HomePage_Banner
HomePage_Banner
HomePage_Banner
HomePage_Banner

ಪುತ್ತೂರು- ಕಾವು ಲಯನ್ಸ್ ಕ್ಲಬ್ ವತಿಯಿಂದ ದೀಪಾವಳಿ ಮತ್ತು ಮಕ್ಕಳ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎರಡು ವರ್ಷದಲ್ಲಿ ಕಾವು ಪುತ್ತೂರು ಲಯನ್ಸ್ ಕ್ಲಬ್‌ನಿಂದ 50 ಲಕ್ಷಕ್ಕೂ ಮಿಗಿಲಾದ ಸೇವಾ ಕಾರ್ಯ: ಹೇಮನಾಥ ಶೆಟ್ಟಿ

ಪುತ್ತೂರು: ಪುತ್ತೂರು-ಕಾವು ಲಯನ್ಸ್ ಕ್ಲಬ್ ಇದರ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಕಾರ್ಯಕ್ರಮ ನ. ೧೪ ರಂದು ಕಾವು ಆದಿಸ್ ಇಂಡಸ್ಟ್ರೀಯ ವಠಾರದಲ್ಲಿ ನಡೆಯಿತು.

ದೀಪಾವಳಿ ಪ್ರಯುಕ್ತ ಗಣಹೋಮ, ಸತ್ಯನಾರಾಯಣಪೂಜೆ , ಗೋಪೂಜೆ ಹಾಗೂ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮಕ್ಕಳ ದಿನಬಾಚರಣೆಯೂ ನಡೆಯಿತು. ಕಳೆದ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಭಾಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಪುತ್ತೂರು-ಕಾವು ಲಯನ್ಸ್ ಕ್ಲಬ್ ಕಳೆದ ಎರಡು ವರ್ಷಗಳಿಂದ ಸುಮಾರು ೫೦ ಲಕ್ಷಕ್ಕೂ ಮಿಕ್ಕಿ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿದೆ.ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್‌ಗಳ ಪ್ಯಕಿ ೩೧೭ ಡಿ ಯಲ್ಲಿ ಟಾಪ್ ಟೆನ್ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಕ್ಲಬ್‌ನ ಸದಸ್ಯರ ನಿಸ್ವಾರ್ಥ ಸೇವೆಯು ಗ್ರಾಮಸ್ಥರ ಸಹಕಾರಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಪುತ್ತೂರು ಕಾವು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಪವನ್‌ರಾಮ ಮಾತನಾಡಿ ಉತ್ತಮ ಕಾರ್ಯವನ್ನು ನಡೆಸಲು ಗ್ರಾಮದ ಪ್ರತೀಯೊಬ್ಬರೂ ನಮ್ಮ ಜೊತೆ ಸಹಕರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಯೋಚನೆಯೂ ನಮ್ಮ ಮುಂದಿದೆ ಎಂದು ಹೇಳಿದರು. ವೇದಿಕೆಯಲ್ಲಿ ನೆಟ್ಟಣಿಗೆ ಮುಡ್ನೂರು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ಲಬ್‌ನ ಸದಸ್ಯರಾದ ಶರತ್‌ಕುಮಾರ್ ರೈ, ಸುಬ್ರಾಯ ಬಲ್ಯಾಯ, ಮೋನಪ್ಪಪೂಜಾರಿ ಕೆರೆಮಾರು, ರಾಮದಾಸ್ ರೈ ಮದ್ಲ, ಅಮ್ಮು ರೈ ಅಂಕೊತ್ತಿಮಾರ್, ಜಯಪ್ರಕಾಶ್ ರೈ ನೂಜಿಬೈಲು, ದಿನೇಶ್ ಗೌಡ ಅಮ್ಚಿನಡ್ಕ, ಜಗನ್ನಾಥ್ ರೈ ಗುತ್ತು, ಜಗನ್ನಾಥ ರೈ ಡೆಂಬಾಳೆ, ಗೋಪಾಲಕೃಷ್ಣ ಪಾಟಾಳಿ, ಕೃಷ್ಣರಾಜ್, ಜಯರಾಮ ರೈ ಅಂಕೊತ್ತಿಮಾರ್, ರವೀಂದ್ರಪೂಜಾರಿ ಮಂಜಕೊಟ್ಯ, ಪವನ್ ಅಮ್ಚಿನಡ್ಕ, ಉಪಸ್ಥಿತರಿದ್ದರು.ಕಾವು ದಿವ್ಯನಾಥ ಶೆಟ್ಟಿ ಸ್ವಾಗತಿಸಿ, ದೇವಣ್ಣ ರೈ ಮದರ್ ಪಳ್ಳ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ-
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಕಾವು ಬುಶ್ರಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ ವೈಷ್ಣವಿ, ಬಾಸಿಸ್, ಪ್ರೀತಿ ಸಿ, ಸೃಷ್ಠಿ ಆಳ್ವ, ದಿಶಾ ಹಾಗೂ ಶಾರದಾ ವಿದ್ಯಾಲಯ ಮಂಗಳೂರಿನ ಆರಾಧ್ಯ ಶೆಟ್ಟಿಯವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಾವಯವ ಗೊಬ್ಬರದ ಬಗ್ಗೆ ಮೆಚ್ಚುಗೆ –
ಕಾವು ದಿವ್ಯನಾಥ ಸೆಟ್ಟಿಯವರ ಸ್ಲರಿ ಸಾವಯವ ಗೊಬ್ಬರ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ರೋಟರಿ ಕ್ಲಬ್‌ನ ಉಪರಾಜ್ಯಪಾಲ, ಇಂಜನಿಯರ್ ಸಚ್ಚಿದಾನಂದ ರವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯ ಜೊತೆಗೆ ಉಪಕಸುಬಾಗಿ ಸ್ಲರಿಯನ್ನು ಉತ್ಪಾದನೆ ಮಾಡುವ ಮೂಲಕ ಕೃಷಿಯಲ್ಲಿ ಸಾವಯವ ಗೊಬ್ಬರದ ಬಳಕೆಯ ಬಗ್ಗೆ ಜನರಿಗೆ ತಿಳಿಯಪಡಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾನವ ಹಕ್ಕುಗಳ ಆಯೋಗದ ಮಾಜಿ ಮುಖ್ಯಸ್ಥೆ ಜಯಂತಿ ಆರ್ ಮಾತನಾಡಿ ಕಾವು ಹೇಮನಾಥ ಶೆಟ್ಟಿ ಕುಟುಂಬದ ರಾಜಕೀಯ, ಧಾರ್ಮಿಕ , ಕೃಷಿ ಮತ್ತು ಶೈಕ್ಷಣಿಕ , ಸಾಮಾಜಿಕ ಕ್ಷೇತ್ರದ ಸೇವೆಯನ್ನು ಶ್ಲಾಘಿಸಿದರು.ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಸಂಚಾಲಕ ಬುಶ್ರಾ ಅಬ್ದುಲ್ ಅಝೀಝ್‌ರವರು ತಮ್ಮ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಗರಿಷ್ಠ ಅಂಕಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.