HomePage_Banner
HomePage_Banner
HomePage_Banner

ಪುಣ್ಚತ್ತಾರಿನಲ್ಲಿ ಪ್ರೋ ವಾಲಿಬಾಲ್ ಪಂದ್ಯಾಟ – ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1
  • ಕಾರ್ಯಕ್ರಮ ಇಷ್ಟಪಟ್ಟು ಮಾಡಿದರೆ ಗೆಲುವು ನಮ್ಮದಾಗಲು ಸಾಧ್ಯ- ನವೀನ್ ಕೆ.ಎಸ್

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ನಿರಂತರವಾಗಿ 8 ವರುಷಗಳಿಂದ ಕ್ರೀಡೆಗಳು ಹಾಗೂ ರಾಷ್ಟ್ರೀಯ ವಿಚಾರಧಾರೆಗಳಿಗೆ ಹೆಚ್ಚು ಪ್ರೋತ್ಸಾಹವನ್ನು ಕೊಡುತ್ತಾ ಕಾರ್ಯಕ್ರಮಗಳ ಮೂಲಕ ಅನುಷ್ಠಾನಕ್ಕೆ ತಂದ ಕೀರ್ತಿ ಪುಣ್ಚತ್ತಾರಿನ ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ಗೆ ಸಲ್ಲುತ್ತದೆ. ಪ್ರತಿಯೊಂದು ಕಾರ್ಯಕ್ರಮಗಳನ್ನು ಇಷ್ಟಪಟ್ಟು ಮಾಡಿದರೆ ಗೆಲುವು ನಮ್ಮದಾಗಲು ಸಾಧ್ಯ ಎಂದು ಮಂಗಳೂರು ತುಂಬೆ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ್ ಕೆ.ಎಸ್ ಹೇಳಿದರು. ಅವರು ಪುಣ್ಚತ್ತಾರು ಶ್ರೀ ಹರಿ ಫೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ನ.14ರಂದು ಪುಣ್ಚತ್ತಾರಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ೮ನೇ ವರ್ಷದ ಪ್ರೋ ವಾಲಿಬಾಲ್ ಪಂದ್ಯಾಟ ಮತ್ತು sಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಗುಟ್ಟು ಕ್ರೀಡೆಗಳಲ್ಲಿ ಅಡಗಿದೆ. ಕ್ರೀಡೆಯಲ್ಲಿ ತೊಡಗಿಸಿ ಕೊಂಡವರಿಗೆ ಮಾತ್ರ ಅದರ ಲಾಭ ಸಿಗಲು ಸಾಧ್ಯ. ನಮ್ಮ ಸಂಸ್ಕೃತಿ ಮತ್ತು ಪ್ರಕೃತಿಯನ್ನು ಪ್ರತಿಬಿಂಬಿಸುವಂತಹ ಕ್ರೀಡೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ದೇಶ ಭಕ್ತಿಯೊಂದಿಗೆ ರಾಷ್ಟ್ರ ಕಟ್ಟುವ ಕಾಯಕವನ್ನು ಮಾಡೋಣ ಎಂದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಸಂಘಟನೆಯ ಮೂಲಕ ಯುವಕರು ಸಮಾಜಮುಖಿಗಳಾಗಿ ತೊಡಗಿಸಿಕೊಂಡಾಗ ಗ್ರಾಮದ ಅಭಿವೃದ್ದ್ಧಿ ಆಗುವುದರೊಂದಿಗೆ ದೇಶದ ಅಭಿವೃದ್ದಿ ಆಗಲು ಸಾಧ್ಯ. ಸಮಾಜದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾದುದು. ದೇಶದ ಭವಿಷ್ಯವಾಗಿರುವ ಯುವ ಸಮುದಾಯ ಸನ್ಮಾರ್ಗದಲ್ಲಿ ಮುನ್ನಡೆದು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ತಾವು ಗಳಿಸಿದ ಆದಾಯದ ಒಂದು ಅಂಶವನ್ನು sಸಮಾಜಕ್ಕೆ ಸಮರ್ಪಿಸುವಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು. ಪುಣ್ಚತ್ತಾರು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ರೇವತಿ ಮೂಡೈಮಜಲು, ಭಾರತೀಯ ಸೈನಿಕರಾದ ಭುವನ್ ಆಲಂಕಾರು, ಪುಣ್ಚತ್ತಾರು ಶ್ರೀ ಹರಿ ಪ್ರೇಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷರಾದ ಉತ್ತಮ್ ಕುಮಾರ್ ಮೇಲಾಂಟ, ಅಧ್ಯಕ್ಷರಾದ ಹರೀಶ್ ಕಟೀಲ್ ಪೈಕ, ಕಾರ್ಯದರ್ಶಿ ಮೋನಪ್ಪ ಬಂಡಾಜೆ ಉಪಸ್ಥಿತರಿದ್ದರು. ಕ್ಲಬ್‌ನ ಸದಸ್ಯರಾದ ದಿನೇಶ್ ಪೈಕ, ಧರ್ಮಪಾಲ ಬೆದ್ರಂಗಳ, ಪ್ರಶಾಂತ್ ಪೈಕ, ಜಯರಾಮ ನಳಿಯಾರು, ಮಾನಸ ಪುಣ್ಚತ್ತಾರು, ಚೇತನ್ ಬೆದ್ರಂಗಳ, ಮಿಥುನ್ ಪೈಕ, ಮಾಧವ ಕಲ್ಪಡ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕ್ಲಬ್‌ನ ಅಧ್ಯಕ್ಷರಾದ ಹರೀಶ್ ಕಟೀಲ್ ಪೈಕರವರು ಸ್ಮರಣಿಕೆ ನೀಡಿ ಗೌರವಿಸಿದರು. ಮಾನ್ಯ ಪುಣ್ಚತಾರು, ಮಾನಸ ಪುಣ್ಚತ್ತಾರು ಪ್ರಾರ್ಥಿಸಿದರು. ಕ್ಲಬ್‌ನ ಸದಸ್ಯರಾದ ದಿನೇಶ್ ಮಾಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ದೀಕ್ಷಿತ್ ಕಾರ್ಯ ವಂದಿಸಿದರು. ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಗಣೇಶ್ ನಡುವಾಳ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಸಮಾರಂಭ: ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಕೊರೋನಾ ವಾರಿಯರ್‍ಸ್ ಆಗಿ ಕರ್ತವ್ಯ ನಿರ್ವಹಿಸಿದ ಕಾಣಿಯೂರು ಆಶಾ ಕಾರ್ಯಕರ್ತೆಯವರಾದ ವಾರಿಜ ದೇವರಾಜ ಬೀಜತ್ತಡ್ಕ, ಕುಸುಮ ಧರ್ಮೇಂದ್ರ ಗೌಡ ಕಟ್ಟತ್ತಾರು ಇವರನ್ನು ಸನ್ಮಾನಿಸಲಾಯಿತು. ಮತ್ತು 2019-20ನೇ ಸಾಲಿನ 7ನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬೊಬ್ಬೆಕೇರಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸಿಂಚನ ಎಕ್ಕಡ್ಕ ಹಾಗೂ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕಾಣಿಯೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಧುಶ್ರೀ ಕಾಪೆಜಾಲು ಕುದ್ಮಾರು ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಉದ್ಘಾಟನಾ ಕಾರ್ಯಕ್ರಮ: ಬೆಳಿಗ್ಗೆ ಕಾರ್ಯಕ್ರಮವನ್ನು ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ ಬಿ.ಕೆ. ಮಾಧವ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಪುಣ್ಚತ್ತಾರು ಶ್ರೀಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಇಡ್ಯಡ್ಕ ವಹಿಸಿದ್ದರು. ಕರಿಮಜಲು-ಪೈಕ ಗ್ರಾಮ ದೈವಸ್ಥಾನದ ಅನುವಂಶಿಕ ಮೊಕ್ತೇಸರ ಪುಟ್ಟಣ್ಣ ಗೌಡ ಪೈಕ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ ರೈ ಕುಂಡುಳಿ, ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮಾಳ, ಶ್ರೀಹರಿ ಭಜನಾ ಮಂಡಳಿ ಪುಣ್ಚತ್ತಾರು ಇದರ ಅಧ್ಯಕ್ಷ ಸುಂದರ ನಾಯ್ಕ ಉಪ್ಪಡ್ಕ, ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್ ರೈ ಕುಂಡುಳಿ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಾಣಿಯೂರು ಒಕ್ಕೂಟದ ಪುಣ್ಚತ್ತಾರಿನ ಅಧ್ಯಕ್ಷ ರವಿಶಂಕರ ಎನ್.ಟಿ ಉಪಸ್ಥಿತರಿದ್ದರು. ಕ್ಲಬ್‌ನ ಸದಸ್ಯ ದಿನೇಶ್ ಮಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ರೈ ಕುಮೇರು ವಂದಿಸಿದರು.

