HomePage_Banner
HomePage_Banner
HomePage_Banner

ಪುತ್ತೂರು ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 18ನೇ ವರ್ಷದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
  • 6. 48 ಕೋಟಿ ರೂ, ಠೇವಣ ಸಂಗ್ರಹ
  • 5.44 ಕೋಟಿ ರೂ ಸಾಲ ವಿತರಣೆ
  • 22.53 ಲಕ್ಷ ರೂ ಲಾಭ, ಸದಸ್ಯರಿಗೆ 16 ಶೇಕಡಾ ಡಿವಿಡೆಂಡ್

ಪುತ್ತೂರು: ಇಲ್ಲಿನ ಸಿ.ಪಿ.ಸಿ ಸಂಕೀರ್ಣದಲ್ಲಿ ಕಾರ್‍ಯನಿರ್ವಹಿಸುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ನ.15ರಂದು ಸಂಸ್ಥೆಯಲ್ಲಿ ಜರಗಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಕೆ.ಕಸ್ತೂರಿ ಪ್ರಭುರವರು ಮಾತನಾಡಿ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯು ಕಳೆದ ೧೮ ವರುಷಗಳಿಂದ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, 41,08,650 ರೂ ಪಾಲು ಬಂಡವಾಳ ಇದ್ದು, 6,48,65,215.20 ರೂ, ಠೇವಣಾತಿ ಇದ್ದು, 5,44,83,915 ರೂ ಸಾಲ ನೀಡಲಾಗಿದ್ದು, ವರದಿ ವರ್ಷದಲ್ಲಿ 22,53,082.24 ರೂ ಲಾಭ ಬಂದಿದ್ದು, ಸದಸ್ಯರುಗಳಿಗೆ 16 ಶೇಕಡಾ ಡಿವಿಡೆಂಡ್‌ನ್ನು ನೀಡಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಬಿ.ವಸಂತ, ನಿರ್ದೇಶಕರುಗಳಾದ ದೀಪಾ ಪ್ರಭು, ಯು. ಬಾಲಕೃಷ್ಣ ನಾಯಕ್, ಪಾಂಡರಂಗ ಹೆಗ್ಡೆ, ಪುರುಷೋತ್ತಮ ಪ್ರಭು, ರಾಜರಾಮ್ ಪ್ರಭು, ಶಿವಾನಂದ ನಾಯಕ್, ಶಿವರಾಮ ಪ್ರಭು, ಸುಭಾಶ್ ನಾಯಕ್, ಸುಮಿತ್ರ ಪಿ, ಯತೀಂದ್ರನಾಥ್, ವಿದ್ಯಾ ನಾಯಕ್‌ರವರುಗಳು ಉಪಸ್ಥಿತರಿದ್ದರು.

ಸಂಸ್ಥೆಯ ಹಿರಿಯ ನಿರ್ದೇಶಕರುಗಳಿಗೆ ಸನ್ಮಾನ
ಸಂಸ್ಥೆಯ ಹಿರಿಯ ನಿರ್ದೇಶಕರುಗಳಾದ ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಪ್ರಭು, ಯತೀಂದ್ರನಾಥ್ ಹಾಗೂ ಸುಮಿತ್ರ ಪಿರವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದಲ್ಲಿ ಅಜಿತ್ ಕುಮಾರ್ ಜೈನ್ ಕಲ್ಲೇಗ, ಸೀತಾರಾಮ ಪ್ರಭು, ಪ್ರಾನ್ಸಿಸ್ ವೇಲೇರಿಯನ್ ಲೋಬೋ, ದಾಬೋಳಿ ಶ್ರೀ ಗುರು ಪೂರ್ಣನಂದ ಭಜನಾ ಮಂದಿರದ ಗೌರವಾಧ್ಯಕ್ಷೆ ವಿಮಲ ನಾಯಕ್ ಉಪಸ್ಥಿತರಿದ್ದರು. ಸುಮಾರು 75 ಮಂದಿ ಸದಸ್ಯರುಗಳು ಭಾಗವಹಿಸಿದ್ದರು. ಸತೀಶ್ ಮಣಿಯ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು, ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ವಿಶಾಲಾಕ್ಷಿ ವಂದಿಸಿದರು. ಸಂಸ್ಥೆಯ ಸಿಬ್ಬಂಧಿಗಳು ಮತ್ತು ಪಿಗ್ಮಿ ಸಂಗ್ರಾಹಕರು ಕಾರ್‍ಯಕ್ರಮದಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.