HomePage_Banner
HomePage_Banner
HomePage_Banner

ಕುದ್ಮಾರು: ಗೋಪೂಜಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಚಿತ್ರ:ಸುಧಾಕರ್ ಕಾಣಿಯೂರು

ಕಾಣಿಯೂರು:ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಬೆಳಂದೂರು ವಲಯ ಇದರ ವತಿಯಿಂದ ಗೋಪೂಜಾ ಕಾರ್ಯಕ್ರಮವು ನ 15ರಂದುಕುದ್ಮಾರು ಜನೇಶ್ ಭಟ್ ಅವರ ಮನೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಸುಳ್ಯ ಬಿಜೆಪಿ ಯುವ ಮೋರ್ಚಾ ಮಂಡಲ ಸಮಿತಿ  ಪ್ರಧಾನ ಕಾರ್ಯದರ್ಶಿ ಚೇತನ್ ನಾವೂರು,  ಗೋವು ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ, ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಹಾಗೂ ನಮ್ಮ ದೇಶದ ರೈತನ ಜೀವನಾಡಿ. ಹಾಗಾಗಿ  ಮಾತೃ ಸ್ವರೂಪಿಯಾದ ಗೋವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಪ್ರಮುಖರಾದ ಯಶೋಧರ್ ಕೆಡೆಂಜಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬೆಳಂದೂರು ವಲಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸದಾನಂದ ಆಚಾರ್ಯ ಅಬೀರ, ಬರೆಪ್ಪಾಡಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಜನೇಶ್ ಭಟ್, ಬೆಳಂದೂರು ವಲಯ ಭಜರಂಗದಳ ಸಂಚಾಲಕರಾದ ಜಗದೀಶ್ ಅಗಳಿ, ಸಹಸಂಚಾಲಕ ಶಿವಪ್ರಸಾದ್ ನೂಜಿ, ಬರೆಪ್ಪಾಡಿ ಭಜರಂಗದಳ ಸಂಚಾಲಕರಾದ ಪ್ರವೀಣ್ ಕುದ್ಮಾರು, ಕುದ್ಮಾರು ತಿರಂಗಾ ವಾರಿಯರ್ಸ್ ಸಂಚಾಲಕ ಲೋಕೇಶ್ ಬರೆಪ್ಪಾಡಿ, ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ ಮತ್ತಿತ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.