HomePage_Banner
HomePage_Banner
HomePage_Banner

ಪಿ.ಬಿ.ಹಸನ್ ಹಾಜಿ ಯುನಿಟಿರವರಿಗೆ ಪುತ್ತೂರು ಎಪಿಎಂಸಿ ಅಡಿಕೆ ವರ್ತಕರ ಸಂಘದಿಂದ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನ. 15 ರಂದು ನಿಧನರಾದ ಎಪಿಎಂಸಿ ಪ್ರಾಂಗಣದ ಅಡಿಕೆ ವರ್ತಕರಾದ ಪಿ.ಬಿ.ಹಸನ್ ಹಾಜಿ ಯುನಿಟಿರವರಿಗೆ ಪುತ್ತೂರು ಎಪಿಎಂಸಿ ಅಡಿಕೆ ವರ್ತಕರ ಸಂಘದಿಂದ ನ 16 ರಂದು ಶ್ರದ್ಧಾಂಜಲಿ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.
 
ಎಪಿಎಂಸಿ ಪ್ರಾಂಗಣದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಕರಾವಳಿ ಟ್ರೆಡರ್ಸ್ ಮಾಲಕ ರತ್ನಾವರ್ಮ ಹೆಗ್ಡೆ ರವರು ವಹಿಸಿದ್ದರು. ಪುತ್ತೂರು ಎಪಿಎಂಸಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲುಗುತ್ತುರವರು ಮಾತನಾಡಿ ಹಸನ್ ಹಾಜಿರವರು ಅಡಿಕೆ ವರ್ತಕರಾಗಿ, . ನಮ್ಮ ಸಂಘದ ಸದಸ್ಯರಾಗಿ. ಸದಾ ಅಡಿಕೆ ವರ್ತಕರ ಹಿತ ಚಿಂತಕ ರಾಗಿದ್ದರು. ಅವರ ಅಗಲುವಿಕೆ ತುಂಬಾ ನೋವು ತಂದಿದೆ ಎಂದರು . ಪುತ್ತೂರು ಎಪಿಎಂಸಿ ವರ್ತಕರ ಪ್ರತಿನಿಧಿ ಶಕೂರ್ ಹಾಜಿರವರು ಮಾತನಾಡಿ ಹಲವು ಸಂಘ, ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಹಸನ್ ಹಾಜಿಯವರು ಎಲ್ಲರ ಪ್ರೀತಿ ವಿಶ್ವಾಸದ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಸಂಘದ ಸದಸ್ಯರಾದ ಎಂ.ಆರ್.ಜಯಕುಮಾರ್ ರೈ, ಆನಂದ ಉಡುಪರವರುಗಳು ಮಾತನಾಡಿದರು. ಸಭೆಯಲ್ಲಿ ಎಲ್ಲಾ ಅಡಿಕೆ ವರ್ತಕರು ಭಾಗವಹಿಸಿದ್ದರು. ಹಸನ್ ಹಾಜಿರವರ ನಿಧನಕ್ಕೆ ಎಪಿಎಂಸಿ ಪ್ರಾಂಗಾಣದ ಎಲ್ಲ ಅಡಿಕೆ ವರ್ತಕರು ಅಂಗಡಿಗಳನ್ನು 30 ನಿಮಿಷಗಳ ಕಾಲ ಬಂದ್ ಮಾಡಿ ಸಂತಾಪ ಸೂಚಿಸಿದರು. .

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.