HomePage_Banner
HomePage_Banner
HomePage_Banner

ಕೊಂಬಾರು : ವಿಪರೀತ ರಕ್ತಸ್ರಾವ ಬಾಣಂತಿ ಸಾವು

Puttur_Advt_NewsUnder_1
Puttur_Advt_NewsUnder_1

ಕೊಂಬಾರು : ವಿಪರೀತ ರಕ್ತಸ್ರಾವ ಬಾಣಂತಿ ಸಾವು

ಕಡಬ,  ಹೆರಿಗೆಯ ಬಳಿಕ ವಿಪರೀತ ರಕ್ತಸ್ರಾವವಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಕೊಂಬಾರು ಗ್ರಾಮದ ಮಣಿಬಾಂಢ ಎಂಬಲ್ಲಿ ನ.15ರಂದು ನಡೆದಿದೆ.
ಕೊಂಬಾರು ಗ್ರಾಮದ ಮಣಿಬಾಂಢ ಪೆರುಂದೋಡಿ ನಿವಾಸಿ ಬಾಲಕೃಷ್ಣ ಎಂಬವರ ಪತ್ನಿ ಸುನೀತಾ (35ವ.) ಎಂಬವರು ಮೃತಪಟ್ಟ ಮಹಿಳೆ. ಸುನೀತಾ ಅವರು ನ.15 ರಂದು ಮಧ್ಯಾಹ್ನದ ವೇಳೆ ಅವರ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ವಿಪರೀತ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆ ತಲುಪಿದ ಕೆಲ ಹೊತ್ತಿನಲ್ಲಿ ಸುನೀತಾ ಅವರು ಮೃತಪಟ್ಟಿದ್ದರು. ವಿಶೇಷ ಎಂದರೆ ಸುನಿತಾ ಅವರಿಗೆ ಇದು 9ನೇ ಹೆರಿಗೆಯಾಗಿದ್ದು, ಅದರಲ್ಲಿ ಎರಡು ಮಕ್ಕಳು ಅವಧಿಪೂರ್ವ ಹೆರಿಗೆಯಿಂದ ಮೃತಪಟ್ಟಿವೆ. ಪ್ರಸ್ತುತ ಅವರಿಗೆ 5 ಗಂಡು ಹಾಗೂ 2 ಹೆಣ್ಣು ಮಕ್ಕಳಿದ್ದಾರೆ. ಸುನೀತಾ ಅವರು ಕಡಬ ನಿವಾಸಿಯಾಗಿದ್ದು, ಅವರನ್ನು ಕೊಂಬಾರು ಮಣಿಬಾಂಢಕ್ಕೆ ಮದುವೆ ಮಾಡಿ ಕೊಡಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.