HomePage_Banner
HomePage_Banner
HomePage_Banner

ಬನ್ನೂರು ಶಿವಪಾರ್ವತಿ ಮಂದಿರದಲ್ಲಿ ದೀಪಾವಳಿ ಆಚರಣೆ – ಗೋ ಪೂಜೆಯಲ್ಲಿ ಪಾಲು ಪಡೆದ ಭಕ್ತರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ಆಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರದಲ್ಲಿ ನ.15ರಂದು  ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಇದರೊಂದಿಗೆ ದೀಪಾವಳಿ ವಿಶೇಷ ಗೋ ಪೂಜೆ ಮಡಲಾಯಿತು. ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ ಭಕ್ತರೆಲ್ಲರಿಗೂ ಗೋ ಪೂಜೆಗೆ ಅವಕಾಶ ಕಲ್ಪಿಸಿಕೊಡಲಾಯಿತು.
ಮಂದಿರದ ಅರ್ಚಕ ರಘುರಾಮ ಭಟ್ ಅವರು ಆರಂಭದಲ್ಲಿ ಗೋಪೂಜೆ ನೆರವೇರಿಸಿದರು. ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಭಕ್ತರು ಸರದಿ ಸಾಲಿನಲ್ಲಿ ನಿಂತು ತಾವೆ ಸ್ವತಃ ಗೋವಿಗೆ ಹೊದ್ಲು, ಬಾಳೆಹಣ್ಣು ನೀಡಿ ಆರತಿ ಬೆಳಗಿಸಿದರು. ಬಳಿಕ ಮಂದಿರಲ್ಲಿ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮೋಹಿನಿ ವಿಶ್ವನಾಥ ಗೌಡ, ಗೌರಿ ಬನ್ನೂರು, ಹಿರಿಯರಾದ ಸೇಷಪ್ಪ ಪೂಜಾರಿ, ಚಂದ್ರಶೇಖರ್, ಮೋಹನ್ ಜೈನ್, ಮಂದಿರದ ಕಾರ್ಯದರ್ಶಿ ದಯಾನಂದ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.