HomePage_Banner
HomePage_Banner
HomePage_Banner

ಇರ್ದೆ ಬಲ್ಯಂದ್ರ ಗಯದಲ್ಲಿ ಕಣ್ಮರೆಯಾದ ವ್ಯಕ್ತಿಯ ಮೃತ ದೇಹ ಪತ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇರ್ದೆ ಗ್ರಾಮದ ದೂಮಡ್ಕ ಸಮೀಪ ನೆಲ್ಯಾರ್ಣೆ ಬಲ್ಯಂದ್ರ ಗಯದಲ್ಲಿ ಕಣ್ಮರೆಯಾದ ವ್ಯಕ್ತಿಯ ಮೃತ ದೇಹ ನ.16ರಂದು ಬೆಳಿಗ್ಗೆ ಪತ್ತೆಯಾಗಿದೆ.

ಆರ್ಲಪದವು ನಿವಾಸಿ ನಾರಾಯಣ ಗೌಡ (48 ವ)ರವರು ನೀರಿನಲ್ಲಿ ಕಣ್ಮರೆಯಾಗಿ ಮೃತಪಟ್ಟವರು. ಅವರು ನ.೧೪ರಂದು ಸಂಜೆ ನೆಲ್ಯಾರ್ಣೆ ಬಲ್ಯಂದ್ರ ಗಯದ ಸಮೀಪ ಹೊಳೆಯ ಭಾಗದಲ್ಲಿರುವ ಸೌದೆಯನ್ನು ದಡಕ್ಕೆ ಸೇರಿಕೊಂಡು ಸಂಗ್ರಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಹೊಳೆಯಲ್ಲಿ ಕಣ್ಮರೆಯಾಗಿದ್ದರು. ರಾತ್ರಿ ವೇಳೆ ಸಂಪ್ಯ ಪೊಲೀಸರು ಮತ್ತು ಸ್ಥಳೀಯರು ಹುಡುಕಾಡಿದರೂ ನಾರಾಯಣ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ನ.15ರಂದು ಬೆಳಿಗ್ಗೆ ನೆಲ್ಯಾರ್ಣೆ ಬಲ್ಯಂದ್ರ ಗಯದ ಸುಮಾರು 150 ಮೀಟರ ದೂರದದಲ್ಲಿ ನಾರಾಯಣ ಅವರ ಮೃತ ದೇಹ ಪತ್ತೆಯಾಗಿತ್ತು. ಬಳಿಕ ಮೃತ ದೇಹವನ್ನು ಪುತ್ತೂರು ಸರಕಾರಿ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತರ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು. ಮೃತರ ಪತ್ನಿ ಜ್ಯೋತಿ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕಕೊಂಡಿದ್ದಾರೆ. ಮೃತರು ಪತ್ನಿ ಜ್ಯೋತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮನೆಗೆ ಸೌದೆ ಸಂಗ್ರಹ ಮಾಡುತ್ತಿದ್ದ ನಾರಾಯಣ ಗೌಡ
ನ.14ರಂದು ನಾರಾಯಣ ಗೌಡರು ಮೀನು ಹಿಡಿಯಲು ಹೊಳೆ ಬದಿಗೆ ಬಂದಿದ್ದರು ಎಂದು ಪ್ರಚಾರ ಆಗಿತ್ತು. ಆದರೆ ನಾರಾಯಣ ಗೌಡ ಅವರು ಹೊಳೆಯ ಬದಿಯಿಂದ ನೀರಿನಲ್ಲಿ ಬಂದು ಸಿಲುಕಿಗೊಂಡ ಸೌದೆಯನ್ನು ಸಂಗ್ರಹಿಸಿ ಮನೆಗೆ ಒಯ್ಯುತ್ತಿದ್ದರು ಎಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ನೀರಿನಲ್ಲಿ ಬಂದ ಸೌದೆಯನ್ನು ಎಳೆಯುತ್ತಿದ್ದ ವೇಳೆ ಅವರು ಆಕಸ್ಮಿಕವಾಗಿ ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.