ಪೂರ್ಣಕಾಲಿಕವಾಗಿ ಪುರುಷ ಗ್ರಾಮಕರಣಿಕರ ಅವಶ್ಯಕತೆ ಇರುತ್ತದೆ. ಈ ಬಗ್ಗೆ ನಾವು 2020 ಫೆಬ್ರವರಿ 19ರಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಆದ್ದರಿಂದ ತಾವುಗಳು ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ಗ್ರಾಮದ ಜನರ ಹಿತದೃಷ್ಟಿಯಿಂದ ನರಿಮೊಗರು ಹಾಗೂ ಶಾಂತಿಗೋಡು ಗ್ರಾಮಕ್ಕೆ ಪುರುಷ ಗ್ರಾಮ ಕರಣಿಕರನ್ನು ಖಾಯಂ ಆಗಿ ನೇಮಕಾತಿ ಮಾಡಬೇಕೆಂದು ಆಗ್ರಹಿಸಿರುವ ಮನವಿಯನ್ನು ಎ.ಸಿ ಹಾಗೂ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.