HomePage_Banner
HomePage_Banner
HomePage_Banner

ಮಾಯಿದೆ ದೇವುಸ್ ಚರ್ಚ್ ನಲ್ಲಿ ಮಕ್ಕಳಿಗೆ ಪವಿತ್ರ ಪರಮಪ್ರಸಾದ

Puttur_Advt_NewsUnder_1
Puttur_Advt_NewsUnder_1

ಚಿತ್ರ:ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮೇರಿ ಮಾತೆಗೆ ಸಮರ್ಪಿಸಿದ ಮಾಯಿದೆ ದೇವುಸ್ ಚರ್ಚ್ ನಲ್ಲಿ ನ.15 ರಂದು ಮಕ್ಕಳಿಗೆ ಪವಿತ್ರ ಪರಮಪ್ರಸಾದ ನೀಡುವ ಬಲಿಪೂಜೆಯು ಚರ್ಚ್ ನ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನ್ಹಸ್ ರವರ ನೇತೃತ್ವದಲ್ಲಿ ನೆರವೇರಿತು.

ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿ 19 ವಾಳೆಗಳಿದ್ದು, ಈ ವಾಳೆಗಳಲ್ಲಿನ ಮೂರರಿಂದ ನಾಲ್ಕನೇ ತರಗತಿಯವರೆಗಿನ ಆಯ್ದ 27 ಮಂದಿ ಮಕ್ಕಳಿಗೆ ಪವಿತ್ರ ಪರಮಪ್ರಸಾದ ನೀಡಲಾಯಿತು. ಮಕ್ಕಳಿಗೆ ಬೈಬಲ್ ವಾಚಿಸಿದ ನೈನಾಡು ಚರ್ಚ್ ನ ಧರ್ಮಗುರು ವಂ.ಜೇಸುದಾಸ್ ರವರು, ಕ್ರೈಸ್ತ ಧರ್ಮದಲ್ಲಿ ಪವಿತ್ರ ಪರಮಪ್ರಸಾದ ಅವಿಭಾಜ್ಯ ಅಂಗವಾಗಿದೆ. ಪರಮಪ್ರಸಾದ ಎಂದರೆ ಯೇಸುಕ್ರಿಸ್ತರು ಪರಮಪ್ರಸಾದದ ಮುಖಾಂತರ ಮನುಷ್ಯನ ದೇಹವನ್ನು ಪ್ರವೇಶಿಸಿ ನಮ್ಮನ್ನು ಕಷ್ಟಗಳಿಂದ ಕಾಪಾಡುತ್ತಾನೆ ಎಂಬ ನಂಬಿಕೆ ಕ್ರೈಸ್ತ ಧರ್ಮದ್ದಾಗಿದೆ. ಮಕ್ಕಳಾಗಲಿ, ಯಾರೇ ಆಗಲಿ ಸಮಾಜದಲ್ಲಿ ಜೀವಿಸುವಾಗ ಎಲ್ಲರೊಂದಿಗೆ ಬ್ರಾತೃತ್ವವನ್ನು, ಪ್ರೀತಿಯನ್ನು ಮೈಗೂಡಿಸಿಕೊಂಡಾಗ ಜೀವನ ಉತ್ತಮ ದಿಶೆಯಲ್ಲಿ ಸಾಗಬಲ್ಲುದು ಮತ್ತು ದೇವರ ಆಶೀರ್ವಾದವು ಲಭಿಸಬಲ್ಲುದಾಗಿದೆ ಎಂದು ಹೇಳಿ ಮಕ್ಕಳ ಮುಂದಿನ ಜೀವನಕ್ಕೆ ಶುಭಹಾರೈಸಿ ಸಂದೇಶ ನುಡಿದರು.

ದಿವ್ಯ ಬಲಿಪೂಜೆಯಲ್ಲಿ ಸಹಾಯಕ ಧರ್ಮಗುರು ವಂ.ಲ್ಯಾರಿ ಪಿಂಟೋ, ಹಿರಿಯ ಧರ್ಮಗುರು ವಂ.ರೋಕಿ ಪಿಂಟೋ ಅಹಮದಾಬಾದ್, ಧರ್ಮಗುರುಗಳಾದ ವಂ.ಸುನಿಲ್ ಜಾರ್ಜ್ ರೊಡ್ರಿಗಸ್, ವಂ.ಅಶೋಕ್ ರಾಯನ್ ಕ್ರಾಸ್ತಾರವರು ಭಕ್ತಾಧಿಗಳೊಂದಿಗೆ ಪಾಲ್ಗೊಂಡರು. ಧರ್ಮಭಗಿನಿಯರಾದ ಸಿಸ್ಟರ್ ಫಿಲೋಮಿನಾ, ಸಿಸ್ಟರ್ ಪ್ರೇಮಾ ಡಿ’ಸೋಜಾರವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.