HomePage_Banner
HomePage_Banner
HomePage_Banner

ರಾಮಕುಂಜ: ಯಾಕೂಬ್‌ರವರಿಂದ ದೀಪಾವಳಿ ಕಿಟ್ ವಿತರಣೆ, ಸನ್ಮಾನ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಗುತ್ತಿಗೆದಾರ ಯಾಕೂಬ್ ನೆಲ್ಯೊಟ್ಟರವರಿಂದ ತನ್ನ ಜೊತೆಗೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ದೀಪಾವಳಿ ಕಿಟ್ ವಿತರಣೆ ಹಾಗೂ ಸುಮಾರು ೩೦ವರ್ಷಗಳಿಂದ ಕಾರ್ಮಿಕರಾಗಿ ದುಡಿಯುತ್ತಿರುವ ನೇಮಣ್ಣ ಪೂಜಾರಿಯವರಿಗೆ ಸನ್ಮಾನ ಕಾರ್ಯಕ್ರಮ ರಾಮಕುಂಜ ಗ್ರಾಮದ ಹಲ್ಯಾರದಲ್ಲಿರುವ ಅವರ ಮನೆಯಲ್ಲಿ ನ.14ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸತೀಶ್ ಭಟ್‌ರವರು ಮಾತನಾಡಿ, ಸಮಾಜದಲ್ಲಿ ಅತೀ ಹೆಚ್ಚು ತುಳಿತ, ಶೋಷಣೆಗೆ ಒಳಗಾಗುತ್ತಿರುವವರು ಕೂಲಿಕಾರ್ಮಿಕರು. ಅವರಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಸಂಬಳ, ಸೌಲಭ್ಯಗಳು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯಾಕೂಬ್‌ರವರು ತನ್ನ ಜೊತೆ ಕಾರ್ಮಿಕರಾಗಿ ದುಡ್ಡಿಯುತ್ತಿರುವವರನ್ನು ಗುರುತಿಸಿ ಅವರಿಗೆ ದೀಪಾವಳಿ ಕಿಟ್, ಸನ್ಮಾನ ಮಾಡುತ್ತಿರುವುದು ಮಾದರಿಯಾಗಿದೆ ಎಂದರು. ಇನ್ನೋರ್ವ ಅತಿಥಿ ಕಡಬ ಠಾಣಾ ಸಬ್‌ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್‌ರವರು ಮಾತನಾಡಿ, ಈಗ ದುಡಿಯುವ ಕಾರ್ಮಿಕರು ಕಡಿಮೆಯಾಗುತ್ತಿದ್ದಾರೆ. ಎಲ್ಲರೂ ಪೇಟೆ, ಪಟ್ಟಣಗಳಿಗೆ ಕೆಲಸಕ್ಕೆ ಹೋಗಲು ಆಸಕ್ತರಾಗುತ್ತಿದ್ದಾರೆ. ಇದರಿಂದಾಗಿಯೇ ತೋಟ, ಗದ್ದೆ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ತನ್ನ ಜೊತೆಗೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಯಾಕೂಬ್‌ರವರು ಮಾಡುತ್ತಿರುವ ಸೇವೆ ದೇಶಕ್ಕೆ ಮಾದರಿ ಎಂದರು.

ಅಬೂಬಕ್ಕರ್ ಸಅದಿಯವರು ಮಾತನಾಡಿ, ಯಾಕೂಬ್ ಹಾಗೂ ಅವರ ಸಹೋದರರು ಪರೋಪಕಾರಿಗಳಾಗಿದ್ದಾರೆ. ಯಾವುದೇ ಕೆಲಸ ಹೇಳಿದರೂ ಹಗಲು, ರಾತ್ರಿ ಎನ್ನದೇ ಬಂದು ನಿರ್ವಹಿಸುತ್ತಿದ್ದರು. ತನ್ನೊಂದಿಗೆ ಹಲವು ವರ್ಷ ಕಾರ್ಮಿಕರಾಗಿ ಕೆಲಸ ಮಾಡಿದ್ದ ಅಜ್ಜಿಯೋರ್ವರು ಅನಾರೋಗ್ಯಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಅವರ ಮನೆಗೆ ಆಹಾರ ಸಾಮಾಗ್ರಿ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ. ಅಲ್ಲದೇ ಆಕೆಯನ್ನು ಮನೆಗೆ ಕರೆಸಿಕೊಂಡು ತನ್ನ ಮನೆಯವರ ಜೊತೆಗೆ ಬಿಸಿ ನೀರಿನಿಂದ ಸ್ನಾನ ಮಾಡಿಸಿ ಅಗತ್ಯ ಸಾಮಾಗ್ರಿಗಳನ್ನೂ ನೀಡುವ ಸೇವೆ ಮಾಡಿದ್ದಾರೆ. ಅವರ ಈ ಗುಣಗಳು ಎಲ್ಲರಿಗೂ ಮಾದರಿ ಎಂದರು. ಕೊಲ ಗ್ರಾ.ಪಂ.ಮಾಜಿ ಅಧ್ಯಕ್ಷ ಫಲೂಲುದ್ದೀನ್ ಹೇಂತಾರು, ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೈನ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ರಾಮಕುಂಜ ಗ್ರಾ.ಪಂ.ಮಾಜಿ ಸದಸ್ಯ ಅಬ್ದುಲ್ ರಹಿಮಾನ್, ನಾಗೇಶ್ ತಾವೂರು, ಸುಭಾಷ್ ರೈ ಕಲಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ನಝೀರ್ ಕೊಲ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಯಾಕೂಬ್‌ರವರು ಸಹಕರಿಸಿದರು.

ನೇಮಣ್ಣ ಪೂಜಾರಿಯವರಿಗೆ ಸನ್ಮಾನ:
ಸುಮಾರು 30 ವರ್ಷಗಳ ಕಾಲ ಕಾರ್ಮಿಕರಾಗಿ ದುಡಿದ ನೇಮಣ್ಣ ಪೂಜಾರಿಯವರಿಗೆ ಶಾಲು,ಹಾರ, ಫಲಪುಷ್ಪ ನೀಡಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸುಮಾರು 25ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ದೀಪಾವಳಿ ಕಿಟ್ ನೀಡಿ ಗೌರವಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.