HomePage_Banner
HomePage_Banner
HomePage_Banner

ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರದ ನವರಾತ್ರಿ ಲೆಕ್ಕಪತ್ರ ಮಂಡನೆ, ಅಭಿನಂದನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ನವರಾತ್ರಿ ಉತ್ಸವದ ಲೆಕ್ಕಪತ್ರ ಮಂಡನಾ ಸಭೆ ನ.15ರಂದು ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಗರ ಸಭಾ ನೂತನ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಹೆಗ್ಡೆಯವರಿಗೆ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್‌ ಮಾತನಾಡಿ, ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನವರಾತ್ರಿಯ ಪೂರ್ವಭಾವಿ ನಡೆಸಿ ಕಾರ್ಯಕ್ರಮದ ಸಿದ್ದತೆಯಲ್ಲಿರುವ ಸಂದರ್ಭದಲ್ಲಿ ಮೀಸಲಾತಿ ಪ್ರಕಟಗೊಂಡು ಅನ್ನಪೂರ್ಣೇಶ್ವರಿಯ ಅನುಗ್ರಹದಿಂದ ಅಧ್ಯಕ್ಷ ಸ್ಥಾನವು ನನ್ನ ಪಾಲಿಗೆ ಒಳಿಬಂದಿದೆ. ಕಳೆದ ಚುನಾವಣೆಯಲ್ಲಿ ತನ್ನ ಗೆಲುವಿಗೆ ಶ್ರಮಿಸಿದ ವಾರ್ಡ್ ನ ಪ್ರತಿಯೊಬ್ಬರ ಪರಿಶ್ರಮದ ಫಲವಾಗಿ ಅಧ್ಯಕ್ಷನಾಗಿ ನಿಮ್ಮ ಮುಂದೆ‌ ಬಂದಿರುತ್ತೇನೆ. ತನ್ನ ಗೆಲುವುಗೆ ಶ್ರಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.


ಚಂದ್ರಶೇಖರ ಹೆಗ್ಡೆ ಬಪ್ಪಳಿಗೆ ಮಾತನಾಡಿ, ಪಡ್ಡಾಯೂರು ಪರಿಸರದ ಜನತೆಯ ಸಹಕಾರವನ್ನು ಅವರು ಸ್ಮರಿಸಿದರು. ಭಜನಾ ಮಂದಿರದ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ನೆಲಪ್ಪಾಲು, ಅಧ್ಯಕ್ಷ ಮೋನಪ್ಪ ಪೂಜಾರಿ ನೆಲಪ್ಪಾಲು, ಕಾರ್ಯದರ್ಶಿ ನಿಖಿಲ್ ಮಾಲ್ತೊಟ್ಟು, ಅರ್ಚಕ ಸಂತೋಷ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಧುಸೂದನ ಪಡ್ಡಾಯೂರು ಸ್ವಾಗತಿಸಿದರು. ಮೋಹನ ಪಡ್ಡಾಯೂರು ಅಭಿನಂದ‌ನಾ ಭಾಷಣ ಮಾಡಿ, ವಂದಿಸಿದರು. ನವೀನ್ ನಾಕ್ ಮಾಲ್ತೊಟ್ಟು, ವಸಂತ ಪೂಜಾರಿ ನೆಲಪ್ಪಾಲು, ದಿವಾಕರ ಪೂಜಾರಿ ನೆಲಪ್ಪಾಲು, ಆನಂದ ಗೌಡ ಮೂವಪ್ಪು, ಹರಿಶ್ಚಂದ್ರ ಗೌಡ ಮೂವಪ್ಪು, ಗಣೇಶ್ ಗೌಡ ಪಡ್ಡಾಯೂರು, ಮುದ್ದು ವಿದ್ಯಾನಗರ, ನಂದ ಕುಮಾರ್, ಬಾಲಕೃಷ್ಣ ನಾಯಕ್, ವಿಶ್ವನಾಥ ನಾಐಕ್ ಮಾಲ್ತೊಟ್ಟು, ನಾಗೇಶ್ ಶೆಟ್ಟಿ ಪಡ್ಡಾಯೂರು, ಶ್ರೀಧರ ಯು.ಕೆ., ವಿ.ಎಸ್ ರಾಮಣ್ಣ ಗೌಡ, ರವೀಂದ್ರ ಮಣಿಯಾಣಿ, ರಾಧಾಕೃಷ್ಣ ನಾಐಕ್ ಪಡ್ಡಾಯೂರು, ರಾಮಣ್ಣ ಗೌಡ, ಬಾಲಕೃಷ್ಣ ಗೌಡ,‌ ಕುಮಾರ್ ನಾಯ್ಕ, ವೀಣಾ, ಹೇಮಾವತಿ ಬಳ್ಳಾಲ್, ಸುಶೀಲಾ ಪಡ್ಡಾಯೂರು, ನಳಿನಿ ನಾಐಕ್‌ ಮಾಲ್ತೊಟ್ಟು, ಶೋಭಾವತಿ ಮಾಐಕ್ ಮಾಲ್ತೊಟ್ಟು, ಯತೀಶ್, ಆಕಾಶ್, ಅನುಷ್, ಪ್ರದೀಪ್,‌ ನಮಿತ್, ಸುಜನ್, ಯಜ್ಞೇಶ್, ಅನುಷಾ ಕ್‌ ಮಾಲ್ತೊಟ್ಟು ಹಾಗೂ ಸಂತೋಷ್ ನಾಐಕ್ ಪಡ್ಡಾಯೂರು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.