HomePage_Banner
HomePage_Banner
HomePage_Banner

ಸವಣೂರು: ದಲಿತ ಸಂಘರ್ಷ ತಾಲೂಕು ಸಮಿತಿ ಸಭೆ- ದಲಿತ ಸಂಘರ್ಷ ಸಂಸ್ಥಾಪಕ ಸದಸ್ಯ ಜಯಣ್ಣ ಚಿತ್ರದುರ್ಗಾ ರಿಗೆ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1


ಸವಣೂರು: ದಲಿತ ಸಂಘರ್ಷ ತಾಲೂಕು ಸಮಿತಿ ಸಭೆ- ದಲಿತ ಸಂಘರ್ಷ ಸಂಸ್ಥಾಪಕ ಸದಸ್ಯ ಜಯಣ್ಣ ಚಿತ್ರದುರ್ಗಾ ರಿಗೆ ಶ್ರದ್ಧಾಂಜಲಿ ಸಭೆ ಪುತ್ತೂರು:ಕರ್ನಾಟಕ ದಲಿತ ಸಂಘರ್ಷ ತಾಲೂಕು ಶಾಖೆ ಸಂಘರ್ಷ ಪುತ್ತೂರು, ಇದರ ವತಿಯಿಂದ ದಸಂಸ ಸಂಸ್ಥಾಪಕ ಸದಸ್ಯರು ಮಾಜಿ ರಾಜ್ಯ ಸಂಚಾಲಕರೂ ಆಗಿದ್ದ ಹಿರಿಯ ನಾಯಕ “ಎಂ ಜಯಣ್ಣ ಚಿತ್ರದುರ್ಗ” ಇವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ತಾಲೂಕು ಸಮಿತಿ ಸಭೆಯನ್ನು ತಾಲೂಕು ಸಂಚಾಲಕರಾದ ಗಣೇಶ್ ಗುರಿಯಾನ ಇವರ ಅಧ್ಯಕ್ಷತೆಯಲ್ಲಿ ಸವಣೂರಿನಲ್ಲಿ ನ 15ರಂದು ನಡೆಯಿತು.

ಅಗಲಿದ ನಾಯಕರಿಗೆ ಮೌನ ಆಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಹೊಸ ಗ್ರಾಮ ಸಮಿತಿಗಳ ರಚನೆ, ತಳ ಮಟ್ಟದಲ್ಲಿ ಸಂಘಟನೆಯ ಬಲವರ್ಧನೆ, ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಮಹಾನಾಯಕ ಧಾರಾವಾಹಿಯ ಫ್ಲೇಕ್ಸ ಹಾಕುವ ಬಗ್ಗೆ ಚರ್ಚಿಸಲಾಯಿತು. ಕಡಬ ತಾಲೂಕು ಸಂಚಾಲಕರಾದ ಉಮೇಶ್ ಕೋಡಿಂಬಾಳ, ಪುತ್ತೂರು ತಾಲೂಕು ಸಂಘಟನಾ ಸಂಚಾಲಕರುಗಳಾದ ಬಾಬು ಸವಣೂರು ,ವಿಶ್ವನಾಥ್ ಪುಣ್ಚತ್ತಾರ್ ,ನಾಗೇಶ್ ಕುರಿಯ,ಪ್ರಮೀಣ್ ಪಾಪೆಮಜಲ್,ಮೀನಾಕ್ಷಿ ಬಂಬಿಲ ,ಚೆನ್ನು ಮಾಂತುರು, ಕಡಬ ತಾಲೂಕು ಸಂಘಟನಾ ಸಂಚಾಲಕರುಗಳಾದ ಪುಟ್ಟಣ್ಣ ತೋಟಂತಿಲ ,ಸದಾಶಿವ ಪುಣ್ಚತ್ತಾರ್ ಹಾಗೂ ಗೀತಾಗಣೇಶ್ ಗುರಿಯಾನ ಮುಂತಾದವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.