ಪುಣ್ಚತ್ತಾರು ಶ್ರೀಹರಿ ಪ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ 8ನೇ ವರ್ಷದ ಆಯ್ದ ಸ್ಥಳೀಯ ಆಟಗಾರರ ನಿಗದಿತ ಆರು ತಂಡಗಳ ಪ್ರೋ ವಾಲಿಬಾಲ್ ಪಂದ್ಯಾಟದಲ್ಲಿ ಭವಿಷ್ ಕರಿಮಜಲು ಹಾಗೂ ರಘು ಅಯ್ಯಂಗರ್ ಬೇಕರಿ ಕಾಣಿಯೂರು ಮಾಲಕತ್ವದ ಅಯ್ಯಂಗರ್ ವಾರಿಯರ್‍ಸ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಆಬಿಲಾಷ್ ಮತ್ತು ಅಂಬರೀಶ್ ಬೀಜತ್ತಡ್ಕ ಮಾಲಕತ್ವದ ಐರಾ ಎಕ್ಸ್‌ಪ್ರೆಸ್ಸ್ ದ್ವಿತೀಯ ಸ್ಥಾನ ಪಡೆದುಕೊಂಡರೆ, ರಾಧಾಕೃಷ್ಣ ಗೌಡ ಪೈಕ ಮಾಲಕತ್ವದ ಆರ್.ಪಿ ವಾರಿಯರ್‍ಸ್ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.