HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ಮತ್ತೆ ಮಾರುತಿ ಓಮ್ನಿ ಕಳವು ಪ್ರಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಕೆಲವು ವಾರದೊಳಗೆ ಮಾರುತಿ ಕಾರು, ಎರಡು ಮಾರುತಿ ಓಮ್ನಿ ಕಳವಿನ ಬೆನ್ನಲ್ಲೇ ಇದೀಗ ನ.14ರಂದು ಇನ್ನೊಂದು ಮಾರುತಿ ಓಮ್ನಿ ಕಳವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಭುವನೇಂದ್ರ ಕಲ್ಯಾಣ ಮಂಟಪದ ಹಿಂದುಗಡೆ ಮೋಹನ್ ಗ್ಯಾರೇಜ್ ಬಳಿ ನಿಲ್ಲಿಸಿದ್ದ ಕಾಮತ್ ಸ್ವೀಟ್ ಸ್ಟಾಲ್ ಹೊಂದಿರುವ ಮಂಜುನಾಥ್ ಕಾಮತ್ ಎಂಬವರ ಮಾಲಕತ್ವದ ಮಾರುತಿ ಓಮ್ನಿ(ಕೆ.ಎ21 ಪಿ 2286) ಕಳವಾಗಿದೆ. ಅವರು ಬೆಳಿಗ್ಗೆ ಮೋಹನ್ ಗ್ಯಾರೇಜ್ ಬಳಿ ತಮ್ಮ ಮಾರುತಿ ಓಮ್ನಿ ಪಾರ್ಕ್ ಮಾಡಿದ್ದರು. ರಾತ್ರಿ ವೇಳೆ ಅವರು ಹೋಗಿ ನೋಡಿದಾಗ ಅಲ್ಲಿ ಮಾರುತಿ ಓಮ್ನಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Suraj

    ಪುತ್ತೂರು ಪೇಟೆ ಹಾಗು ಪ್ರಮುಖ ಜಾಗದಲ್ಲಿ ಸಿಸಿಟಿವಿ ಅಳವಡಿಸಿದರೆ ಇಂತಹಾ ಘಟನೆ ಗಳನ್ನು ಸುಲಭವಾಗಿ ಭೇದಿಸಬಹುದು. ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.