HomePage_Banner
HomePage_Banner
HomePage_Banner

ಪೆರುವಾಯಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದಿಂದ 5ನೇ ವರ್ಷದ ಗೋಪೂಜೆ, ಭಜನಾ ಸೇವೆ ಹಾಗೂ ಕಾರ್ತಿಕ ಪೂಜೆ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಇದರ ಆಶ್ರಯದಲ್ಲಿ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ 5ನೇ ವರ್ಷದ ಗೋಪೂಜೆ, ಭಜನಾ ಸೇವೆ ಹಾಗೂ ಕಾರ್ತಿಕ ಪೂಜೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ, ವಕೀಲರಾದ ಪ್ರಸಾದ್ ಬಿ.ಸಿ ರೋಡ್ ರವರು ಗೋವಿನ ಮಹತ್ವದ ಬಗ್ಗೆ ಬೌದ್ಧಿಕ್ ನೀಡಿದರು. ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಪ್ರಧಾನ ಕಾರ್ಯದರ್ಶಿ ಚರಣ್ ಕಾಪುಮಜಲು ಸಂಘಟನೆಯ ಕಾರ್ಯಚಟುವಟಿ ಬಗ್ಗೆ ಮಾತನಾಡಿದರು.

ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷ ಮಂಜುನಾಥ ಆಚಾರ್ಯ, ಅಧ್ಯಕ್ಷ ಶೇಖರ ಪೂಜಾರಿ, ಮಾತೃ ಶಕ್ತಿ ಅಧ್ಯಕ್ಷೆ ತುಳಸಿ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು. ಶಂಕರ ನಾರಾಯಣ ಮೂರ್ತಿ ವೈದಿಕ ಕಾರ್ಯಕ್ರಮ ನಿರ್ವಹಿಸಿದರು. ವರ್ಷಿತಾ ಆಚಾರ್ಯ ಪ್ರಾರ್ಥನೆ ಮಾಡಿದರು. ಬಜರಂಗದಳ ವಿಟ್ಲ ಪ್ರಖಂಡದ ಪ್ರಮುಖರಾಗಿರುವ  ಯತೀಶ್ ಪೆರುವಾಯಿ ಸ್ವಾಗತಿಸಿ, ಸಂಚಾಲಕ ಮೋಕ್ಷಿತ್ ಪೆರುವಾಯಿ ವಂದಿಸಿದರು.
ನಾಗೇಶ್ ಮಾಸ್ತರ್  ಕೊಲ್ಲತ್ತಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. 
ಸನ್ಮಾನ
ಭಜನಾ ಸೇವೆಯನ್ನು ಮಾತೆಯರು ಮಾಡಿದರು ಹಾಗೂ ಈ ಸಭಾ ವೇದಿಕೆಯಲ್ಲಿ ಕೋವಿಡ್- 19 ವಿರುದ್ಧ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಪೆರುವಾಯಿ ಗ್ರಾಮದಲ್ಲಿ  ಕೋವಿಡ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಾದ ರೇವತಿ ನಾರಾಯಣ ನಾಯ್ಕ ಕಡೆoಬಿಲ,  ಸೌಮ್ಯ ವಸಂತ ಪುರುಷ ಓಣಿಬಾಗಿಲು, ಬೇಬಿ ಬಾಲಕೃಷ್ಣ ಓಣಿಬಾಗಿಲು ಹಾಗೂ ಸುರೇಖಾ  ಸದಾನಂದ ಶೆಟ್ಟಿ ದರ್ಖಾಸು ಇವರನ್ನು ಶಾಲು ಹಾಕಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.