HomePage_Banner
HomePage_Banner
HomePage_Banner

ಹಿರಿಯ ಕಾಂಗ್ರೆಸ್ಸಿಗ ಕುಂಬ್ರ ಬಾಲಕೃಷ್ಣ ರೈ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ರಮನಾಥ ರೈ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿರಿಯ ಕಾಂಗ್ರೆಸ್ ಮುಖಂಡ ಒಳಮೊಗ್ರು ಗ್ರಾಪಂ ಮಾಜಿ ಸದಸ್ಯ ಕುಂಬ್ರ ಬಾಲಕೃಷ್ಣ ರೈ ಅವರ ಮನೆಗೆ ಮಾಜಿ ಸಚಿವ ರಮನಾಥ ರೈ ಭೇಟಿ ನೀಡಿ ಬಾಲಕೃಷ್ಣ ರೈ ಯವರ ಆರೋಗ್ಯ ವಿಚಾರಿಸಿದರು.

ಕಳೆದ ಹಲವು ತಿಂಗಳಿಂದ ಅನಾರೋಗ್ಯ ಪೀಡಿತರಾಗಿ ಮನೆಯಲ್ಲೇ ಇರುವ ಬಾಲಕೃಷ್ಣ ರೈಗಳು ರಮನಾಥ ರೈ ಅವರ ದೊಡ್ಡ ಅಭಿಮಾನಿಯೂ ಹೌದು. ತೀರಾ ಅನಾರೋಗ್ಯದಿಂದ ಇರುವ ಬಗ್ಗೆ ಮಾಹಿತಿ ತಿಳಿಸಿದ ಮಾಜಿ ಸಚಿವರು ನ.16ರಂದು ಸಂಜೆ ಅವರ ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಜಿಪಂ ಸದಸ್ಯ ಎಂ ಎಸ್ ಮಹಮ್ಮದ್ , ಮಾಜಿ ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಕಾಂಗ್ರೆಸ್ ಮುಖಂಡರುಗಳಾದ ರೋಶನ್ ರೈ ಬನ್ನೂರು, ರವಿಪ್ರಸಾದ್ ಶೆಟ್ಟಿ ಬನ್ನೂರು, ಲತೀಫ್ ಕುಂಬ್ರ, ಹನೀಫ್ ಪುಂಚತ್ತಾರು, ಒಳಮೊಗ್ರು ಗ್ರಾಮಸಮಿತಿ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ ಸೇರಿದಂತೆ ಹಲವು ಮಂದಿ ಮುಖಂಡರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.